ಏನೆಂದು ಬಣ್ಣಿಪೆ ಶ್ರೀನಾಥ ನಿನ್ನಯ
ಆನಂದ ಮಹಿಮೆಗಳಾ ಸ್ವಾಮಿ
ಆ ನಾಕು ಶೃತಿಗಳು ಮೌನವ ಹಿಡಿದವು
ಅನಿರ್ವಚನೀಯಗಳಾ ಸ್ವಾಮಿ 1
ವಾರಿಧಿ ಪಾತ್ರೆಯು ನೀರನೆ ಮಸಿ ಮಾಡಿ
ಧಾರುಣಿ ಹಲಗೆಯಲಿ ಸ್ವಾಮಿ
ಮೇರು ಲೇಖಣಿಯಿಂದ ಶಾರದೆ ಬರೆಯಲು
ಪಾರ ಗಾಣಲಿಲ್ಲೋ ಸ್ವಾಮಿ 2
ಉರಗೇಂದ್ರ ಸಾಸಿರ ವೆರಡ ನಾಲಿಗೆಯಿಂದ
ತೆರವಿಲ್ಲ ಹೊಗಳಲಿಕ್ಕೇ ಸ್ವಾಮಿ
ಸಾರಥಿ ನಿನ್ನದಾ
ಸರಸ್ತುತಿರತಿ ನೀಡೋಸ್ವಾಮಿ 3