ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡಲಾಗದಿದ್ದರೆ ನುಡಿಯುವರೇನಣ್ಣ ಕಡೆಯಿಂದ ಬಾರೆಂದು ಜಡಿದಿಂದು ಪ. ದುಡುಕಿದೆವೆನ್ನುತ ಮಿಡುಕದಿರಣ್ಣಯ್ಯ ಕಡುಮುದದಿಂದಾವು ನಡೆದೇವು ಕೋಲೇಕೋಲೆ ಮುತ್ತಿನ ಕೋಲೆ ಅ.ಪ ಗುಣಯುತರೆನಿಸುವ ಹಿರಿಯ ವಂದಿಸ ಲೆನಂತಲೈ ತಂದೆವು ಮಣಿದೆವು ಹಣಗಾರರರೆಂದಲ್ಲಿ ಮಣಿಯಲು ಬರಲಿಲ್ಲ ಹಣದಾಸೆ ನಮಗಿಲ್ಲ ಕೇಳೀಸೊಲ್ಲ ||ಕೋಲೇ|| 1 ಅಣ್ಣಯ್ಯ ನಿಮಗೀ ಘನತೆಯು ಸಲ್ವುದು ಗಣ್ಯರಾದಿರಿ ನೀವು ಜಗದೊಳು ಪುಣ್ಯವಂತೆಯು ನಿಮ್ಮ ಪಡೆದಾಮಾತೆಯು ಧನ್ಯರಾದಿರಿ ನಿಮ್ಮೀಗುಣದಿಂದ ಕೋಲೆ 2 ದೋಷರಹಿತ ಶ್ರೀಶೇಷಗಿರೀಶನಾ ಕೇಶವನೊಲವೊಂದೆಮಗಿರಲಿ ಭಾಷೆಯ ಕೊಡುವೆವು ದೇಶಸೇವಕರಾವು ಲೇಸಾಗಲಿಳೆಗೆಂದು ಮನದಂದು ||ಕೋಲೆ||3
--------------
ನಂಜನಗೂಡು ತಿರುಮಲಾಂಬಾ
ತಂದೆ ನಿನ್ನೊಲುಮೆಯೊಂದೆ ಎನ್ನ ಬಯಕೆ ಪ ಬಂದ ಕಷ್ಟಗಳೆಲ್ಲ ಎನ್ನಭ್ಯುದಯಕೆ ಅ.ಪ ಆಸೂರಿಯಾದರೂ ಈ ಸೂರಿಯಾದರೂ ಏಸೂರಿಗ್ಹೋದರೂ ವಾಸಿಯಿಲ್ಲ ಕೂಸುಗಳ ಪಡೆದರೂ ಆಸೆಗಳ ತೋರಿದರೂ ಹೇಸಿಕೆ ಬೇಳಲೆದರೂ ಲೇಸಾಗಲಿಲ್ಲ 1 ಈ ವೂರಿನೈವತ್ತು ಆ ವೂರಿನೈವತ್ತು ದೇವರ್ಕಳಿಗೆ ನಾಮ ಹರಕೆ ಹೊತ್ತು ಬೇವಿನಲಿ ಸಿಹಿಯ ನೀನೀವುದೆಂದತ್ತತ್ತು ಜೀವಿತವು ಬರಿದಾಯ್ತ ಬಾಧಿಸುವುದೈಮುಪ್ಪು 2 ತಂದೆ ಗೋವಿಂದನಯ್ಯ ಒಂದುನೂರ್ವಂದನೆಯ ಇಂದರ್ಪಿಸುವೆನಯ್ಯ ಕೈಹಿಡಿಯಯ್ಯ ಕುಂದ ಕಳೆಗಾಣಿಸಯ್ಯ ಬಂಧನವ ಬಿಡಿಸಯ್ಯ ಇಂದಿರಾನಂದ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆವಳಂಜಿಸಿದವಳು ಪೇಳು ರಂಗಮ್ಮ ನಾನವಳಗಾರುಮಾಡುವೆ ನಡೆ ಕೃಷ್ಣಮ್ಮಪ.ದೂರುವಿರಾದರೆ ಮಗನ ದಾರಿಗೆ ಹೋಗದಿರಿ ಎಂದುಸಾರಿ ಕೈಯಕಡ್ಡಿಕೊಟ್ಟೆ ಜಾರೆಯರಿಗೆಸಾರಿ ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನುಆರಿಗೆ ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ 1ಇದ್ದರಿರಲಿ ಕೂಸಿನ ಆಡುವಾಟಕೊಪ್ಪಿದರೆಎದ್ದು ಹೋದರೆ ಹೋಗಲಿ ಆವಪಳ್ಳಿಂದಕದ್ದು ತಿಂದನೆಂದಾವಾಗ ಕೂಗುವ ಕಾರಣವೇನೊಮುದ್ದೆ ಬೆಣ್ಣೆ ಕೈಯಲಿತ್ತರೊಲ್ಲದೆ ಚೆಲ್ಲುವೆ ಕಂದ 2ಏಸುಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆಕೂಸೆ ನಿನ್ನ ಕಂಡಸೂಯೆಬಡುವರಳಿಯಲಮ್ಮದಾಸರಿಗೆ ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ 3
--------------
ಪ್ರಸನ್ನವೆಂಕಟದಾಸರು