ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸುಪರಿ ಈಸಬೇಕೋ ಶ್ರೀಶದಾಸನೇ ಮತ್ತೂರೇಶ ಭವಸಾಗರದಿ ಏಸುಪರಿ ಈಸಬೇಕೋ ಪ ಕೂಸಿನಂಕದಿ ಬಾವು ಘಾಸಿಸುವ ಜ್ವರತಾಪನೋಸರಿಸಲೇಶ ಸಮಯದಿಯೊದಗಲು ಲೇಶವಾದರು ಮಗುವಿನಾಸೆ ಇರದಿರೆ ಪ್ರಾಣೇಶನೇ ಗತಿಯೆನಲು ಲೇಸುಮಾಡಿದೆ ಸ್ವಾಮಿ1 ಎನಿತೆಂದು ಹೇಳಲ್ಯ ನಿನಗೆ ಮನದಳಲು ನೀಗಲಸದಳವಾಗಿ ಬಳಲುವೆನು ತನುವಿನೀ ಸಂಕಟವ ತೊಲಗಿಸೈ ಜವದಿ 2 ದುರಿತ ದೂರಪುದು ಭರದಿ ಎನ್ನೊಡೆಯ ಶ್ರೀರಾಮ ಪೊರೆವಾ ಭವ ಕಿಚ್ಚಿನಿಂದುದ್ಧರಿಸಿ ಎನ್ನನು ನರಸಿಂಹವಿಠ್ಠಲನ ನೆನೆಯೆ ಜಿಹ್ವೆಗನಿಸೊ 3
--------------
ನರಸಿಂಹವಿಠಲರು
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ 1 ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು ನಾದ ಸನಕಾದಿ ಮುನಿವಂದಿತಾ ಮಾಧವ ಮಹಿಧರ ಯಾದವ ಕರುಣ ಪ ಯೋಧದಿ ಎನ್ನಪರಾಧವನೆಣಿಸದೆ ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು ಭೂದೇವರೊಡಿಯಾ 2 ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು ಕರದ ಮಾತಿಗೆ ಭಯಂಕರವ ಓಡಿಸಿ ಮಂದ ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ ತೋರಿಸೊ ಭಜಕರರೊಳಗಿಡುವುದು 3
--------------
ವಿಜಯದಾಸ
ನಂಬಿದೆ ನಾನಿನ್ನ ಚರಣವನಂಬಿಗ ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ ಇಂಬಾಗಿ ದಡ ಸೇರಿಸೆನ್ನನೇನಂಬಿಗ ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ. ಕರ್ಮವೆಂಬ ಪ್ರವಾಹವ ನೀ ನೋಡಂಬಿಗ ಚರ್ಮದಿಂದೇಳು ಹೊದ್ದಿಕಿ ಅಂಬಿಗ ಮರ್ಮ ಒಂಭತ್ತು ರಂಧ್ರ ಉಂಟಂಬಿಗ ಶರ್ಮವಿದಕೆ ಕಾಯದ್ಹರಿಗೋಲಂಬಿಗ 1 ಆಳ ಬಹಳ ಗೊತ್ತಾಗದಂಬಿಗ ಶೆಳವು ಘನ ಉಳ್ಳುಹುದು ನೋಡಂಬಿಗ ಸುಳಿಗಾಳಿಗೆ ಸಿಗಿಸದಿರೊ ಅಂಬಿಗ ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ 2 ಸಂಚಿತಾಪ್ತಿ ಇವರೊಳುಂಟಂಬಿಗ ಭಾರ ಜಡಿಯೋದು ನೀ ನೋಡಂಬಿಗ ವಂಚಕ ಮಾತು ರಾಗವು ಹೆಚ್ಚಂಬಿಗ ಚಂಚಲಗೊಂಡು ಭ್ರಮಿಸೋದು ಕಾಣಂಬಿಗ 3 ಆಶಾಜಲ ಮೇಲೆ ಮೇಲೆ ಬರುವುದಂಬಿಗ ಮೋಸ ಮಾಡುವುದೇನೊ ಕೊನೆಗೆ ಅಂಬಿಗ ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ ಲೇಶವಾದರು ಬತ್ತದು ನೋಡಂಬಿಗ4 ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ 5 ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ ಹತ್ತು ಹನಿಗಳು ಬಿತ್ತು ನೋಡಂಬಿಗ ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ ಹತ್ತಿಸೊ ಭಕ್ತಿದಡಕಿನ್ನಂಬಿಗ 6 ಮರಕಟಿ ಸೇರಿಹದಿದರೊಳಗಂಬಿಗ ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ ಸರಿಯಾಗಿ ನಡೆಸೊ ಇನ್ನಾದರಂಬಿಗ ವರದವಿಜಯ ರಾಮಚಂದ್ರವಿಠಲ ನೀನಂಬಿಗ 7
--------------
ವಿಜಯ ರಾಮಚಂದ್ರವಿಠಲ
ನಿತ್ಯ ಸುಖಕರ ನೀರಜಾಕ್ಷರ ಭೃತ್ಯರಾಗುವ ಬನ್ನಿರಿ ಎತ್ತುವನು ಸಂಶಯವಿಡದೆ ಕೃತಕೃತ್ಯರಾಗುವವೆನ್ನಿರಿ ಪ. ಮೋದಮಯನ ಪ್ರಸಾದವನು ಕೊಂಡಾದರದಿ ಸೇವಿಪುದು ಪಾದಪದ್ಮಾಮೋದಯುತಾ ತುಳಸೀದಳಗಳನು ಮುಡಿವುದು ತೇದ ಗಂಧವ ಮಾಧವನಿಗಿರಿಸಾದನಂತರ ಕೊಳುವುದು ಭಾಗವತ ಕೇಳುತ 1 ಭೀಕರಿಪ ಮಹ ದುರಿತಗಣ ನಿರಾಕರಿಸುವನು ನಿಮಿಷದಿ ಕುಯುಕ್ತಿ ಶಕ್ತಿಯ ದೂಕುವನು ದುಷ್ಕೂಪದಿ ವಾಕುಗಳ ತಪ್ಪುಗಳನೆಣಿಸದೆ ಸಾಕುವನು ಸಂತಸದಲಿ ಒಡಗೂಡಿ ನಲಿವನು 2 ಶ್ರೀಶನನು ಭಜಿಸುವದಕೇನಾಯಾಸವಿರುವುದು ಹೇಳಿರಿ ವಾಸವಾಗಿಹ ಸಕಲ ಹೃದಯಾಕಾಶ ಪದ್ಮದಿ ಕೇಳಿರಿ ವಾಸುದೇವನ ವರ್ಣನಾಂಶವ ಲೇಶವಾದರು ತಾಳಿರಿ ಶೇಷ ಗಿರೀಶನ ದಾಸಕೂಟ ಸಮಾಶ್ರಯಣ ಸಂಗ್ರಹಿಸಿ ಬಾಳಿರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ- ಮ್ಮಚ್ಚುತನಾನಂತನ ನೆನವುತ ಅನುಗಾಲ ಸ್ವಚ್ಛನಾಗಲು ಹರಿ ಮೆಚ್ಚುವನು ಪ. ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ ಪಾತಕ ಫಲಕಿನ್ನು ಗುರಿಯಾದಿಯಲ್ಲದೆ ಯಾತರ ಸುಖವೆಂದೀ ಸಂಸಾರ ಕೂಪದಿ ಪ್ರೀತಿ ಬಡುವಿ ಪಂಚಬಂಧದಲಿ ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ ಘಾತವಾಗುವುದೊಂದು ನಿಮಿಷಾರ್ಧದಲಿ ಜಗ- ನ್ನಾಥ ನಂಬಿದರೆಂದಿಗು ಪದಪಂಕ- ಜಾತಪತ್ರದ ನೆರಳಿರಿಸುವನು 1 ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ- ನ್ನಾಹವಾಗಿರುವದನೇನೆಂದು ಗ್ರಹಿಸುವಿ ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ ಮೋಹವಲ್ಲದೆ ನಿಶ್ಚಯವಲ್ಲವು ಐಹಿಕಾಮುಷ್ಮಿಕವೆಂಬ ಸಕಲ ಸುಖ ದೋಹನ ಧೇನು ಸರ್ವೇಶ್ವರ ಹರಿಯ ಸ- ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ ವಾಹ ಕೈ ಬಿಡದೆ ಕಾಪಾಡುವನು 2 ಒಂದು ದಿವಸ ನೀರೊಳದ್ದದಿದ್ದರೆ ದು- ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು ಹಿಂದಿನ ಕರ್ಮಾನುಬಂಧವು ತಿಳಿಯದು ಮುಂದಿನ ಹೊಂದಿಕೆ ಒಂದಾದರು ಇಂದಿರಾವರ ವೆಂಕಟೇಶನ ಪಾದಾರ- ವಿಂದ ಧ್ಯಾನಗಳೆಂಬದೊಂದೆ ಪರಮಸುಖ ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ ತಂದೆ ಬಿಡದೆ ಕಾವನೆಂದೆಂದಿಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಂಚರೂಪಾತ್ಮಕ ನೀನೇ ಈ ಪಾಂಚಭೌತಿಕ ದೇಹದಿ ಸಂಚರಿಸೂವೆ ಪ ಸ್ಥೂಲರಸವನು ಇತ್ತು ಸಲಹೂವೆ ಅ.ಪ ರಸಪಾಯುಆಪಜಿಹೆÀ್ವನಾಸಿಕ ಗಂಧ ಪೃಥುವಿ ಉಪಸ್ಥಯುಕ್ತ ಕೋಶವಹುದಯ್ಯ ಆ ಶನೈಶ್ವರ ವರುಣ ಭೂದೇವಿಯಿಂದಲಿ ಸೇವಿಪ ಸತತ ಲೇಶವಾದರು ಬಿಡದೆ ತಾ ಖಂಡಾಖಂಡ ರೂಪದಿ ದೇಶ ಕಾಲಗಳಲ್ಲಿ ನೆಲೆಸಿ ಕೋಶಕಾರ್ಯವ ಗೈವೆ ಪ್ರಾಣನಿಂ ಉಭಯಪಕ್ಷಗಳು ಧೇನಿಸುತಿಹರು ಭುಜದ್ವಯ ಶ್ರೀಶ ನಿನ್ನಯ ಮಧ್ಯದೇಶವೆ ಈ ಶರೀರದÀ ಮಧ್ಯಭಾಗವು ಪ್ರಸಿದ್ಧ ಪುರುಷನೆ ನಿನ್ನಿಂದೋಷಧಿಗಳು ಓಷಧಿಗಳಿಂದನ್ನವೆಲ್ಲವು ಪೋಷಣೆ ಎಲ್ಲ ಅನ್ನದಿಂದಲೆ ದೋಷದೂರ ನೀನನ್ನದನ್ನದಾ1 ಪಾಣಿತ್ವಗ್ವಾಯು ಸ್ಪರ್ಶ ನೇತ್ರ ತೇಜ ಪಾದರೂಪಗಳಿಂದಲಿ ಕಾಣಿಸಿಕೊಳ್ಳುವುದು ಪ್ರಾಣಮಯದ ಕೋಶವು ತಾನಲ್ಲಿಹ ಪ್ರದ್ಯುಮ್ನ ಮೂರುತಿ ಸತತ-ಗಣಪತಿ ಅಗ್ನಿ ವಾಯು ಮರೀಚಿಗಳೆಲ್ಲರೂ ಸನ್ನುತಿಪರೋ ಪ್ರಾಣಾಧಾರನಾಗಿಹೆ ತ್ರಾಣ ನಿನ್ನಿಂದ ಸ್ಥೂಲದೇಹಕೆ ಅ- ಪಾನ ನಿಂದೊಡಗೂಡಿ ನೆಲೆಸಿಹೆ ಪ್ರಾಣಪತಿ ಪ್ರದ್ಯುಮ್ನ ನಿನ್ನಯ ಶಿರದ ಸ್ಥಾನವು ಪ್ರಾಣನಲ್ಲಿಹುದೋ ದಕ್ಷಿಣೋತ್ತರಪಕ್ಷವಿರುತಿಹುದೋ ಕಾಣಿಪುದು ಮಧ್ಯದೇಶವು ಆಗಸದೊಳು ಉ- ದಾನ ವಾಯುವಿನಲ್ಲಿ ಇರುತಿಹುದೋ ಧೇನಿಪೋರು ಪೃಥುವಿಯು ಪಾದವೆಂಬುದು ಸ- ಮಾನ ವಾಯುವಿನಲಿ ಇರುತಿಹುದು ಜ್ಞಾನ ರೂಪದಿ ಈ ಪರಿಯಲಿ ರೂಪವಿರುತಿಹುದು ಪ್ರಾಣಿಗಳಿಗಾಯುಷ್ಯವಿತ್ತು ಪ್ರಾಣಪ್ರೇರಕನಾಗಿ ಪೊರೆಯುವೆ ಪ್ರಾಣಧಾರಣೆ ನಿನ್ನದಯ್ಯಾ ಪ್ರಾಣನುತ ಪ್ರದ್ಯುಮ್ನಮೂರುತೆ2 ತತ್ವಯುತವಾಕ್ಯೋಕ್ತಾಗಸ ಶಬ್ದ ಈತೆರ ಯುಕ್ತವಾದೀ ಕೋಶವು ಇದಕೆ ಖ್ಯಾತವಾದ ಮನೋಮಯ ಕೋಶದೊಳು ಸತತ ರುದ್ರೇಂದ್ರಾದಿ ಸುರರೆಲ್ಲರು ವಂದಿಸುತಿಹರು ಖ್ಯಾತ ಸಂಕÀರುಷಣನೆ ಖಂಡಾಖಂಡರೂಪದಿ ನೆಲೆಸಿ ಕೋಶದಿ ಪ್ರೀತಿಯಿಂದಲಿ ವ್ಯಾನನೊಡಗೂಡಿ ನೀನೆ ಯಜ್ಞಭುಕುವು ಯಜುರ್ವೇದವೆ ನಿನ್ನ ಶಿರವಹುದು ಶ್ರುತಿಗಳೊಳು ಭುಜದ್ವಯಂಗಳಾಗಿಹುದು ನುತಿಪ ಪಾಂಚರಾತ್ರಾಗಮ ವೆಂಬುದೆ ನಾಮಕಂಗಳೆನಿಪುದೆ ನಿನ್ನ ಪಾದದ್ವಯಂಗಳು ಖ್ಯಾತ ನಿನ್ನಯ ರೂಪ ಮಹಿಮೆಯ ತಿಳಿಯಲಸದಳವೋ ಜಾತರಹಿತ ನಿನ್ನ ವರ್ಣಿಸೆ ಮಾತು ಮನಸಿಗೆ ನಿಲುಕದಂತಿಹೆ ಖ್ಯಾತ ನೀನಹುದೊ ಮನೋಮಯ ಪ್ರೀತಿಯಿಂದಲಿ ಸಲಹೋ ಎನ್ನನು 3 ಮಹತ್ತತ್ವ ಪ್ರಾಚುರ್ಯದಿಂದಿಹ ಈ ವಿಜ್ಞಾನಮಯಕೋಶದಿ ಶ್ರೀಹರಿ ವಾಸುದೇವಾ ನೀನೆ ನೆಲೆಸಿಹೆ ಅಹರಹ ಬ್ರಹ್ಮ ವಾಯುಗಳಿಂದಲಿ ಮಹಾಪೂಜೆ ವಂದನೆಗೊಳುತಿಹೆ- ಖಂಡಾಖಂಡದಿ ತುಂಬಿಹೆ ದೇಹದೊಳು ಉದಾನನಿಂದೊಡಗೂಡಿ ಸಹಾಯನಾಗಿಹೆ ಜೀವಿಗಳಿಗೆ ಬಾಹ ದುರಿತದಿಂ ಪಾರುಗಾಣಿಸೋ ದೇಹ ದೇಹಿಯ ರೂಪ ನೀ ಸ್ವಗತಭೇದವಿವರ್ಜಿತನೆ ಶಿರವೆ ನಿನ್ನಯ ಶ್ರದ್ಧವೆಂಬೊರು ಮಹಾ ಭುಜಂಗಳೆ ಋತುಸತ್ ಎಂದೆನಿಸಿಕೊಳುತಿಹುದು ಇಹುದು ಮಧ್ಯದೇಶವೆ ಜಗಕೆ ಆಶ್ರಯವೆನಿಪ ಯೋಗಾವು ಮಹವೆಂಬುದೆ ಪಾದವೆನಿಸಿತು ಸೂರ್ಯತೇಜದೊಳು ಮಹಾ ಪ್ರಳಯದಿ ಉದರದೊಳಿಟ್ಟು ಇಹಪರದಿ ರಕ್ಷಿಸುವೆ ದೇವ4 ನಂದಮಯ ಕೋಶವು ತನ್ಮಯ ಅವ್ಯಕ್ತತತ್ವದಿಂದಲಿ ನನ್ನೀಯಿಂದ ಆನಂದಮಯ ಮೂರುತಿ ನಾರಾಯಣನೀ ಕೋಶಾಂತರ್ಗತನು ನೀನೆ ಸಮಾನನೊಡಗೂಡಿಹೆ ಅನಾದಿಲಿಂಗವ ಭಂಗಗೈಸುವಳೋ ಘನಮಹಿಮ ನಿನ್ನ ಅನುಸರಿಸಿ ತಾನಿಪ್ಪಳೋ ಛಿನ್ನ ಭಕ್ತರಿಗೊಲಿಯಳೋ ಅವಿ ಚ್ಛಿನ್ನ ಭಕ್ತರ ಜನನಿ ಎನಿಪಳೋ ಪ್ರಾಪ್ಯನು ಎಂದು ಪ್ರಿಯವೆಂದು ಘನ ದಕ್ಷಿಣೋತ್ತರ ಪಕ್ಷವೆನಿಪೋವು ತನ್ನ ಮಧ್ಯದ ಪ್ರದೇಶವೆಂಬೋದು ಜ್ಞಾನ ಸುಖ ಆನಂದ ಪಾದಗಳು ಬ್ರಹ್ಮನಾಮಕ ವಾಯುವೆಂಬುವರೋ ಆನಂದಮೂರುತಿ ಮಹಿಮೆ ಎಂತಿಹುದೋ ಭಿನ್ನನಾಮದಿ ಕರೆಸುತಲಿ ತಾ ಅ ಭಿನ್ನನಾಗಿ ಚರಿಸಿ ಕೋಶದಿ ಘನಕಾರ್ಯವ ನಡೆಸುತಿರ್ಪೆ ಪನ್ನಗಾದ್ರಿ ಶ್ರೀ ವೇಂಕಟೇಶನೆ 5
--------------
ಉರಗಾದ್ರಿವಾಸವಿಠಲದಾಸರು
ಶರಣು ವಾಯು ತನುಜ ಶರಣು ಭಾಸ್ಕರÀ ತೇಜ | ಶರಣು ರಾಜಾಧಿರಾಜ | ಶರಣು ಗೋಸಹಜ | ಶರಣಾರ ಸುರಭೋಜ ಪ ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ | ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ | ಹೇಮ | ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ | ಪತ್ರ ಪಾದವ ಕಾ | ಲತ್ರಯ ನೆನೆಸುವನೆ 1 ಇದೆ ಭಾಗ್ಯ ನಾನಾವದೂ ಒಲ್ಲೆ | ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ | ಪ್ರಾಣಪಾವನ ಲೀಲ | ದಾನವರ ಕುಲಕಾಲ | ಏನೇನು ಮಾಳ್ಪಾಧಿಷ್ಠಾನದಲಿ | ನೀನೇ ನಾನೆಲ್ಲಿ ಎಣೆಗಾಣೆ2 ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ | ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು | ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ | ನಿತ್ಯ | ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು 3 ದಾತ | ರೋಮ ರೋಮ ಕೋಟಿ ಕಾಮ ಸಂಹಾರನೇ | ಭೂಮಂಡಲಧರನೆ ಭೀಮಶೈನ | ಭೀಮ ರಿಪು ಗಂಟಲಗಾಣ | ತಾಮಸ ಜ್ಞಾನವಳಿ | ಸುಳಿ | ಶ್ರೀ ಮದಾನಂದತೀರ್ಥ4 ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ | ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ | ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ | ದಾಸರೊಳಧಿಕ ನಿನ್ನ ಲೇಶವಾದರು ಬಿಡೆ | ನಾ ಸರ್ವಥಾ ಕರೆ | ತೋಷದಲಿಡುವುದೆನ್ನ 5
--------------
ವಿಜಯದಾಸ
ಶ್ರೀ ಭಾರತೀದೇವಿ ಎಂತು ನೀವಶವಾದಿಯೇ ಭಾರತಿದೇವಿ ಎಂತು ನೀ ಮರುಳಾದಿಯೆ ಪ ಕಂತು ಹರನ ತಾಯಿ ದಂತಿಗಮನೆ ದಮಯಂತಿ ಕಾಂತಸುತೆ ಅ.ಪ ಧರೆಯೊಳು ಪುಟ್ಟುತಲಿ | ಆಕಾಶಕ್ಕೆ ಭರದಿಂದ ಜಿಗಿಯುತಲಿ ಸರಸಿಜ ಸಖನಾದ | ತರಣಿಯ ಫಲವೆಂದು ಅರಿತು ಭಕ್ಷಿಸಲ್ಹೋದ | ತರು ಚರ ರೂಪಿಗೆ 1 ಪುಂಡರೀಕಾಕ್ಷ ಕೇಳಿ | ದ್ವಾಪರದಿ ಪ್ರಚಂಡಗೆ ಒಲಿಯುತಲಿ ಭಂಡ ಬಕನ ಶಿರದಿಂಡು ಗೆಡಹಿ ಅವನ ಭಂಡಿ ಓದನವನ್ನು ಉಂಡ ಪುಂಡಗೆ ಮಾತೆ 2 ಶ್ರೀ ಶಾಮಸುಂದರನೇ ತ್ರೈಲೋಕ್ಯಕ್ಕೆ ಈಶನೆಂಬುದು ತಾನು ಲೇಸಾಗಿ ಪೇಳಲು | ಲೇಶವಾದರು ನಿನ್ನ ಆಶೆ ಇಲ್ಲದೆ ಸನ್ಯಾಸಿ ಆದವನಿಗೆ 3
--------------
ಶಾಮಸುಂದರ ವಿಠಲ
ಹಣವೆನಲು ಹಣವಲ್ಲ ಹಣವಿಲ್ಲದವರಿಲ್ಲ ಪ ಗಣಿಸಲು ಮಹಾತ್ಮರೆ ಹಣವಂತರಯ್ಯ ಅ.ಪ ಹಣವು ವಿದ್ಯೆಯು ತಪಸು ಊಂಛ ವೃತ್ತಿಗಳು ಬ್ರಾ- ಹ್ಮಣಗೆ ಕ್ಷತ್ರಿಯರಿಂಗೆ ಶೌರ್ಯಾದಿಗಳ್ ಘನಚಮತ್ಕøತಿ ಯುಕ್ತಿಗಳು ವೈಶ್ಯರಿಗೆ ಶೂದ್ರ ಜನಕೆ ಭೂಪರಿಚರ್ಯ ಕೃಷ್ಯಾದಿಗಳೆ ಹಣವು 1 ಸಟೆ ಕಪಟ ಬಾಯಬಡುಕತನ ತಸ್ಕರ ಅಧರ್ಮಗಳಿಂದಲಿ ಘಾಸಿಯಿಂ ಗಳಿಸಿರುವ ಲೇಶವಾದರು ಪುಣ್ಯ- ರಾಶಿಯನು ಕೆಡಿಸದೇ ಲೇಸು ಮಾಡುವದೇ 2 ಅತ್ಯಾಸೆ ಪಿಶುನತೆಯು ತಾಮಸರಿಗೆ ಸತ್ಯ ಸಂಕಲ್ಪ ಗುರುರಾಮ ವಿಠಲನ ಸ- ರ್ವತ್ರ ಚಿಂತಿಸುವವಗೆ ಕೈತುಂಬ ಹಣವೂ 3
--------------
ಗುರುರಾಮವಿಠಲ