ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶಾವತಾರ ನೀರೊಳಗೆ ನಿಂತು ನಡುಗಿ ನಾರುವಂಗೆ ಗಂಬೂರಿಕಸ್ತೂರಿ ಲೇಪನದ ಮದುವೆಭಾರ ನಿನ್ನಲಿ ಪೊಳಲು ಕಲ್ಲು ಕೈ ಮುಸುಡಿದಂಗೆಧೀರ ಶೇಷನ ಶಯನದ ಮದವೋಮೋರೆಯಲ್ಲಿ ಯಲ್ಲಾ ಕೆದರಿ ಬೇರು ಮೆಲುವನಿಗೆಸಾರಷಡ್ರಸನ್ನ ಭೋಜನದ ಮದವೋಕರುಳ ವನಮಾಲೆ ಹಾಕಿದವಂಗೆ ಹಾರಪದಕ ಹಾಕಿದ ಮದವೋಮೂರಡಿಯ ಭೂದಾನ ಬೇಡಿದವನಿಗೆ ಸಾರಿದವಂಗಭೀಷ್ಟಗಳ ಪೂರೈಪ ಮದವೋಧರಣಿ ವಿಪ್ರರಿಗಿತ್ತು ಕುಳಿಪುದಕೆ ಸ್ಥಳವಿಲ್ಲವಗೆ ಭುವನಕೀಳುವ ಮದವೋಊರ ಬಿಟ್ಟು ವನ ಚರಿಸುವಂಗೆ ಮೂರು ಧಾಮದಮನೆಯ ಭೋಗದ ಮದವೋಪುರನಾರಿಯ ಬಯಸಿ ಕೊಂಬುವಂಗೆ ವಾರಿಜಭವ ಸುರರವಂದ್ಯಾನೆ ಮದವೋಘೋರ ತುರಗವನೇರಿ ಹಾರಿಸ್ಯಾಡುವಂಗೆ ವೀರಸಿಂಹಾಸನದಲ್ಲಿಕುಳಿತ ಮದವೋಮೂರು ದಿನ ಅರಸುತನ ಸ್ಥಿರವೆಂದು ನೆಚ್ಚಿ ಸಾರಿದವನ್ನಮರೆವದುಚಿತವೆಬಾರದೆ ತಪ್ಪದು ಹಿಂದಿನ ಭವಣೆ ನಿನಗೆ ದೂರ ವಿಚಾರಿಸಿನೋಡೊ ಕರುಣಾ ನಿಧಿಶ್ರೀರಂಗ ರಾಜಗೋಪಾಲ ವಿಠಲ ನಿನ್ನ ಪಾರಿದವರ ಪೊರೆದು ಕೀರ್ತಿಪಡಿಯೊ
--------------
ರಾಜಗೋಪಾಲದಾಸರು
ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ಪ ಶ್ವೇತ ಭಾಪುರೆ ಸುರಕುಲ ದೀಪ ಸದಾಶಿವ ಪಾದ ಸಮೀಪದ ಸೇವಕ ಅ.ಪ. ಹರಿಪಾದೋದಕ ಶಿರದಲಿ ಧರಿಸಿದ ಹರಿಕಥಾಮೃತ ಮಳೆಗರೆವೆ ನೀ ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ- ರೀರ ಲೇಪನದಿಂದ ವರ ತೇಜಯುತನೆ ಮುರಹರಗೆರಗದ ನರನಿಗೆ ನರಕವು ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ ನಿರುತ ಅವನ ಪದ ಮೆರೆಯದೆ ಮನಗೊಂಡೆ ಶರಣು ಅಮರನುತ ಗುರು ಶಿರೋಮಣಿಯೆ1 ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ- ಶೇಷ ಸ್ಥಳದೊಳು ವಾಸವಾಗಿ ಅ- ದೋಷನಾಶನ ಸಂತೋಷದಿ ಗಿರಿಜೆಗೆ ಶ್ರೀಶನ ಮಂತ್ರೋಪದೇಶವ ಮಾಡಿದೆ ದಾಶರಥಿಯ ನಿಜದಾಸರೆನಿಸುವರ ಪೋಷಿಪೆ ಶಿವ ಪರಮೇಶ ಕೃಪಾಳೊ 2 ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ ಕಂದರ್ಪಹರ ಭಕ್ತಬಾಂಧವ ಕಾಯೊ ಇಂದಿರೆರಮಣ ಗೋವಿಂದನ ಪಾದಾರ- ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ ನಂದಿವಾಹನ ಎನ್ನ ಹಿಂದಣ ಕಲುಷಿತ ವೃಂದಗಳೋಡಿಸುವ ಇಂದುಧರ ಅರ- ಸಿರಿ ವಿಜಯವಿಠ್ಠಲನಕುಂದದೆ ಭಜಿಪ ಆನಂದವ ಕರುಣಿಸು 3
--------------
ವಿಜಯದಾಸ
ಮುಖವಂತೋರೆ ಪ ಸದ್ಗುಣ ಗಂಭೀರಾ ಧಶರಥ ಕುಮಾರ 1 ಮುಕ್ಕುಂದಾ ಮುನಿ ಗಂಧಾ ಮೈಲೇಪನದಿಂದಾ ವಿಪುಲ ವನ(?)ಯಿಂದಾ 2 ದೇಶಾಜನರ ಪೋಷಕನಾ ದೇವಕಿಯ ಸುತನಾ ಕರುಣಾಸಾಗರನಾ ಕರದು ತಾ ಬೇಗನೆ 3
--------------
ಹೆನ್ನೆರಂಗದಾಸರು
ಶ್ರೀ ಗಣೇಶ ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು ವಿಪ್ರ ಪ್ರಬುಧ್ಧರಿಗೆ ಪ್ರಿಯತರ ಗಣೇಶ ಅಪ್ರತಿಸುಪೂರ್ಣ ಸಚ್ಛಕ್ತಿಸ್ವರೂಪನು ಸುಪ್ರಕಟ ನಿನ್ನೊಳು ಪ್ರಭಂಜನಸಮೇತ ಪ ಬಾಲಾರ್ಕನಿಭ ವಸ್ತ್ರ ತನುಮಾಲ್ಯ ಲೇಪನದಿ ಹೊಳೆಯುವ ಮಹೋದರ ಗಜಾನನ ಸುಫಲದ ಥಳಥಳಿಪ ಪಾಶ ದಂತಾಂಕುಶಾಭಯಹಸ್ತ ಒಲಿದು ವಿಘ್ನವ ಕಳೆದು ಕಾಮಿತಾರ್ಥವನೀವೆ 1 ನಿಖಿಳ ಲೋಕಂಗಳ ಮುಕ್ತಾಮುಕ್ತರ ಸರ್ವಧಾರಕಾಕಾಶ ಏಕಾತ್ಮ ವಿಶ್ವನು ಪ್ರಕಾಶಿಪನು ನಿನ್ನೊಳು ಶಂಕರಾತ್ಮಜ ಭೂತಾಕಾಶಾಭಿಮಾನಿ 2 ತ್ರಾತ ಪದ್ಮಜಪಿತ ಪ್ರಸನ್ನ ಶ್ರೀನಿವಾಸನ ಅತಿ ವಿಮಲ ನಾಭಿಧೇಶದಲಿರುವೆ ಮುದದಿ ಅನುಜ ವಿತ್ತಪಗೆ ಸಮ ಶೇಷ ಶತಸ್ಥರಿಗೆ ಉತ್ತಮನೆ ಗುರುವರ ನಮಸ್ತೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ- ರೀ ಪೃಥುವಿಯೊಳು ಧನ್ಯರು ಪ ಗೋಪಿನಾಥ ಪದಾಬ್ಜ ಮಧುಪ ದ- ಯಾ ಪಯೋನಿಧಿ ಸುಜನರಂತಃ- ಸ್ತಾಪಹಾರಕ ಗೋಪ ಸಕಲ ಕ- ಲಾಪವಿದ ತಾಪತ್ರಯಾಪಹ ಅ.ಪ. ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು ಹೀರ ವರ್ಣರು ಬಂದು ಕೇಳಲು ತೋರಿ ತುರುಗಳ ಗತಿಯ ಸೂರ್ಯನ ತೋರಿ ತಮ್ಮಯ ಪೋರ ವಯಸನು ಸೂರಿಗಳೇ ನೀವರಿಯರೆನ್ನುತ ಚಾರು ಉತ್ತರವಿತ್ತ ಧೀರರ 1 ಭೂದೇವನನು ಕೊಂದು ಬಾಧೆಗಾರದೆ ನೃಪ ತಾ ದೈನ್ಯದಲಿ ನಿಂದು ಬೇಡಲು ಪಾದ ಪದ್ಮಾ- ರಾಧನೆಯ ತೀರ್ಥವನು ಪ್ರೋಕ್ಷಿಸಿ ಆದರದಲೀಕ್ಷಿಸುತ ಭೂಪನ ಕಾದ ಕಾಂಚನದಂತೆ ಮಾಡಿದ 2 ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ ಮಂಕುಗಳಾ ಡೊಂಕು ತಿದ್ದಲು ಬಿಂಕದಲಿ ತರಿಸಿ ಗೇರೆಣ್ಣೆ ಪಂಕದೊಳಗದ್ದಿರುವ ವಸ್ತ್ರಕೆ ಕಲುಷ ಹಾರಿಸಿ ಕಿಂಕರ ಮನಶಂಕೆ ಬಿಡಿಸಿದ 3 ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ ನರರು ತಾವರಿಯದೆ ಜರಿಯುತ್ತಿರೆ ಹರುಷದಿಂದಲಿ ಹಸಿಯ ವಸ್ತುಗ- ಳಿರವ ತೋರಿಸಿ ಮರುಳ ನೀಗಿಸಿ ಶರಣು ಶರಣೆನಲವರ ಪಾಲಿಸಿ ಮೆರೆದ ಬಹು ಗಂಭೀರ ಗುರುವರ 4 ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ ನಾರಸಿಂಹನ ನೆಲಸಿ ಊರು ಮಂದಿಯು ನೋಡುತಿರಲಾ- ವಾರಿ ಮಧ್ಯದಿ ಬಂದ ಗಂಗೆಗೆ ಸೀರೆ ಕುಪ್ಪಸ ಬಾಗಿನಂಗಳ ಧಾರೆಯೆರೆದಪಾರ ಮಹಿಮರ 5 ಫಣಿ ಬಂಧ ನಿವಾರಿಸಿ ಭಾಷಿಸಿ ಫಣಿಪನ್ನ ತೋಷಿಸಿ ಕಾಶಿ ಗಯಾ ಶ್ರೀ ಮುಷ್ಣದ್ವಾರಕ ಶೇಷಗಿರಿ ಮೊದಲಾದ ಪುಣ್ಯ ಪ್ರ- ದೇಶಗಳ ಸಂಚರಿಸಿ ಭಕ್ತರ ದೋಷರಾಶಿಯ ನಾಶಗೈಸಿದ 6 ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ ನಿತ್ಯ ಮಹೋತ್ಸವಗೊಳುತ ಮುತ್ತಿನಂಗಿಯ ಮೇಲ್ಕುಲಾವಿಯು ರತ್ನ ಕೆತ್ತಿದ ಕರ್ಣಕುಂಡಲ ಬಿತ್ತರದಿ ಧರಿಸುತ್ತ ರಥವನು ಹತ್ತಿ ಬರುತಿಹ ಸ್ತುತ್ಯ ಬಿರುದಿನ 7 ಆರ ಬೃಂದಾವನ ಸೇವೆಯ ಮಾಡಲು ಕ್ರೂರ ಭೂತಗಳೆಲ್ಲ ದೂರವು ಆರ ಬೃಂದಾವನದ ಮೃತ್ತಿಕೆ ನೀರು ಕುಡಿಯಲು ಘೋರಕ್ಷಯ ಅಪ- ಸ್ಮಾರ ಗುಲ್ಮಾದಿಗಳ ಉಪಟಳ ಹಾರಿ ಪೋಪುದು ಆ ಮುನೀಶ್ವರ 8 ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ ಶರಣ ರಕ್ಷಾ ಮಣಿಯೆ ದುರಿತ ತಿಮಿರಕೆ ಮೆರೆವ ದಿನಮಣಿ ಎನಿಸಿ ಪೂರ್ವ ಕವಾಟ ನಾಮಕ ಪುರದ ನರಕೇಸರಿ ಕ್ಷೇತ್ರದಿ ಸ್ಥಿರದಿ ಶ್ರೀ ಕಾಂತನನು ಭಜಿಸುವ 9
--------------
ಲಕ್ಷ್ಮೀನಾರಯಣರಾಯರು