ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವದಾಸಗೆ ಚರಣವ ನೀಡೋ ವಾಸುದೇವನೇ ನಿನ್ನ ಪಾದವ ನೀಡೋ ಪ ಚರಣವ ಗಂಗಾಮೃತದಿಂದ ತೊಳೆಯುವೇ ಚರಣಕ್ಕೆ ಶ್ರೀಗಂಧವನ್ನು ಲೇಪಿಸುವೆ ಚರಣಕ್ಕೆ ಆರತಿ ಬೆಳಗುವೆ ಹರಿಯೇ 1 ಪಾದದೊಳೆನ್ನಯ ಶಿರವಿತ್ತು ಬೇಡುವೆ ನಿತ್ಯ ಕುಡಿಯುತ್ತಲಿರುವೇ ಪಾದಧೂಳಿಗಳನ್ನು ಬಿಡದೆ ನಾ ಹÉೂರುವೇ ಪಾದದೊಳೀ ತನುವನ್ನು ನಾ ಬಿಡುವೇ 2 ಅಡಿಯನ್ನು ನೋಡಿ ಸಂತೋಷಗೊಳ್ಳುವೆನು ಅಡಿಯನ್ನು ಸೇವಿಸಿ ಭಕ್ತನಾಗುವೆನು ಅಡಿಯನ್ನು ಪೂಜಿಸಿ ಭಜಿಸಿ ಪಾಡುವೆನು ಅಡಿಯನ್ನು ಸೇರಿ ನಾ ಮುಕ್ತನಾಗುವೆನು 3
--------------
ಕರ್ಕಿ ಕೇಶವದಾಸ
ಧ್ಯಾನವನೆ ಮಾಡಿ ನವರತ್ನ ಸಿಂಹಾಸನಸಾನಂದದಿಂದ ನಿಮಗರ್ಪಿಸುವೆನುಶ್ರೀ ನಿಧಿಯೆ ಪಾದ್ಯಾಘ್ರ್ಯ ಮಧುಪರ್ಕಗಳನು ಸು-ಮ್ಮಾನದಿಂದರ್ಪಿಸುವೆ ಗೌರಿ ದೇವಿ ಜಯ 1 ತುಂಗಭಧ್ರಾ ಸರಸ್ವತಿ ಯಮುನೆ ಕಾವೇರಿಗಂಗಾದಿ ಶುಭತೀರ್ಥ ಸಲಿಲದಿಂದಮಂಗಲಸ್ನಾನವನೆ ರಚಿಸಿ ಜಡೆವೆಣೆದು ಕುಸುಮಂಗಳಂ ಮುಡಿಗೆ ಮುಡಿಸುವೆನಂಬಿಕೆ 2 ಚಂದ್ರಗಾವಿಯ ಸೀರೆ ಕುಪ್ಪಸವ ತೊಡಿಸುವೆನುಚಂದದಿಂದರಿಸಿನವ ಲೇಪಿಸುವೆನುಚಂದ್ರಕಸ್ತೂರಿ ತಿಲಕ ಕುಂಕುಮದ ರೇಖೆಯನುಅಂದದಿಂದಿಡುವೆ ಶ್ರೀ ಗೌರಿ ನಿಮಗೆ3 ಕಣ್ಣ ಕಪ್ಪಿಟ್ಟು ಕರಯುಗಕೆ ಗಂಧವ ತಿವುರಿಚಿನ್ನದಾಭರಣ ನಿಕರವನಿಡುವೆನುರನ್ನ ದುಂಗುರ ಹಾರ ಪದಕದಿಂದ ಶೃಂಗರಿಸಿನಿನ್ನ ಪದಯುಗವ ಪೂಜಿಪೆನು ಗೌರಿ ಜಯ4 ಚಾರು ಪುನ್ನಾಗ ಪೂಗಸಿರಿಸ ಸುರಹೊನ್ನೆ ಸಂಪಗೆ ಮೊದಲಾದ ಪೂಸರವ ಸಿರಿಮುಡಿಗೆ ಮುಡಿಸುವೆನು ಗೌರಿ ಜಯ 5
--------------
ಕೆಳದಿ ವೆಂಕಣ್ಣ ಕವಿ
ನೀಲ ಸುಂದರ ಲೀಲವಿಗ್ರಹನೆ ಪ ಭಂಜನ ಬಾರೈ ಉರುಟಣೆಗೆ ಅ.ಪ. ಸಾರಸ ರೇಖರಂಜಿತ ಪಾದಪಂಕಜಕೆ ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ 1 ಫಾಲ ಫಾಲ ದೇಶದಿ ನಾಂ ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ 2 ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ 3 ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ 4 ಚಕೋರ ಚಂದ್ರನೆ ಮಾಲೆಯನರ್ಪಿಸುವೆ ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ 5
--------------
ಬೇಟೆರಾಯ ದೀಕ್ಷಿತರು