ಒಟ್ಟು 14 ಕಡೆಗಳಲ್ಲಿ , 11 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆಯ ನೋಡಿರಯ್ಯ ನೀವೆಲ್ಲರುಆನಂದ ಪಡೆಯಿರಯ್ಯ ಪ ತಾನು ತನ್ನವರೆಂಬ ಮಾನವರ ಸಲಹಿದಅ ಪಾಂಡು ಚಕ್ರೇಶನ ಸುತರಿಗೊಲಿದಾನೆಗಂಡುಗಲಿ ಮಾಗಧನ ಒರಸಿದಾನೆಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆಲಂಡರಿಗೆ ಎದೆಗೊಡುವ ಪುಂಡಾನೆ 1 ಬಾಲಕನ ನುಡಿಗೇಳಿ ಖಳನ ಸೀಳಿದಾನೆಪಾಲುಂಡು ವಿದುರನ ಸಲಹಿದಾನೆಲೋಲಾಕ್ಷಿ ಮಾನಭಂಗಕ್ಕೊದಗಿದಾನೆಖೂಳ ಶಿಶುಪಾಲನನು ಸೀಳಿದಾನೆ2 ಅಜಮಿಳನಿಗೆ ನಿಜಪದವಿಯ ಕೊಟ್ಟಾನೆಕುಜನರೆಲ್ಲರನು ಒರಗಿಸಿದಾನೆಅಜಪಿತ ಕಾಗಿನೆಲೆಯಾದಿಕೇಶವಾನೆತ್ರಿಜಗವಲ್ಲಭ ತಾನು ಭಜಕರ ವಶವಾನೆ 3
--------------
ಕನಕದಾಸ
ಇಂದಿಗೆ ಕಡೆಮಾಡು ಎನ್ನ ಮಂದಬುದ್ದಿ ತಂದೆ ಕೇಳಿ ಮರೆಬಿದ್ದೆ ನಿನ್ನವರ ಸುದ್ದಿ ಪ ಒಪ್ಪಿಡ್ಯವಲಕ್ಕಿಗೆ ಒಪ್ಪಿ ಘನ ಬಡತನವ ಕಪ್ಪುಕುಲದವನಿಂಗೆ ತುಪ್ಪ ಸಕ್ಕರೆಯನ್ನು ಗಪ್ಪತ್ತಿಲುಂಡು ಮುಕ್ತಿ ಸಂಪದ1 ವಿದುರನರ್ಧಾಂಗಿಯ ಸದಮಲದ ತವಪಾದ ಸದನಕೈಯಲು ಪದುಮವದನೆ ಮೈ ಮರೆದು ಕದಳಿಫಲ ಮೇಲ್ಭಾಗ ವದನದಿಕ್ಕಲು ಸವಿದು ಸದುಯಾಂಬುಧೊಲಿದಸಮಪದವಿ ದಯಮಾಡ್ದಿ2 ಅಧಮಾಧಮಾಗಿ ದುರ್ಮದದಿಂದ ಮತಿಗೆಟ್ಟು ಸದಮಲ ಕುಲಪದ್ಧತಿ ವಿಧಿಯನ್ನು ಮರೆತು ಅಧಮಕುಲಜಳಿಗೊಲಿದು ಮದುವ್ಯಾದ ಅಜಮಿಳಗೆ ಒದಗಿ ಬಂದಂತ್ಯಕೆ ನಿಜಪದವಿ ಕರುಣಿಸಿದಿ3 ವರಧರ್ಮ ಹಿತಭಕ್ತ ನರನಿವರ ಲೆಕ್ಕಿಸದೆ ಕರುಣದ್ವಿದುರನ ಮನೆಗೆ ಭರದಿ ಬಂದಿಳಿದಿ ಪರಮಪಾವನ ನಿಮ್ಮ ಚರಣಭಕ್ತ್ಯೊಂದೆನಗೆ ಕರುಣಿಸು ಮತ್ತಾವ ಸಿರಿಯ ನಾನೊಲ್ಲೆ 4 ನಿನ್ನ ಎಂಜಲು ಉಣಿಸಿ ನಿನ್ನವರೊಳಾಡಿಸಿ ನಿನ್ನ ಉನ್ನತ ಧ್ಯಾನವನ್ನೆ ದಯಮಾಡಿ ಮನ್ನಿಸಿ ಸಲಹಯ್ಯ ನಿನ್ನ ದಾಸನೆಂದೆನಿಸಿ ಎನ್ನಯ್ಯ ಶ್ರೀರಾಮ ನಿನ್ಹ್ನೊರತನ್ಯರಿಯೆ 5
--------------
ರಾಮದಾಸರು
ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ಊಟ ಮಾಡಿದೆನು ಬ್ರಹ್ಮಾನಂದದ ಊಟವಆರು ಅರಿಯದ ಯೋಗ್ಯರು ಎಂಬ ಊಟ ಪ ಸದ್ಗುರು ಎಂದೆಂಬ ಅನ್ನಪೂರ್ಣ ತಾನುಶುದ್ಧ ಹೃದಯವೆಂಬ ಹರಿವಾಣದೊಳಗೆಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವಸಿದ್ಧ ಗುರುವೇ ತಂದು ಎನ್ನ ಮುಂದಿಡಲು1 ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದುಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿಎತ್ತಿ ಸವಿದೆನು ನಾನು ಅನುಭವದ ತುತ್ತ 2 ಸಾರಾಮೃತವೆಂಬ ಸಾರನೇ ಸುರಿಯುತತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿಮೀರಿದಾನಂದಗುಳ್ಹೂರಿಗೆಯ ಮಂಡಿಗೆಯತೋರುವೆಚ್ಚರು ಮರೆತು ಹಾಯೆನುತಲುಂಡು 3 ಹೇಳಬಾರದ ಪರಮಾತ್ಮ ಪರಮಾನ್ನ ಸುರಿದುಮೇಲೆ ಗುರುದಯದ ಉದಕವನೆ ಕುಡಿದುಮೂಲನಾದವ ಘೋಷ ಸುತ್ತೆಲ್ಲ ಪಸರಿಸಲುಗೋಲ ನಾನಾ ತೇಜ ದೀಪ ಬೆಳಕಿನಲ್ಲಿ 4 ಇಂತೂಟವನೆ ಉಂಡು ನಿಜ ತೃಪ್ತಿಯದಾಗೆಅಂತು ಕಳೆದೆನು ಅವಿದ್ಯದ ಕಡು ಹಸಿವನುಚಿಂತಯಕ ಚಿದಾನಂದ ಅನ್ನ ಪೂರ್ಣನು ಎಣಿಸೆಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ5
--------------
ಚಿದಾನಂದ ಅವಧೂತರು
ಏನು ಕಾರಣ ಕೃಷ್ಣಾ ಏನು ಕಾರಣ ಪ ಏನು ಕಾರಣ ಎನ್ನ ಕಣ್ಣಿಗೆ ನೀನು ತೋರದಿರುವುದು ಇದು ಅ.ಪ ಖಗ ಮೃಗಾದಿಗಳಿಗೆ ನೀನು ರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು 1 ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಮೆನೋವಾ 2 ಮುರಲಿನೂದಿ ವನದಿ ಹರಿಯುತರುಲತಾದಿಗಳಿಗೆ ದರ್ಶನವಿತ್ತು ಕಾಯ್ದುಅದಕು ಪರಮ ಪುರುಷ ಕಡಿಮೆ ನೋವಾ3 ಹಾದಿಲ್ಹೋಗೋ ಕೀಟನಿಗೆವೇದನಾಥ ದರುಶನಿತ್ತಿಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ 4 ಎಷ್ಟು ಎಷ್ಟು ಜನರಿಗೀಗಭೆಟ್ಟಿ ನೀಡಿ ಸುಖವನಿತ್ತೆಶ್ರೇಷ್ಠನೆಂದು ಸ್ತುತಿಪೆ ನಿನ್ನ ಕೃಷ್ಣ ಕರುಣಿ ಬೇಗನೆ ಬಾ 5 ಇಂಥಾ ಜನುಮದಲ್ಲಿ ನಿನ್ನಕಂತು ಪಿತನೆ ಕಾಣದಿರಲುಪಂಥಗಾಣೆ ಮುಂದಿನ ತನುಎಂಥದಾಗುವುದೋ ತಿಳಿಯೆ 6 ಇಂದಿರೇಶ ಮುರಲಿ ಶೋಭಿತಇಂದು ಬಿಂಬ ವಿಜಯ ವದನತಂದು ತೋರಿಸೆನ್ನ ಮನಕಾ-ನಂದಿಸೀಗ ನಂದನಸುತ 7
--------------
ಇಂದಿರೇಶರು
ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರುಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ. ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ 1 ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ2 ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನÀ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆÉ 3 ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ 4 ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ 5 ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ 6 ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ 7
--------------
ವಾದಿರಾಜ
ಗುರುದತ್ತ ದಿಗಂಬರ ಸ್ತುತಿ ಈಸಲಾರೆ ಗುರುವೆ ಸಂಸಾರಶರಧಿಯ ಮೋಸದಿಂದ ಬಿದ್ದು ನಾನು ಘಾಸಿಯಾಗಿ ನೊಂದೆ ಗುರುವೆ ಪ ಗುರುವೆ ಬೇರೆ ಗತಿಯ ಕಾಣೆ ನೀನೆಗತಿ ದಿಗಂಬರೇಶ ಮರಯ ಹೊಕ್ಕೆನಿಂದು ನಿಮ್ಮ ಚರಣ ಕಮಲವ ತರುಣ ದಿಂದಲೆನ್ನ ಭವದ ಶರಧಿಯನ್ನು ದಾಟುವಂಥ ಪರಿಯನೊರೆದು ನಾವೆಯಿಂದ ದಡವ ಸೇರಿಸೋ 1 ಮಡದಿ ಮಕ್ಕಳೆಂಬುದೊಂದು ನೆಗಳುಖಂಡವನ್ನು ಕಚ್ಚಿ ಮಡುವಿಗೆಳೆದು ತಿನ್ನು ತಾವೆ ತಡೆಯಲಾರೆನು ನಡುವೆ ಸೊಸೆಯು ಎಂಬನಾಯಿ ಜಡಿದು ಘೋರ ಸರ್ಪದಂತೆ ಕಡಿಯೆ ವಿಷಮ ನೆತ್ತಿಗಡರಿ ಮಡಿವಕಾಲ ಬಂದಿತು 2 ಹಲವು ಜನ್ಮದಲ್ಲಿ ಬಂದು ಹಲವು ಕರ್ಮವನು ಮಾಡಿ ಹಲವು ಯೋನಿಯಲ್ಲಿ ಹುಟ್ಟಿ ಹಲವು ನರಕವ ಹಲವು ಪರಿಯ ಲುಂಡು ದಣಿಯ ನೆಲೆಯ ಗಾಣದೆನ್ನಜೀವ ತೊಳಲಿತಿನ್ನುಗತಿಯ ಕಾಣೆ ಗುರು ಚಿದಂಬರ 3 ಕಾಲವೆಲ್ಲಸಂದು ತುದಿಯಕಾಲ ಬಂತು ಕಂಡ ಪರಿಯೆ ತಾಳಿ ಕಿವಿಗೆ ಊದ್ರ್ವಗತಿಗೆ ಪೋಪಮಂತ್ರವನ್ನು ತಿಳಿಸಿ ನಿರಾಳ ವಸ್ತುವನ್ನು ತೋರೋವರ ದಿಗಂಬರಾ 4 ಆಸೆಯೆಂಬ ನಾರಿಯನ್ನು ನಾಶಗೈದು ಗುರುವಿನಡಿಗೆ ಹಾಸಿತನುವ ದಡದಂತೆ ಬೇಡಿಕೊಂಡೆನು ಈಸ ಮಸ್ತಲೋಕವನ್ನು ಪೋಷಿಸುವ ಲಕ್ಷ್ಮೀಪತಿಯ ದಾಸಗಭಯವಿತ್ತು ಕಾಯೋವರ ದಿಗಂಬರ 5
--------------
ಕವಿ ಪರಮದೇವದಾಸರು
ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ 1 ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2 ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ ಸಂಗಡಲಿದ್ದು ಎಂಜಲುಂಡು | ಮನುಜದೇಹವ ತೆತ್ತು ಬಿನಗು ಲೀಲಾಕೃತಿ | ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3 ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ | ಮಾತುಳನ ಕೊಂದು ಮುತ್ತೈಯಗೊಲಿದು | ಭೀತಿಯಲಿ ಪರರಾಯನ ಮಗಳ ಕೊಂಡು ಬಂದ | ಯಾತರ ಪೌರುಷದವನು ಲೋಕದೊಳಗೆಲ್ಲ 4 ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು | ಮಿತ್ರಭೇದವನಿಕ್ಕಿ ಬಂಧುಗಳಿಗೆ | ತೆತ್ತಿಗನು ನೀನಾಗಿ ವಾಜಿಗಳ ಪಿಡಿದು | ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5 ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ | ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ | ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ | ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6 ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ | ಜಲಜ ಸಂಭವ ಶಿವ ಇಂದ್ರಾದ್ಯರು | ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
--------------
ವಿಜಯದಾಸ
ರಂಗಾ ಮನೆಗೆ ಬಂದ ಪರಮ ಮಂಗಳದಾಯಿ ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ. ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ 1 ಆರುವೆನನೆಂಬ ಹುಣ ಘೋರಭಾವದಿಂದಲುಂಡು ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ 2 ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ ದ್ವøಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು ಮಾಯಾ ಶಕ್ತಿಯರಸ ವೆಂಕಟೇಶ ನಿತ್ಯ ಮುಕ್ತ ರಮೆಯ ಕೂಡಿ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸೈ ಸೈ ಶರಣಾಗತ ವತ್ಸಲ ನೀ ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ. ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ- ರನ್ನು ಕಾಪಾಡಿ ಸುಧೆಯನುಣಿಸಿದಿ ನೀ 1 ಹಂಜಿಯಂದದಿ ತಲೆ ನರತಿಹ ಬ್ಯಾಡತಿ ನಿರಂಜನ ಮೂರುತಿ2 ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ 3 ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ 4 ಪಾತಕಿ ಪತಿಯಾದ- ಜಾಮಿಳನನು ತನ್ನ ನಿಲಯಕೆ ಕರೆಸಿದಿ 5 ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು ಕುಡುತೆ ಪಾಲುಂಡುವ 6 ಕಂಡವರನು ಕೊಂದಿಹ ಕ್ರೂರನ ಮುನಿ ಮಂಡಲದಲಿ ಪ್ರಚಂಡನೆಂದೆನಿಸಿದಿ 7 ಕುಂತಿಯ ಕುವರನ ಕುದುರೆಯ ನಡೆಸುತ ಅಂತರಂಗ ಸಖ್ಯವ ಬೆಳೆಸಿದಿ ನೀ 8 ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ- ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ 9 ತಂದೆಯ ಕೊಲ್ಲಬೇಕೆಂದು ಸನ್ನಹಗೈದ ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ 10 ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ 11 ಪನ್ನಗ ಗಿರಿವರ 12
--------------
ತುಪಾಕಿ ವೆಂಕಟರಮಣಾಚಾರ್ಯ
ತಲ್ಲಿಕಾರರು ನಿನ್ನ ಬಂಟರು ರಂಗನಿಲ್ಲಲೀಸರು ಸಂಸಾರಿಗಳನು ಕೃಷ್ಣ ಪ.ಮಳ್ಳಿದರಾಗಿ ಮಾತಾಡಿ ಬಲುಂಡುಟ್ಟುಇಲ್ಲದ ತಪ್ಪನೆಣಿಸಿ ಹೊರಿಸಿಸುಳ್ಳುಕಳವು ಹಾದರದ ಪಾಪಭವಬಳ್ಳಿಯ ಹರಿದು ಮೊಳೆಯನೊತ್ತಗೊಡರು 1ಕಾಂಚನವಿಡಿದು ಕಕ್ಕಸಬಟ್ಟು ಪೂರ್ವದಸಂಚಿತದಿ ನರಪಶುಗ್ರಾಸದಮುಂಚುವ ಬಣವೆಗೆ ಕಿಚ್ಚಿಕ್ಕಿ ಹುಡಿದೂರಿಪಂಚಾನನಂತೆ ಖೋ ಇಟ್ಟು ಕೂಗುವರು 2ಇದಿರೆದ್ದು ಕರೆದು ಮನ್ನಿಸಿ ಪೂಜಿಸಿಪಾದೋದಕ ಪ್ರೋಕ್ಷಿಸಿಕೊಂಡು ಮರೆಹೊಕ್ಕರೆಬದಿಯ ಸಂಪದ ಬಂದ ಕಬ್ಬು ಬಾಳೆÉ ನೆಲ್ಲುಗದ್ದೆಯ ಸಂಹರಿಸುವರುಪಕಾರಿಗಳು 3ಛಲದಿ ಮಂದಿರ ಹೊಕ್ಕು ಹರಿಸೇವೆ ಗೊಂದಣಗಳಲಿ ಬೇಡಿ ಚಾಮುಂಡೆರೋಡಿಸಿಹೊಲ ಮನೆ ಮಧ್ಯದ ಪಾಮರರ ಹಿಡಿ ತಂದುಬಲು ಕಾಸಿಸಿ ಮುದ್ರೆಯೊತ್ತದೆ ಬಿಡರು 4ಈಪರಿಭವಸುಖಸೂರ್ಯಾಡಿಎಳೆದೊಯ್ದುಶ್ರೀಪದಪುರದಿ ಸೆರೆಯಿಕ್ಕುವರುಶ್ರೀಪ್ರಸನ್ವೆಂಕಟಪತಿ ಮುಖ್ಯ ಪ್ರಾಣೇಶಈ ಪುಂಡರಿಗೆ ಹೇಳೊ ಇವರ ಸಾಕೆಂದು 5
--------------
ಪ್ರಸನ್ನವೆಂಕಟದಾಸರು
ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ103ಪ್ರಥಮ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪೊಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪಶ್ರೀ ಹಂಸ ಲಕ್ಷ್ಮೀಶನಾಭಿಭವಸನಕಾದಿಮಹಂತದೂರ್ವಾಸಾದಿಗಳಗುರುಪರಂಪರೆಯಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -ರುಹಪಾದಗಳಲಿನಾ ಶರಣು ಶರಣಾದೆ1ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕಕಲುಷವಾದಗಳಲ್ಲಿ ಮನಸೋತು ಪೋಗೆಳಾಳುಕನ ಪರಮಪ್ರಸಾದ ಹೊಂದುವ ಜ್ಞಾನಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವಹರಿಆಜÉÕಯಲಿ ಸುಜನರನುದ್ದರಿಸೆ ಜನಿಸಿಪರಮಸತ್ತತ್ವವಾದ ಅರುಪಿ ಬದರಿಗೆತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3ವೈದಿಕ ಸದಾಗಮದಿ ಬೋಧಿತ ತಾತ್ವಿಕದ್ವೈತ ಸಿದ್ಧಾಂತದ ಆದಿಗುರು ಮಧ್ವಬದರಿಗೆ ತೆರಳಲು ಶ್ರೀಪದ್ಮನಾಭ-ತೀರ್ಥರಾರೋಹಿಸಿದರು ಮಧ್ವಮಠ ಪೀಠ 4ಈ ಆದಿಮಠಗುರುಪರಂಪರೆಯು ನರಹರಿತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5ವಿದ್ಯಾಧಿರಾಜರು ಜಯತೀರ್ಥಜಾತರುವರ್ಧಿಸಿದರು ಈ ಆದಿ ಮಠವನ್ನಆದಿಮಠ ಭಿನ್ನಾಂಶ ಮಠಗಳುಪಂಕಜನಾಭಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾಆದರದಿ ಶರಣಾದೆ ಸಂತೈಪರೆಮ್ಮಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿಮೊದಲನೇಯವರು ಶ್ರೀ ಲಕ್ಷ್ಮೀಧರರು 7ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರುಮಾಲೋಲ ಶ್ರೀರಂಗನಾಥನ ಪ್ರಿಯಶೀಲ ಯತಿವರ ಸ್ವರ್ಣವರ್ಣತೀರ್ಥರುಅವರಜಲಜಕರಜಾತ ಶ್ರೀಪಾದರಾಜಾರ್ಯ 8ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರಕಾಲಿಗೆ ಎರಗುವೆ ಕರುಣಾಶಾಲಿಗಳುಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವುಬಲ್ಲನೆ ನಾನು ವರ್ಣಿಸಲು ಘನತರವು 9ಯತಿರಾಜರಿವರ ಮಹಿಮೆ ಬಹು ಬಹು ಬಹಳವೇದ್ಯ ಎನಗೆ ಅತಿ ಸ್ವಲ್ಪವೇವೇಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದುಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿಚೆನ್ನಪಟ್ಟಣಕೆರಡು ಕ್ರೋಶದೊಳಗೇವೇಸಣ್ಣ ಗ್ರಾಮವು ಅಬ್ಬೂರು ಎಂಬುದುಂಟುಕಣ್ವತೀರ್ಥಾಭಿಧ ಪುಣ್ಯನದೀತೀರ 11ವಿದ್ಯಾಧಿರಾಜರ ಕರಕಮಲೋತ್ಪನ್ನರುವೇದ ವೇದಾಂತ ಕೋವಿದರುಗಳು ಈರ್ವರುವಿದ್ಯಾಧಿರಾಜ ಈರ್ವರಲಿ ಪೂರ್ವಜರುವಾದಿಗಜ ಸಿಂಹ ರಾಜೇಂದ್ರ ಯತಿವರರು 12ರಾಜೇಂದ್ರ ತೀರ್ಥಜ ಜಯಧ್ವಜರಹಸ್ತಕಂಜಸಂಜಾತ ಪುರುಷೋತ್ತಮ ತೀರ್ಥರುರಾಜರಾಜೇಶ್ವರ ಪಟ್ಟಾಭಿರಾಮನ್ನಪೂಜಿಸುತ ಇದ್ದರು ಅಬ್ಬೂರಿನಲ್ಲಿ 13ಪುರುಷೋತ್ತಮಾರ್ಯರ ಮಹಿಮೆ ನರರಿಂದಅರಿವುದಕೆಸಾಕಲ್ಯಶಕ್ಯವು ಅಲ್ಲಶಿರಿವರನ ಪೂರ್ಣಾನುಗ್ರಹಕೆ ಪೂರ್ಣಪಾತ್ರರಾಗಿಹ ಈ ಕರುಣಿಗೆ ಶರಣು 14ಘೃಣಿಸೂರ್ಯಆದಿತ್ಯ ತೇಜಸ್ಸಲಿ ಬೆಳಗುವವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯಅನಘನಾಮವನಿತ್ತುಪ್ರಣವಉಪದೇಶಿಸಿದರು15ವಾಜಿವಕ್ತ್ರನು ನರಸಿಂಹ ವಿಠಲನುಯಜÕವರಾಹಶ್ರೀರಾಮ ಯದುಪತಿಯಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನಕುರಿತು ಬರುತಿಹರು ಸ್ವರ್ಣವರ್ಣತೀರ್ಥರು ಆಗ ಸಾಯಂಕಾಲ ಇನ್ನೆಷ್ಟುದೂರವೋ ಎಂದು ಶಂಕಿಸಿದರು ಮನದಿ 17ಮಾರ್ಗದಲಿ ದನಗಳ ಮೇಸುವ ಬಾಲಕರೊಳುಅಕಳಂಕ ವರ್ಚಸ್ವಿ ಹುಡುಗ ಓರ್ವನ್ನತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರುಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿಅಹಂಮಾಎಂದು ಕೂಗೋ ಧೇನುಗಳ ನೋಡಿಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದುಭಾಸವಾಗಿ ಲೋಕರೀತಿಯಲಿ ಕೇಳಿದರುಹೆಸರು ಏನು ಯಾರ ಮಗ ಮನೆ ಎಲ್ಲಿ 20ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದಅಮ್ಮಗಿರಿಯಮ್ಮನು ತಂದೆಯು ಶೇಷಗಿರಿಲಕ್ಷ್ಮೀನಾರಾಯಣಾಭಿದನು ತಾನೆಂದುಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21ಕ್ರಮದಿ ಬರೆ ಓದುವಿದ್ಯೆಕಲಿಯದಿದ್ದರೂಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸಸುಮಹಾ ಪೂರ್ವಸಾಧನದಿ ಎಂದರಿತರುಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದಉಪಚಾರಗಳನ್ನು ಕೊಂಡು ಬಾಲತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆಒಬ್ಬ ಬಾಲನು ತಮಗೂ ಬೇಕೆಂದರು 23ತಥಾಸ್ತು ಎನ್ನುತಲಿ ಪುರುಷೋತ್ತಮರತಂದೆ ತಾಯಿಗಳನ್ನು ಕರೆತರಿಸಿ ಬೇಗಮುದದಿ ಮಾಡಿದರು ಲಕ್ಷ್ಮೀನಾರಾಯಣಗೆವೇದಾಧಿಕಾರ ಬರುವಂಥ ಉಪನಯನ 24ಬಹ್ಮೋಪದೇಶಾದಿ ಮಂತ್ರೋಪದೇಶಗಳುವಿಹಿತ ರೀತಿಯಲ್ಲಿ ಆದ ತರುವಾಯಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸಮಹಾಪ್ರಣವಉಪದೇಶ ಕೊಟ್ಟರು ಗುರುವು25ಗುರುಸ್ವರ್ಣವರ್ಣ ತೀರ್ಥರು ವಾತ್ಸಲ್ಯವಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥಆಶ್ರಮೋಚಿತ ನಾಮ ಕೊಟ್ಟು ಬಾಲನ್ನಸೇರಿಸಿಕೊಂಡರು ತಮ್ಮ ಪರಂಪರೇಲಿ 26ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯಕಂದನು ದನ ಮೇಸೋ ಲಕ್ಷ್ಮೀನಾರಾಯಣಇಂದುಲಕ್ಷ್ಮೀನಾರಾಯಣ ತೀರ್ಥರಾಗಿವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀಧರಾದಿ ಗುರುಗಳಿಗೂ ಸುವರ್ಣವರ್ಣರಿಗೂಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 29 ಪ-ಪ್ರಥಮ ಕೀರ್ತನೆ ಸಂಪೂರ್ಣಂ-ದ್ವಿತೀಯಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪೀವಲ್ಲಭ ರಂಗ ಒಲಿದಿಹಮಹಂತಪಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆಆಮ್ನಾಯನಿಗಮಾಂತ ವಿದ್ಯೆಗಳ ಕಲಿಸೆಘನಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿಸಣ್ಣ ಯತಿ ಪ್ರಖ್ಯಾತರಾದರು ಜಗದಿ 1ವಿಭುದೇಂದ್ರ ರಘುನಾಥ ಮೊದಲಾದ ಯತಿವರರುಈ ಬಾಲಯತಿಯ ಪಾಂಡಿತ್ಯ ಪ್ರಭಾವವಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ'ಶ್ರೀಪಾದ ರಾಜರು&ಡಿsquo; ಎಂದು ವರ್ಣಿಸಿದರು 2ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರಮಂದಿಗಳು ವಿದ್ವಜ್ಜನರು ಸಜ್ಜನರು'ಆನಂದ ಉತ್ಸಾಹದಿ ಶ್ರೀಪಾದರಾಜ&ಡಿsquo;ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹರಂಗನಾಥನ್ನ ಕಂಡು ಸ್ಥಾಪಿಸಿ ಮಠವಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4ವರುಷಗಳು ಜರಗಿತು ಶ್ರೀಪಾದರಾಜರುಊರು ಊರಿಗೆ ದಿಗ್ವಿಜಯವ ಮಾಡುತ್ತಪರಪಕ್ಷ ಕುಮತಗಳ ಛೇದಿಸಿ ಸತ್ತತ್ವಆರುಪಿದರು ಯೋಗ್ಯಾಧಿಕಾರಿಗಳಿಗೆ 5ಮುಳಬಾಗಿಲು ಎಂದು ಆಧುನಿಕರು ಕರೆವಂಥಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನುಬಾಲೇಂದು ಶೇಖರನು ಗಿರಿಜಾ ಸಮೇತಶೈಲ ತೋಟಗದ್ದೆ ಅಟವಿಗಳು ಇಹವು 7ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿವರಮಧ್ವಸಿದ್ಧಾಂತ ಜಯ ಶಿಲಾ ಲಿಖಿತಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇಭಾರಿತರ ವಾದವು ನಡೆಯಿತು ಹಿಂದೆ 8ಶ್ವೇತಕೇತು ಉದ್ದಾಲಕರ ಸಂವಾದತತ್ವಮಸಿ ವಾಕ್ಯವೇ ವಾದ ವಿಷಯವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರುವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯಸ ಆತ್ಮಾ ತತ್ವಮಸಿ ಎಂಬುವಂಥಾದ್ದುಭೇದ ಬೋಧಕವೋ ಅಭೇದ ಬೋಧಕವೋಎಂದು ವಾದವು ಆ ಈರ್ವರಲ್ಲಿ 10ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂಭೇದವೇ ಬೋಧಿಸುವುದು ಆ ವಾಕ್ಯವೆಂದುಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರುಸೋತಿತು ವಿದ್ಯಾರಣ್ಯರ ಐಕ್ಯವಾದ 11ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರುವಿದ್ಯಾರಣ್ಯ ಎಂಬುವ ಮಹಾರಣ್ಯವತತ್ವಮಸಿ ಅಸಿಯಿಂದ ಅಕ್ಷೋಭ್ಯರುಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12ಶ್ರೀಪಾದರಾಜರ ಮಠವು ಆ ಸ್ಥಳಕೆಸಮೀಪವೇ ಅಲ್ಲುಂಟು ನರಸಿಂಹ ತೀರ್ಥಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿಭಗವಂತ ಶ್ರೀಪತಿಯ ಒಲಿಸಿಕೊಳ್ಳುವಮಾರ್ಗಭಾಗವತಧರ್ಮ ಸಚ್ಛಾಸ್ತ್ರ ಬೋಧಿಸಿದರು14ಅಲ್ಲಲ್ಲಿ ವಾದಿಸಿದುರ್ವಾದಿಕುಮತಿಗಳಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತಶೀಲತ್ವ ಔನ್ನತ್ಯ ವೇದ ಸನ್ನತಿಯ 15ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರುಶ್ರೀ ಪುರುಷೋತ್ತಮ ತೀರ್ಥರ ಕೈಯಿಂದಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿಪರಿಪಾಲಿಸುತ್ತಿದ್ದರು ಯತಿ ಧರ್ಮ 16ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿಮಹಾರ್ಹ ಕೇಶವನ ಆರಾಧಿಸುತಿಹರುಬಾಹ್ಯ ಜನರ ಸಂಪರ್ಕವಿಲ್ಲದಲೇ 17ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳುಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿಮಹಾತ್ಮ ಪುತ್ರನ ಹಡೆಯೆವರನೀಡಿದರು18ತಮಗೆ ಆ ಮಗುವನ್ನು ಕೊಡಬೇಕು ಎಂದುಬ್ರಹ್ಮಣ್ಯರು ಪೇಳಿದ್ದ ಅನುಸರಿಸಿಆ ಮಗುವ ದಂಪತಿಗಳ್ ನೀಡೆ ಶಿಶುವುಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದುಶ್ರೀಹರಿನೈವೇದ್ಯದಿಂ ವರ್ಧಿಸಿ ಬಾಲವಿಹಿತ ವಯಸ್ಸಲ್ಲೇವೇ ಉಪನಯನವು ಆಗಿಬ್ರಹ್ಮಣ್ಯರ ಕರದಿ ಲಭಿಸಿತು ಸಂನ್ಯಾಸ 20ಸರ್ವೋತ್ತಮ ಇಜ್ಯಪೂಜ್ಯ ಹರಿಸಾರಾತ್ಮಸರ್ವೇಶ ಶ್ರೀವ್ಯಾಸ ಶ್ರೀಶನ ನಾಮವ್ಯಾಸತೀರ್ಥರು ಎಂದು ಈ ಬಾಲಯತಿವರಗೆಆಶ್ರಮ ನಾಮವಿತ್ತರು ಬ್ರಹ್ಮಣ್ಯರು 21ಪ್ರಣವಾದಿ ಮಂತ್ರಗಳ ತಾವೇವೇ ಬೋಧಿಸಿಘನಬ್ರಹ್ಮ ವಿದ್ಯಾದಿ ಸಚ್ಛಾಸ್ತ್ರ ಕಲಿಯೆಸಣ್ಣ ಯತಿವರ ಶ್ರೀ ಪಾದರಾಜರಲಿಬ್ರಹ್ಮಣ್ಯತೀರ್ಥರು ಕಳುಹಿಸಿದರು 22ಶ್ರೀ ಪಾದರಾಜರು ವ್ಯಾಸರಾಯರಿಗೆಸುಪ್ರೀತಿಯಲಿ ಸರ್ವ ವಿದ್ಯೆಗಳ ಕಲಿಸಿತಾಪೋದಕಡೆ ದಿಗ್ವಿಜಯದಿ ಕರದ್ಹೋಗಿಈ ಬಾಲ ಯತಿಗಳ ಪ್ರಭಾವ ಹರಡಿದರು 23ಶ್ರೀಪಾದರಾಜರು ಸ್ವಭಾವದಿ ಕೃಪಾಳುಗಳುಈ ಪುಣ್ಯ ಶ್ಲೋಕ ಶ್ರೀಗಳ ಮಹಿಮೆ ಏನೆಂಬೆಸರ್ಪಬಾಧೆಯು ವ್ಯಾಸರಾಜರಿಗೆ ಸೋಕದೆಕಾಪಾಡಿಹರು ಆ ಆಹಿಯ ಹೋಗೆಂದು 24ಶಂಖತೀರ್ಥದ ಮಹಿಮೆ ಶ್ರೀಪಾದರಾಜರುಶಂಕೆಇಲ್ಲದೇ ತೋರ್ಪಡಿಸಿಹರು ಜಗಕೆಮಂಕುತನದಲಿ ಬ್ರಹ್ಮಹತ್ಯೆ ಮಾಡಿದವನಕಳಂಕ ಕಳೆದರು ಶಂಖತೀರ್ಥ ಪ್ರೋಕ್ಷಣದಿ 25ಸಂದೇಹಪರಿಹರಿಸೆ ಮಠದಿ ಜನತಿಳಿವುದಕೆತಂದಿಟ್ಟ ಕಪ್ಪುವಸ್ತ್ರದ ಮೇಲೆ ಶಂಖತೀರ್ಥ ಪ್ರೋಕ್ಷಿಸಿ ಶುಭ್ರ ಬಿಳಿಯಾಗಿ ಮಾಡಿದರುಸದಾ ಶರಣು ಇವರಿಗೂ ಶಂಖತೀರ್ಥಕ್ಕೂ 26ಕಂಜಭವಪಿತ ಪಾಂಡುರÀಂಗನು ಶ್ರೀಪಾದರಾಜರಿಗೆ ತಾನೇ ಒಲಿದದ್ದೇ ಕ್ಷೇತ್ರದಮಂಜೂಷದಲಿ ಭಾಮಾ ರುಕ್ಮಿಣೀ ಸಮೇತರಾಜೀವೇಕ್ಷಣ ರಂಗವಿಠಲನು ಒಲಿದಿಹನು 27ಸಾಳುವ ನರಸಿಂಹಾದಿ ರಾಜರು ಪ್ರಮುಖರುಪಾಳೆಯಗಾರರು ಮಂಡಲೇಶ್ವರರುಕೇಳಿಈ ಗುರುಗಳ ಪ್ರಭಾವ ನೋಡಿಕಾಲಿಗೆ ಎರಗಿಹರು ಬಹುಭಕ್ತಿಯಿಂದ 28ಮುಳಬಾಗಿಲು ಮಠಕೆ ಐವತ್ತು ಕ್ರೋಶದೊಳುಸಾಳುವ ನರಸಿಂಹ ರಾಜನ ಅರಮನೆಯುಎಲ್ಲ ಕಾರ್ಯಗಳನ್ನು ಶ್ರೀಪಾದರಾಜರಲಿತಿಳಕೊಂಡುಅವರಆಜÉÕಯಿಂದ ಆಳಿದನು29ಚಂದ್ರಗಿರಿ ಎಂಬುವ ಪಟ್ಟಣದಿ ಆ ರಾಜಮಂದಿರವು ವೇಂಕಟಾಚಲಕೆ ಸಮೀಪಚಂದ್ರಸೋದರಿ ರಮಣ ವೇಂಕಟೇಶನ ಪೂಜೆನಿಂತು ಹೋಗದೆ ಏರ್ಪಾಡು ಮಾಡೆಂದ 30ಗುರುಸಾರ್ವಭೌಮರು ಶ್ರೀಪಾದರಾಜರುಆ ರಾಜನ ಬಿನ್ನಹವನ್ನು ಲಾಲಿಸಿತ್ವರಿತದಿ ಶ್ರೀ ವ್ಯಾಸರಾಜರ ಕಳುಹಿಸಿತಿರುಪತಿ ವೇಂಕಟನ ಪೂಜೆಗೈಸಿದರು 31ರಾಜನ ಪ್ರಾರ್ಥನೆಗೆ ಒಪ್ಪಿ ಶ್ರೀಪಾದರಾಜರು ಅರಮನೆಗೆ ಪೋಗಲು ಅಲ್ಲಿಗಜತುರಗವಿಪ್ರಜನ ಪೂರ್ಣಕುಂಭಾದಿ ಸಹರಾಜನು ಸ್ವಾಗತವ ನೀಡಿದನು ಮುದದಿ 32ವೇದ ಘೋಷಗಳೇನು ಮಂಗಳದ್ವನಿ ಏನುವಾದ್ಯಮೇಳಗಳ ಸುಸ್ವರವು ಏನುಬೀದಿಯಲಿ ತೋರಣ ಪುಷ್ಪ ಮಂಟಪವೇನುಆದರದಿ ಸ್ವಾಗತದ ವೈಭವ ಏನೆಂಬೆ 33ಸಾಳುವ ನರಸಿಂಹನು ತನ್ನ ಸಿಂಹಾಸನದಲ್ಲಿ ಶ್ರೀ ಶ್ರೀ ಪಾದರಾಜರನ್ನಕುಳ್ಳಿರಿಸಿ ಕನಕಾಭೀಷೇಕವ ಮಾಡಿದ್ದನ್ನಅಳವೇ ವರ್ಣಿಸಲಿಕ್ಕೆ ನೋಡಲಾನಂದ 34ಶಿರಿ ರಮಣ ಶಿಂಶುಮಾರನ ಪಾದದಲಿ ಸ್ಥಿರಆಶ್ರಿತರು ಆದುದರಿಂದ ಧರೆಯಲ್ಲಿಹರಿಸಮರ್ಪಿತ ಸರ್ವ ಭೋಗ್ಯಭಾಗ್ಯಂಗಳುಅರಣ್ಯದಲ್ಲಿದ್ದರೂ ಜನರಿಗೆ ದೊರೆಯುವವು 35ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 36ತೃತೀಯ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪದೀನ ದಯಾಳು ಶ್ರೀ ಪಾದರಾಜರುಜನರು ಭಾಗೀರಥೀಯಾತ್ರೆ ಮಾಡಲಿಕೆಹಣವು ತ್ರಾಣವು ಸಾಲದು ಎಂದು ಅರಿತುಜಾಹ್ನವಿಯ ತರಿಸಿದರು ನೃಸಿಂಹ ತೀರ್ಥದಲಿ 1ಶ್ರೀಮಧ್ವಿಷ್ಣಂಘ್ರಿನಿಷ್ಠಾಃ ಅತಿ ಗುಣಗುರುತಮಶ್ರೀಮದಾನಂದ ತೀರ್ಥಃ ಎಂದು ಸಂಸ್ತುತ್ಯಶ್ರೀಮಧ್ವಾಚಾರ್ಯರ ಪ್ರಿಯತಮರು ಕರೆದಲ್ಲಿಅಮರ ತಟಿನೀ ಬಂದದ್ದೇನು ಆಶ್ವರ್ಯ 2ಶ್ರೀ ಮಧ್ವಿಷ್ಣಂಘ್ರಿ ಸಂಭೂತೆಯು ತನ್ನಯವಿಮಲ ತೀರ್ಥವ ನರಸಿಂಹ ತೀರ್ಥದಲಿಧಿಮು ಧಿಮು ಎಂದು ಪ್ರವಹಿಸಲು ಜನಸರ್ವರೂಸಮ್ಮುದದಿ ಪೂಜಿಸಿದರು ವಿಹಿತ ರೀತಿಯಲಿ 3ಹಿಂದೆ ಇಂದ್ರನು ತನ್ನಯ ವಜ್ರದಿಂದಅದ್ರಿಗಳ ಪಕ್ಷಿಗಳ ಕಡೆದ ತೆರದಿಇಂದುಶ್ರೀಪಾದರಾಜರು ಕುಮತ ಹೀರಿ ಪಕ್ಷಗಳಛೇದಿಸಿದರು ತಮ್ಮ ವಾಗ್ವಜ್ರದಿಂದ 4ಆನಂದ ತೀರ್ಥರ ನಿಜಾನಂದಪ್ರದ ಶಾಸ್ತ್ರಬಂದು ಬೇಡಿದ ಭಾಗ್ಯ ಅಧಿಕಾರಿಗಳಿಗೆಕುಂದುಕೊರತೆ ಏನೂ ಇಲ್ಲದೆ ಬೋಧಿಸಿಇಂದಿರೇಶನ ಪ್ರಸಾದವ ಒದಗಿಸಿಹರು 5ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಮೊದಲಾದ ಗ್ರಂಥಗಳ ರಚಿಸಿದ ಪ್ರಖ್ಯಾತವಾದಿಗಳಕೇಸರಿವ್ಯಾಸಮುನಿ ಮುಖ್ಯಮೇದಿನಿಸುರರಿಗೆ ವಿದ್ಯಾ ಕಲಿಸಿಹರು6ಶ್ರೀರಂಗ ವಿಠಲ ರುಕ್ಮಿಣೀ ಸತ್ಯಭಾಮಾತೋರಿ ತಾವೇ ತಮ್ಮ ಪ್ರತೀಕಗಳೊಳಗೆ ನಿಂತುಸೂರಿವರ ಶ್ರೀಪಾದರಾಜರ ಕೈಯಿಂದಭರದಿ ಪೂಜಾ ಸ್ತೋತ್ರ ಕೀರ್ತನೆ ಕೊಂಡಿಹರು 7ಅನುಪಮ ಅನುತ್ತಮ ಗುಣಗಣಾರ್ಣವ ರಮಾ -ನಾಥನು ಜಗಜ್ಜನ್ಮಾದ್ಯಖಿಲೈಕ ಕರ್ತಾವಿಷ್ಣು ಸರ್ವೇಶ್ವರ ಸ್ವತಂತ್ರಅನಘಮಹಿಮಾಕನ್ನಡ ನುಡಿಯಲಿ ಸಹಸ್ರಾರು ಹಾಡಿಹರು 8ಪ್ರತಿಒಂದು ಪದ ವಾಕ್ಯ ನುಡಿ ಪದ್ಯ ಕೀರ್ತನೆಯುಇಂದಿರಾಪತಿಯಲ್ಲಿ ನಿಶ್ಚಲ ಭಕ್ತಿಬಂಧಮೋಚಕ ಜ್ಞಾನ ಸಾಧನವಾಗಿರುವವುಆದರದಿ ಪಠಿಸೆ ಇಹಪರ ಸುಖಪ್ರದವು 9'ಸ್ಮರಿಸಿದವರನುಕಾವನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟೇಶ ನಮ್ಮಪೊರೆವ&ಡಿsquo; ಎಂದಾರಂಭಿಸುವ ಕೀರ್ತನೆ ಪಠಿಸೆಸುಶ್ರವಣವು ಮಾಳ್ಪರ ಭಾಗ್ಯವೇ ಭಾಗ್ಯ 10ಶ್ರೀಪಾದರಾಜರು ಶಿರಿ ವೇಂಕಟೇಶನತಾಪೋಗಿ ಕಂಡು ಧ್ಯಾನದಿ ಸದಾ ನೋಡಿಸೌಭಾಗ್ಯ ಪ್ರದ ಈ ಕೀರ್ತನೆ ಹಾಡಿಹರುಸುಪುಣ್ಯ ಭಾಗಿಗಳೇ ಪಠಿಸಿ ಕೇಳುವರು 11ಭಕ್ತಿಯಿಂದ ಪಠಿಸುವ ಕೇಳುವ ಸಜ್ಜನರುಓದಿ ಕೇಳಿದ್ದು ಕೃಷ್ಣಗರ್ಪಿಸಲುಬದಿಯಲ್ಲೇ ತಾನಿದ್ದು ಯೋಗಕ್ಷೇಮವ ವಹಿಪಶ್ರೀದ ವೇಂಕಟ ಜನಾರ್ದನ ಕೃಷ್ಣ ಶ್ರೀಶ 12ಧನ ಧಾನ್ಯ ಆರೋಗ್ಯ ಆಯುಷ್ಯ ಕೀರ್ತಿಯಘನವಿಘ್ನಕಷ್ಟ ಪರಿಹಾರ ಜಯ ಎಲ್ಲೂಜ್ಞಾನ ಉದ್ಭಕ್ತಿ ಸಂತೋಷಹರಿಅಪರೋಕ್ಷಸಾಧನವು ಇವರ ಈ ಕೀರ್ತನೆ ಪಠನ 13ಜಯ ಜಯ ಜಗತ್ರಾಣ ಜಗದೊಳಗೆಸುತ್ರಾಣಅಖಿಲಗುಣಸದ್ದಾಮ ಶ್ರೀ ಮಧ್ವನಾಮಾಜಯಾಸಂಕರುಷಣ ಸಂಭೂತ ಮುಖ್ಯ-ವಾಯು ಹನುಮ ಭೀಮ ಮಧ್ವನ ಸ್ತೋತ್ರ 14ಈ ಮಧ್ವನಾಮಾಖ್ಯ ಸ್ತವರಾಜವನ್ನುನಮ್ಮ ಶ್ರೀಪಾದ ರಾಜಾರ್ಯ ರಚಿಸಿನಮಗೆಲ್ಲರಿಗಿತ್ತು ನಮಗೆ ಸೌಭಾಗ್ಯವಪ್ರೇಮದಿಂದಲಿ ಒದಗಿಸಿಹರು ಕರುಣಾಬ್ಧಿ 15ಸ್ಮರಿಸಲಾಕ್ಷಣ ಕಾಯ್ವಪುರಂದರದಾಸಾರ್ಯರಪರಂಪರೆ ವಿಜಯಾರ್ಯ ಗೋಪಾಲದಾಸಾರ್ಯಸೂರಿಗೋಪಾಲಾರ್ಯ ಶಿಷ್ಯರು ಜಗನ್ನಾಥದಾಸರಾಯರು ಫಲಶ್ರುತಿ ಬರೆದಿಹರು 16ವರಮಧ್ವ ನಾಮಕ್ಕೆ ಬರೆದಿರುವ ಫಲಶ್ರುತಿಯಭರದಿ ಪಠಿಸುವವರು ಶ್ರೀ ಮಧ್ವನಾಮಉತ್ಕøಷ್ಟ ಮಹಾತ್ಮ್ಯ ಉಳ್ಳದ್ದೆಂದರಿವರುಬರುವುದು ಅನುಭವಕೆ ಮಧ್ವನಾಮ ಓದಿ 17ಶ್ರೀ ಲಕ್ಷ್ಮೀನಾರಾಯಣ ರಾಮ ಹಯಶೀರ್ಷಭೈಷ್ಮೀ ಸತ್ಯಾಯುತ ರಂಗ ವಿಠಲಶ್ರೀ ಮದಾಚಾರ್ಯ ಪೂಜಿತ ಗೋಪೀನಾಥನ್ನಸಮ್ಮುದದಿ ಪೂಜಿಸುವ ಯೋಗಿವರ ಆರ್ಯ 18ಗಂಗೆ ಪ್ರತಕ್ಷ ತೋರಲು ಬಾಗಿನ ಕೊಟ್ಟುಜಗ ಜನ್ಮದ್ಯಖಿಳ ಕರ್ತನ್ನ ಪೂಜಿಸುತ್ತಜಗದೇಕ ಗುರುಮಧ್ವ ಸಚ್ಚಾಸ್ತ್ರ ಭೋದಿಸಿಝಗಿ ಝಗಿಪ ತೇಜಸ್ಸಲಿ ಹೊಂದಿದರುಸಮಾಧಿ19ಶಾಲಿಶಕ ಹದಿನಾಲ್ಕುನೂರೆಂಟನೆ ವರುಷಶುಕ್ಲ ಚತುರ್ದಶಿ ಜೇಷ್ಠ ಮಾಸದಲ್ಲಿಶೀಲತಮ ಭಾವದಲಿ ಳಾಳುಕನ ಧ್ಯಾನಿಸುತಕುಳಿತರು ಸಮಾಧಿಯಲಿ ಹರಿಪುರಯೈದಿದರು 20ಶಿಂಶುಮಾರಪುರವನ್ನಯೈದಿತಾ ಮತ್ತೊಂದುಅಂಶದಲಿ ಸುಪವಿತ್ರ ವೃಂದಾವನದಿ ಭಾಸಿಸುತ ಇರುತಿಹರುಬ್ರಹ್ಮ ವಿದ್ಯಾಲಯ - ಶ್ರೀಶಪ್ರಿಯನರಸಿಂಹ ತೀರ್ಥ ಮಂದಿರದಿ 21ದರ್ಶನವು ಪಾಪಹರ ಪ್ರದಕ್ಷಿಣೆ ಹರಿಯಾತ್ರೆವಿಶ್ವಾಸದಿಂದ ನಮಸ್ಕಾರ ಸರ್ವೇಷ್ಟಐಶ್ವರ್ಯ ಜ್ಞಾನಾದಿ ಫಲಪ್ರದವು ಯೋಗ್ಯರಿಗೆಸಂಸ್ಮರಿಸಲು ಸರ್ವ ಸಿದ್ಧಿದಾಯಕವು 22ಸಿಂಧೂರಅಜಮಿಳ ಸುಧಾಮ ಪ್ರಹ್ಲಾದಾದಿಭಕ್ತರ ಪರಿಪಾಲಕರನು ಶ್ರೀರಮಾಪತಿಯಸದಾ ಒಲಿಸಿಕೊಂಡಿಹಮಹಂತಗುರುವರಶ್ರೀಪಾದರಾಜರೇ ನಮೋ ನಮೋಪಾಹಿ23ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯು ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 24|| ಇತಿ ಶ್ರೀ ಪಾದರಾಜರ ಅಣು ಚರಿತೆ ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಬಣ್ಣಿಸಲಮ್ಮೆ ನಾನು ಪ.ಬಣ್ಣಿಸಲಮ್ಮೆ ನಾ ಬಹಳ ಮಹಿಮ್ಮನಚಿನ್ಮಯ ನಗಾಧಿಪ ಚೆಲುವ ತಿಮ್ಮಪ್ಪನ ಅ.ಪ.ಇಳೆಯ ಮಾನವರೊಳು ಈಕ್ಷಿಸಿ ಕೃಪಾಳುಒಲಿದು ಕರುಣದಿಂದ ವೈಕುಂಠಪುರದಿಂದಇಳಿದು ಮಂಗಳದೇವಿಯನು ಕೂಡಿಕೊಂಡು ವಿಮಲ ಸ್ವಾಮಿಪುಷ್ಕರ ಮಹಾತೀರ್ಥದ ತೀರದಲಿ ನಿಂತು ಬೇಕಾದ ಧನಧಾನ್ಯ ಸಂಪದಹಲವು ಕಾಮ್ಯವನೀವ ಹೊಗಳಿದವರಕಾವಸುಲಭರೊಡೆಯನ ಕಂಡು ಹಸಿದ ಕಂಗಳಹಬ್ಬ ದಣಿಯಲುಂಡು ಬಹುತೋಷತುಳುಕುವ ಸುಜನವಿಂಡು ವಾರಂವಾರ 1ಪೇಳಲೇನಯ್ಯನ ಪರಿಸೆಯ ಸೊಬಗು ನಾಆಲಯದಿಂ ಗಡಾ ಜನಿಜನ ಸಂಗಡಚೋಳ ಚಪ್ಪರಮೊತ್ತ ಛತ್ರ ಚಾಮರ ಪತಾಕಾಳಿ ಸೀಗುರಿ ಢಕ್ಕೆ ಕೊಂಬು ಕಹಳೆ ಡೆಂಕೆಮೇಳೈಸಿ ಮಹಿಮರು ಮಹದಾನಂದದವರುಗೋಳಿಡುವರು ಹರಿಗೋವಿಂದ ಎನುವರುಕಾಲಾಟದಲ್ಲವರು ಕೀರ್ತಿಪ ಗೀತತಾಳ ದಂಡಿಗೆಯವರು ಬೆಳಗುವಸಾಲು ಪಂಜಿನವರು ವಾರಂವಾರ 2ವಾಂಛಿತಫಲಗಳು ಒದಗಲು ಹರಿಯೊಳುವಂಚನೆಯಿಲ್ಲದೆ ಒಂದೊಂದು ಬಗೆಯದೆಕಾಂಚನ ಮುಡುಪಿಲಿ ಕರಬದ್ಧಾಂಜಲಿಯಲಿಮಿಂಚುವ ಭಕ್ತಿಲಿ ಮಧುಕರ ವೃತ್ತಿಲಿಪಂಚಾಬ್ದಾದ್ಹಸುಳರು ಪ್ರಾಯದ ಅಬಲೇರುಹಿಂಚಾದ ವಯಸಾದ ಹಿರಿಯರು ಹರುಷದಿಸಂಚಿತಹರಕೆಯವರು ತೊಟ್ಟಿಲು ಮನೆಮಂಚವ ಹೊತ್ತವರು ದೇಶಗಳಿಂದಾಕಾಂಕ್ಷೆವಿಡಿದು ಬಂದವರು ವಾರಂವಾರ 3ಸ್ವಾಮಿ ವರಾಹಪಾದ ಸರಸಿಜಾಂಬುಸ್ವಾದತಾಮಹತ್ಯಂಕದ ಶಾತಕುಂಭಾಂಕದವೈಮಾನವಾಸನವಿಧಿಭವೇಂದ್ರೇಶನಕಾಮನ ಪಿತನ ಕಲಿಭಯಛಿತ್ತನಸೋಮಸೂರ್ಯಾಕ್ಷನಸಾಮಜಪಕ್ಷನಜೀಮೂತಗಾತ್ರನ ಜಿತಶತ್ರು ಸೂತ್ರನನೇಮದಿ ಕಂಡೆರಗಿ ಮೈಯೊಳುರೋಮ ಪುಳಕಿತರಾಗಿ ಭಕ್ತರಸ್ತೋಮವು ಮುಕ್ತರಾಗಿ ವಾರಂವಾರ 4ಗಿರಿಯೊಳಮಲಂತರ್ಗಂಗೆ ಪಾಪಾಂತೆವರಪಾಂಡುತೀರ್ಥ ಬಿಲ್ವಾಂಬು ಕಚ್ಛಪತೀರ್ಥಸಿರಿವರಾಹ ಮಚ್ಛಸಲಿಲಪಾವನಲಕ್ಷ್ಮಿಸರ ನಾರದೀಯ ಸರಸ್ವತೀಯ ತೋಯಮೆರೆವ ತುಂಬುರ ಜಲ ಮೊದಲಾದ ಸ್ಥಳಗಳಸರವ ಸನ್ನಿಧಪೂರ್ಣ ಸ್ವಾಮಿ ಪುಷ್ಕರಿಣಿಯನೆರಕೊಂಡು ಪೂತಾಂಗರು ಹರಿಪಾದಸರಸಿಜರತ ಭೃಂಗರು ಜ್ಞಾನೋನ್ಮತ್ತಭರಿತಾಂಗ ಮತ್ತಾಂಗರು ವಾರಂವಾರ 5ನಳಿನಾಕ್ಷ ಪದವಾರಿನಿತ್ಯಸೇವಿಸಿಸಿರಿತುಲಸಿ ತುದಿಯ ಪೊನ್ನತಳಗಿಯದಧ್ಯನ್ನಬಲುರುಚಿ ಅನ್ನವಾಲು ಬಕುಳನ್ನ ಪೊಂಗಲುಸಲೆ ಮೃದು ಗಾರಿಗೆ ಸುಕಿನುಂಡೆ ಗುಳ್ಳರಿಗೆಪುಳಿ ತಿಕ್ತ ಮಧುಮಿಶ್ರ ಪಲಸು ಪಾಲಿನ ದೋಸೆಪಲವು ಪರಿಯ ಘೃತವು ಪಕ್ವ ಪಂಚಾಮೃತಪಾಲ ತೈಂತೊಳೆ ಮನೋಹರ ಪ್ರಸಾದುಂಡುಕಳೆಯೇರುವರು ಮನೋಹರ ಅಲ್ಲಿಗಲ್ಲಿನಲಿವ ದಾಸರ ಮೋಹರ ವಾರಂವಾರ 6ಪೂವಿನಂಗಿಯ ಚೆನ್ನ ಪುಳಕಾಪುಮಜ್ಜನನವ್ಯೋತ್ಸಾಹದಲ್ಲಿಹ ನರಮುನಿಸುರಸಹಸೇವ್ಯಾನಂದನಿಲಯ ಸಾಮಗಾಯನ ಪ್ರಿಯದಿವ್ಯ ರತ್ನಾಭರಣ ದೀಧಿತಿ ಸಂಕೀರ್ಣಹವ್ಯಾಸದನುದಿನ ಹನುಮಗರುಡಯಾನಸವ್ಯಾಪಸವ್ಯ ಭವಭೂಷಿತ ಸ್ಥಿತಸೂರ್ಯಾರೂಢನ ಮೂರ್ತಿಯ ಭೂವೈಕುಂಠಸುವ್ಯಕ್ತವಹ ವಾರ್ತಿಯ ಪ್ರಸನ್ವೆಂಕಟವ್ಯಾಕೃತನ ಕೀರ್ತಿಯ ವಾರಂವಾರ 7
--------------
ಪ್ರಸನ್ನವೆಂಕಟದಾಸರು