ನೀನಹುದೋ ಶ್ರೀ ಹರಿ
ಮುನಿಜನರ ಸಹಕಾರಿ
ಅನಾಥÀರಿಗಾಧಾರಿ
ನೀನೆವೆ ಪರೋಪರಿ ಧ್ರುವ
ಪತಿತ ಪಾವನ ಪೂರ್ಣ
ಅತಿಶಯಾನಂದ ಸುಗುಣ
ಸತತ ಸುಪಥ ನಿಧಾನ
ಯತಿ ಜನರ ಭೂಷಣ1
ಬಡವರ ನೀ ಸೌಭಾಗ್ಯ
ಪಡೆದವರಿಗೆ ನಿಜ ಶ್ಲಾಘ್ಯ
ದೃಢ ಭಕ್ತರಿಗೆ ಯೋಗ್ಯ
ಕುಡುವದೇ ಸುವೈರಾಗ್ಯ 2
ಭಾಸ್ಕರ ಕೋಟಿ ಲಾವಣ್ಯ
ಭಾಸುತಿಹ್ಯ ತಾರ್ಕಣ್ಯ
ದಾಸ ಮಹಿಪತಿ ಜನ್ಮ ಧನ್ಯ
ಲೇಸುಗೈಸಿದಿ ನಿನ್ನ ಪುಣ್ಯ 3