ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಜಯ ದೇವ ಜಯ ದೇವ ಜಯ ಮಂಗಳ ಮಹಿಮ ದಯಗುಣದಲಿ ನಿಸ್ಸೀಮ ಜಯಗುರು ನಿರುಪಮ ಧ್ರುವ ಅನುಭವಕಾಗುವ ಚಂದ ಸ್ವಾನುಭವದÀ ಕಂದ ಜ್ಞಾನ ವಿಜ್ಞಾನಂದ ಘನಮಯ ನಿದ್ರ್ವಂದ್ವ ದ್ವಂದ್ವನಿರ್ದೂಂದ್ವ ತಾನೆ ತನ್ನಿಂದ ಎಂದೆಂದಿಗೆ ಬ್ಯಾರಿಲ್ಲ ದೋರುದು ನಿನ್ನಿಂದ 1 ದ್ವೈತಾದ್ವೈತಕೆ ರಹಿತಾಶ್ರಯಗುರು ನಿಜದಾತ ತ್ರೈಗುಣಾತೀತ ಶಾಂತ ನಿರ್ಗುಣ ನಿಶ್ಚಿಂತಾ ನಂತಾನಂತಕೆ ಸಂತತ ನೀನೆ ಏಕಾಂತ ಪಂಥ ಪರಮಗುಹ್ಯಾನಿಹ ಶ್ರೀ ಅವಧೂತ 2 ಸ್ವಸಂವೇದ್ಯ ನೀ ಪೂರ್ಣಋಷಿಮುನಿಗಳ ಧ್ಯಾನ ಲೇಸುಲೇಸಾಗಿಹ ಆತ್ಮನುಭವ ಖೂನ ಈಶ ನೀನೊಬ್ಬನಾಗಿಹ ಅನುದಿನ ದಾಸ ಮಹಿಪತಿ ಪ್ರಾಣ ಭಾಸ್ಕರ ಘನಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾಸ್ಕರ ಗುರುವಿನ ಭಾಸನುದಿನವಿರೆ ಆಶಿನ್ನೊಬ್ಬರದ್ಯಾಕೆ ಲೇಸಾಗಿಹ್ಯ ಘನದಯದಾಸೈನಗಿರೆ ನಾಸ್ತ್ಯೆನಗೆಂಬುವದ್ಯಾಕೆ ಧ್ರುವ ಸೂಸುತ ನಿಜ ನಿಧಾನದ ರಾಶಿರೆ ಕಾಸಿನ ಕಳವಳಿಕ್ಯಾಕೆ ವಾಸವಾಗ್ಹೆಜ್ಜೆಜ್ಜಿಗೆ ಗುರುವಿನ ಆಶ್ರಿನ್ನೊಬ್ಬರದ್ಯಾಕೆ ಗ್ರಾಸಕೆದುರಿಡುತಿರೆ ಎನ್ನೊಡೆಯ ಸೋಸಿಲೆ ಬಯಸುವದ್ಯಾಕೆ 1 ಗುರುದೈವೇ ಗುರುತಾಗಿರಲು ತಾ ಪರದೈವಗಳಿನ್ಯಾಕೆ ಶಿಖಾಮಣಿ ಇರಲು ಶರಣು ಇನ್ನೊಬ್ಬರಿಗ್ಯಾಕೆ ಕರುಣಾಮೃತ ಸುರರಸ ಮಳೆಗರೆವುತಲಿರೆ ಪರರಂಡಲೆವದ್ಯಾಕೆ ಇರುಳ್ಹಗಲೆ ಗುರುದಯ ಕವಚೆನಗಿರೆ ದುರಿತಭವ ಭಯವ್ಯಾಕೆ 2 ಇಹ್ಯಪರಕೆ ಗುರು ನಾಮವೆನಗಿರಲು ಸಾಹ್ಯಮನುಜರದ್ಯಾಕೆ ಸಹಕಾರವೆ ಸದ್ಗುರು ಮೂರ್ತಿರಲು ಸಾಯಾಸವೆನಗ್ಯಾಕೆ ಮಹಿಪತಿಸ್ವಾಮಿ ಶ್ರೀಪತಿ ಸಮರ್ಥಿರೆ ದುರ್ಮತಿಗಳ ಹಂಗ್ಯಾಕೆ ಸಹಿತ ಗುರು ತಾಯಿತಂದೆನಗಿರೆ ಬಾಹ್ಯವಿಹಿತದವನ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು