ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಾಜ ಚಿಂತನೆ :ನೀತಿಬೋಧನೆ ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡೆ ಜಗಳವೇ ಲೇಸು ಪ ಉಂಬುಡುವುದಕಿಲ್ಲದರಸಿನೋಲಗಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ - ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು1 ಒಡನೆ ಹಂಗಿಸುವನೋಗರವನುಂಬುದಕಿಂತಕುಡಿನೀರು ಕುಡಿದುಕೊಂಡಿರುವುದೇ ಲೇಸುಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತಅಡವಿಯೊಳಗಜ್ಞಾತ ವಾಸವೇ ಲೇಸು2 ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತಹಸನಿಲ್ಲದ ಹಾಳುಗುಡಿಯೇ ಲೇಸುಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯವಸುಮತಿಯೊಳು ನಿನ್ನ ದಾಸತ್ವವೇ ಲೇಸು 3
--------------
ಕನಕದಾಸ
ಲೇಸಿನಮಾರ್ಗಕೇಳಿರೋ ಜನರುಈಸು ಲಾಲಿಸಿದರೆ ಲೇಸುಪಹಂದಿನಾಯಿ ತೃಣಗಳಲಿರುವ ದೇವನಅರಿದರೆ ಅದು ಲೇಸುಹಿಂದಾಗಿಹುದನು ಮುಂದಾಗುವುದನುಚಿಂತಿಸಿದರೆ ಅದು ಲೇಸು1ಕ್ರೂರ ಮನುಜರೊಡಗೂಡದೆ ಮೌನದಿಬೇರೆಯಿಹುದು ಅದು ಲೇಸುಪ್ರಾರಬ್ಧದ ದಶೆಯಿಂದಲಿ ಬಂದುದಕಳೆದುಕೊಂಡರೆ ಅದು ಲೇಸು2ಘೋರವಾದ ತಾಪತ್ರಯಗಳುಮನೆಸೇರದಿದ್ದಡೆ ಅದು ಲೇಸುಸಾರವ ತಿಳಿದು ವ್ಯವಹಾರದೊಳಿದ್ದುಧೀರನಾಗಿಹುದದು ಲೇಸು3ಪಾಪಿಯ ಕೂಡದೆ ಸುಜನರ ಕೂಡುತದೇವನ ಕಾಂಬುದೆ ಲೇಸುಕೋಪವು ಎಂದಿಗು ಸುಳಿಯದೆ ಶಾಂತಿಯುವ್ಯಾಪಿಸಿ ತಾನಿಹುದದು ಲೇಸು4ಪಾಪ ಪುಣ್ಯಗಳ ಗುರುವಿಗೆ ಅರ್ಪಿಸಿಬಾಳುವೆ ನಡೆಸುವುದದು ಲೇಸುಈಪರಿ ನಡೆಯ ನಡೆದು ಚಿದಾನಂದಭೂಪನಾಗುವುದತಿ ಲೇಸು5
--------------
ಚಿದಾನಂದ ಅವಧೂತರು