ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಸುತ ಬಂದ ನೋಡಿ ಭಾಸ್ಕರಕೋಟಿ ತೇಜ ಲೇಸು ಲೇಸಾಯಿತೆನ್ನ ಮನದೊಳಗೆ ಧ್ರುವ ಹೊಳೆಯುತ ಸುಳಿಯುತ ಥಳಥಳಗುಡುತ ಒಲಿಯುತ ಬಂದ ನೋಡಿ ಎನ್ನೊಳಗೆ 1 ಕರುಣ ಕವಚವ ತೊಟ್ಟು ವರಮುನಿಗಳ ಪ್ರಾಣ ಹರುಷ ಬೀರುತ ಬಂದ ತ್ವರಿತಿಲ್ಲಿಗೆ 2 ದೀನ ದಯಾಳು ಎನ್ನ ಅನಾಥ ಬಂಧು ಸ್ವಾಮಿ ಸನಾಥ ಮಾಡಲಿ ಬಂದ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದು ಕೈಗೂಡಿ ಧ್ರುವ ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ 1 ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಡ ನೆಲೆಗೊಂಡಾಯಿತು ಧನ್ಯ 2 ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು