ಗಮನ ಕೃಷ್ಣಾ ಪ
ಇಂದಿರೇಯರಸ ಮುಕುಂದ ಮೂಜಗಕ್ಕೆ
ತಂದೆತಾಯಿ ನೀನೇ | ಶ್ರೀರಾಮಾ ಅ.ಪ
ಕೇಸರಿ ಪುನಗುಗಳೂ
ನೀಸತಿ ಸಹಿತ ಸದಾ ಲೇಪಿತ ಶ್ರೀನಿ-
ವಾಸ ಸುಗುಣಧಾಮಾ | ಶ್ರೀ ರಾಮ 1
ಸ್ಪುರಿಪಲಲಾಟದೊಳೂಧ್ರ್ವ ಪುಂಡ್ರಕ-
ಸ್ತುರಿತಿಲಕವು ಬೆಳಗೇ
ಹರಿದ್ರಾ ಕುಂಕುಮ ಮಂಗಲ ದ್ರವ್ಯ ನಿನ್ನ
ಅರಸಿ ಜಾನಕಿ ದೇವಿಗೇ | ಶ್ರೀರಾಮ 2
ಕ್ಷತೆಯಿಲ್ಲದವನು ನೀನೆಂಬುವದ-
ಕ್ಷತೆ ನಿನದಿದೊ ದೇವಾ
ತ್ಪತಿ ಮಹಾನುಭಾವಾ | ಶ್ರೀರಾಮ 3