ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಹೋಗುವೆ ಮನದಿ ನಿಲ್ಲೊಂದು ಘಳಿಗೆ ಸೊಲ್ಲ ಲಾಲಿಸು ಲಕ್ಷ್ಮೀವಲ್ಲಭನೆ ನೀನು ಪ ನಡುನೀರೊಳಾಡುವೆಯೊ ಅನಿಮಿಷನು ನೀನಾಗಿ ಕಡುಭಾರದಿಂದಿಳಿವ ಗಿರಿಯನೆತ್ತುವೆಯೊ ಅಡವಿಯೊಳು ಚರಿಸುವೆಯೊ ಬಗೆದು ಬೇರನು ತಿನ್ನ ಲೊಡೆಯುವೆಯೊ ಕಂಭವನು ಘನ ಮಹಿಮೆಯಿಂದ 1 ಬೇಡಿ ದೈತ್ಯನ ನೀನು ಮೂರಡಿಯ ಭೂಮಿಯನು ಕಡು ಚೆಲ್ವ ಪಾದದಿಂದದಳೆಯ ಪೋಗುವೆಯೊ ಕೊಡಲಿಯೊಳು ಭೂಭುಜರ ಸಂತತಿಯ ಕೋಪದಿಂ ಕಡಿಕೊಂಬೆ ನೀನೆಂದು ಜಗವೆಲ್ಲ ಹೊಗಳುತಿದೆ 2 ವಾರಿಧಿಯ ಕಟ್ಟುವೆಯೊ ಬೆಟ್ಟವನು ತಂದಿಕ್ಕಿ ನಾರಿಯರ ಸೇರುವೆಯೊ ಕಡು ಮಮತೆಯಿಂದ ಶ- ರೀರದೊಳು ನಾಚಿಕೆಯ ಹೊರಗಿಡುವೆಯೊ ನೀನು ವಾರುವನನೇರುವೆಯೊ ಈರೈದ ತೋರುವೆಯೊ3 ಬೆಟ್ಟದೊಳು ನಿಲ್ಲುವೆಯೊ ಕಟ್ಟುವೆಯೊ ರೊಕ್ಕವನು ಶೆಟ್ಟಗಾರನುಯೆಂದು ಪೆಸರಿಟ್ಟೆಯೊ ವರಾಹ ತಿಮ್ಮಪ್ಪನೆಂಬುದನು ದೃಷ್ಟಿಯಲಿ ನೋಡಿ ಕಿವಿಗೊಟ್ಟು ಮಾತಾಡು 4
--------------
ವರಹತಿಮ್ಮಪ್ಪ