ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವ ಜಯದೇವ ಜಯ ಲಂಬೋದರ | ಜಯ ಶಂಭು ಸತಿಗತಿ ಪ್ರಿಯ ಸುಕುಮಾರ ಪ ಜಯತು ಜಯತೆಂಬೆ ನಿನ್ನಯ ಪದವನಾಶ್ರಯಿಸಿ | ಜಯತು ಪಾಲಿಸೋಯೆನ್ನ ಮನದಿಷ್ಟ ಸಲಿಸಿ ಅ.ಪ. ಸುರರ ಪೂಜೆಯಗೊಂಡು ಸಂತುಷ್ಟಿಗೊಳದೆ | ನರರ ಭಕ್ತಿಗೆ ಮೆಚ್ಚಿ ಧರೆಗೆ ನೀನಿಳಿದೆ || ಪರಿಪರಿ ಭಕ್ಷ್ಯ ಪಾಯಸ ಕಜ್ಜಾಯಗಳ| ವರಶುಭ ದಿನ ಚೌತಿಗುಂಬೆ ಲೇಸುಗಳ 1 ತ್ರಿಭುವನದೊಳು ಸರ್ವರಿಂದ ಸೇವೆಯನು | ವಿಭವದಿ ಕೈಗೊಳ್ಳುತ್ತೊರೆದ ಶುಭವನು || ಅಭಯವನಿತ್ತು ರಕ್ಷಿಸುವೆ ಭಕ್ತರನು | ಇಭಮುಖ ಗಣಪ ಪಾಲಿಸೊ ಭಾಗ್ಯಗಳನು 2 ಪಾದ ನೆನೆವೆ ಮನ್ಮನದಿ | ಘನ ದುರಿತವ ದೂರಪಡಿಸು ನೀ ಮುದದಿ || ಚಿನುಮಯ ಮೂರ್ತಿಯ ಪದವ ಧ್ಯಾನಿಸುವ | ಮನಕೆ ಸುಜ್ಞಾನ ಮತಿಯ ಪಾಲಿಸಯ್ಯ 3 ದಾಸರಿಗೊಡೆಯ ಗಣೇಶ್ವರ ನಿನ್ನ | ಲೇಸಿನೊಳ್ ಭಜಿಸಿ ಕೇಳುವೆ ಗುಣರನ್ನ | ದಾಸನೆಂದೆನಿಸಿ ಲೋಕದಿ ರಂಜಿಸೆನ್ನ | ದೋಷವ ತ್ಯಜಿಸನುದಿನ ಸಲಹೆನ್ನ 4 ಸಕಲ ಸುಜ್ಞಾನ ಕವಿತೆಗಳ ಮುದದಿ | ಸಖನಾಗುತೆನ್ನ ನೀ ಪೊರೆಯಯ್ಯ ದಯದಿ || ಭಕುತ ವತ್ಸಲ ಶ್ರೀನಿವಾಸನ ಪ್ರಿಯ ನೀ | ಸುಕುಮಾರ ಕುಡುಮದೊಡೆಯ ಗಜವದನ 5
--------------
ಸದಾನಂದರು
ನಿನ್ನ ನಂಬಿದೆ ಶಾರದೇ | ಭಕ್ತಿಗೆ ಮತಿ- | ಯನ್ನು ಪಾಲಿಸ ಬಾರದೇ ಪ ನಿನ್ನ ನಂಬಿದೆ ನಾನು | ಎನ್ನ ಜಿಹ್ವೆಯೊಳ್ ನೀನು | ಖಿನ್ನತ್ವಗೊಳ್ಳದೆ | ಸನ್ನುತೆ ನೆಲಸವ್ವ ಅ.ಪ ಜಡಮತಿಯನು ತ್ಯಜಿಸಿ | ನೀ ದಯದಿಂದ | ದೃಢಮತಿಯನು ಪಾಲಿಸಿ || ಕಡಲ ಶಯನ ಸೊಸೆ | ಪೊಡವಿಗಧಿಕವಾದ | ಮೃಡನ ಸ್ಮರಿಪ ಜ್ಞಾನ | ತಡೆಯದೆ ಕರುಣಿಸು 1 ತ್ವತ್ಸಂಗವನು ಪಾಲಿಸಿ | ನೀ ದಯದಿಂದ | ದುಸ್ಸಂಗವನು ಛೇದಿಸಿ || ಸತ್ಸಂಗವೆನಗಿತ್ತು | ಮತ್ಸಂಗ ನೀನಾಂತು | ತ್ವತ್ಸುಗುಣ ನುಡಿಗಳ | ಹೃತ್ಸರೋಜದೊಳಿರಿಸೆ 2 ಸನುಮತ ಪಥಗಾಣಿಸಿ | ಕಏತೆಗಳ | ಮನದಲ್ಲಿ ಸ್ಥಿರಗೊಳಿಸಿ || ಜನನ ಮರಣವೆಂಬ | (ವನ) ದೊಳಗೆನ್ನನು | ವಿನಯದಿ (ಂದಲಿ) ಪಾರ | ಗಾಣಿಸೆ ಶಾರದೆ 3 ದಾಸನೆಂದೆನಿಸೆಯೆನ್ನ | ಕೀತಿ9ಗಹಿತ | ದೋಷವ ತ್ಯಜಿಸೆ ಮುನ್ನ || ಕ್ಲೇಶಗೈವರ ಮನ | ಲೇಸಿನೊಳ್ ವಂಚಿಸಿ | ವಾಸವ ಕರುಣಿಸೆ 4 ಚಿನುಮಯಾತ್ಮಕನಿರುವ | ವೈಕುಂಠದ | ಘನತರ (ಸತ್) ಪದವಿಯ || ಪತಿ | ಪಿತ ಶ್ರೀನಿವಾಸನ | (ಅನುಯಾಯಿ) ಸೇವೆಗ | ಳೆನಗಿತ್ತು ಪಾಲಿಸೆ 5
--------------
ಸದಾನಂದರು