ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

4. ವೆಂಕಟವರದಾರ್ಯರ ಹಿಂದಿಮಿಶ್ರಿತ ಕೃತಿ ಶ್ರೀನಿವಾಸ ಪದ ಧ್ಯಾನಕರೋರೆ ಸಾನುರಾಗಯುತ ಮಾನಸ ಮೇರೆ ಪ ಮದಪರಿಪೂರಿತ ಹೃದಯ ಸುನೋರೆ ಸದಯ ಹೃದಯ ಪರಿಪದಮಿಳನಾರೆ 1 ಕಾಮಕ್ರೋಧ ಉಪರಾಮ ಕರೋರೆ ರಾಮಾನಾಮ ಜಪಕಾಮು ಕರೋರೆ 2 ದೇಹಗೇಹಧನ ಮೋಹನಲೇರೆ ಶ್ರೀಹರಿಚರಣ ಕಾಂಹಿ ಚಲೇರೆ 3 ಪುತ್ರ ಮಿತ್ರ ಬಹು ಶತ್ರು ಕು ಮಾರೆ ವೃತ್ರ ವೈರೀಸುತ ಮಿತ್ರನಗಾರೆ 4 ಭಂಗ ಜನ ಸಂಗ ನ ಕರೋರೆ ಮಂಗಳಾಂಗ ನರಸಿಂಹ ಭಜೋರೆ 5 ಸೂಕ್ಷ್ಮಬುದ್ಧಿ ನಿರಪೇಕ್ಷ ಭಲಾರೆ ಮೋಕ್ಷದಾತ ಕಮಲಾಕ್ಷಕು ಲಾರೆ 6 ದಾಸ ಲೋಕ ಸಹವಾಸ ಕರೋರೆ ವಾಸುದೇವ ನಿಜದಾಸಕು ಹೋರೆ 7 ಶ್ರೀಪುಲಿಗಿರಿವರ ಭೂಪ ಮುರಾರೆ ಶ್ರೀಪತಿಘನ ಚಿದ್ರೂಪಕ ಹೋರೆ8 ಪರಮಪುರುಷ ನರಹರಿ ಕರುಣೀರೆ ವರದವಿಠಲ ಕರಿವರ ಧಣೀರೆ 9
--------------
ವೆಂಕಟವರದಾರ್ಯರು
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾನುರಾಗ ಯತಮಾನಸ ಮೇರೆ ಪ ಹೃದಯಪರಿಪದ ಮಿಳನಾರೆ 1 ಜಪಕಾಮುಕರೋರೆ2 ದೇಹಗೇಹಧನ ಮೋಹನ ಲೇರೆ ಶ್ರೀಹರಿ ಸ್ಮರಣ ಕಾಂಹಿ ಚಲೇರೆ3 ಪುತ್ರ ಮಿತ್ರ ಬಹು ಶತ್ರುಕುಮಾರವೃತ್ರ ವೈರೀಸುತ ಮಿತ್ರನಗಾರೆ4 ನರಸಿಂಹ ಭಜೊರೆ 5 ಕಮಲಾಕ್ಷಕುಲಾರೆ 6 ವಾಸುದೇವ ನಿಜ ದಾಸಕು ಹೊರೆ 7 ಚಿದ್ರೂಪಕ ಹೋರೆ 8 ಪರಮ ಪುರುಷ ನರಹರಿ ಕರುಣೀರೆ- ವರದವಿಠಲ ಕರಿವರ ಧಣೀರೆ 9
--------------
ಸರಗೂರು ವೆಂಕಟವರದಾರ್ಯರು
ಮೆಚ್ಚು ಮದ್ದು ಮಾಡಿದರೆನ್ನ ಮುದ್ದು ಚಿನ್ನನಅಚ್ಚ ಕಾಮುಕ ನಲ್ಲೇರೆನ್ನಅಚ್ಯುತಕೃಷ್ಣನಪ.ಮಾತನಾಲಿಪನಾವಾಗ ಮಡದೇರ್ಗೆ ಸೋತು ರಂಗಧಾತು ವಿಪರೀತಾಗಿದೆ ಧನಿಗಾನಂಜಿದೆ 1ವಂಚನೆಯ ಕಲಿತ ಗೃಹದ ವಿತ್ತವೆಲ್ಲ ಸೂರ್ಯಾಡಿದಸಂಚರಿಪ ಹೊರಗೆ ನಾರೇರಸೋಂಕಿಹಾ ಕುವರಾ2ಹುಸಿಖರೆಯ ಕಲಿತ ಹೊಸನಡೆಯರಿತಪ್ರಸನ್ವೆಂಕಟ ಮುಕುಂದ ಪರವಶನಾದ 3
--------------
ಪ್ರಸನ್ನವೆಂಕಟದಾಸರು