ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಾದರೊಂದು ದಿನ ನಿಂದು ನೋಡುವೆ ನಿನ್ನ ಸುಂದರ ಪದಾಂಬುಜವ ಇಂದಿರೇಶ ಪ ಬಂದ ಸುಖ ದು:ಖಗಳ ಒಂದಾಗಿ ತಿಳಿಯುತಲಿ ತಂದೆ ಗೋವಿಂದ ಸಲಹೆಂದು ನಂಬಿರುವಾಗ ಅ.ಪ ಮಾ ಮನೋಹರಾ ನಿನ್ನ ನಾಮ ಭಜನೆಯ ಗೈದು ಕಾಮಿತಾರ್ಥಂಗಳನು ನಾ ಮರೆಯುತೇ ನಾಮಾಳ್ಪ ಕರ್ಮಗಳ ನೇಮದಿಂದಲಿ ಗೈದು ರಾಮಾರ್ಪಣಾ ಎಂದು ಪ್ರೇಮದಿಂದರ್ಪಿಸಲು 1 ಬಂದ ಅಭ್ಯಾಗತರಿಗೊಂದು ಪಿಡಿ ಅನ್ನವನು ಎಂದೀಯಲೀವೆಯೋ ಅಂದು ಹರಿದಿವಸ ಎಂದೀಯಲಾರೆಯೋ ಅಂದೆನಗುಪೋಷ್ಯವನು ಸಂದೇಹವಿಲ್ಲದೀಯೆಂದು ನಂಬಿರುವಾಗ2 ದೊರೆಯದಿಹ ವಸ್ತುಗಳು ಹರಿಸಮರ್ಪಣವೆಂಬೆ ದೊರೆತ ವಸ್ತುಗಳೆಲ್ಲ ಹರಿಕರುಣವೆಂಬೆ ಗರುಡವಾಹನ ನಿನ್ನ ಶರಣು ಹೊಕ್ಕಿರುವಾಗ ಕೊರತೆ ಏನಿಲ್ಲ ಮಾಂಗಿರಿ ರಂಗವಿಠಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆಡುವ ಬಾರೋ ಕೃಷ್ಣ ಓಡಿಬಾರೋ ಪ ನಾಡೆ ನಿನ್ನ ನೋಡಬಯಸಿ ಹಾಡುವೆನ್ನ ಕಣ್ಣಮುಂದೆ ಅ.ಪ ಓಡಿಬರುವೆ ನೀನು ಎಂದು ನೋಡಿ ಹಸುಗಳತ್ತ ಇತ್ತ ಬೇಡುತಿಹವು ನಿನ್ನ ಬರವ ಮೋಡಿಯೇಕೆ ಕೊಳಲನೂದಿ 1 ಕರವ ನೀಡಿ ಮಣ್ಣಮೆದ್ದನೆಂದು ತಾಯ ಕಣ್ಗೆ ತೋರ್ದೆ ಜಗವನೆಲ್ಲ 2 ಪೊಂಗಲೀವೆ ಬಾ ಮುಕುಂದ ಹೊಂಗೊಳಲಾನಂದದಿಂದ ತಂಗುವೆ ನಾ ನಿನ್ನ ಪಾದದಿ ಮಾಂಗಿರೀಶ ಮುದ್ದುರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಧವ ರಕ್ಷಿಸು ಮಧುಸೂದನ ವೃಥಾ ಕ್ರೋಧವ್ಯಾಕೊ ಸುರ ಸೌಖ್ಯ ಸಾಧನ ಪ. ದೇಹದಲ್ಲಿ ಬಲ ಕುಂದುತಲಳುವೆ ಮುಂದ- ಕ್ಕಾಹ ರೀತಿ ತಿಳಿಯದೆ ಬಳಲುವೆ ಮೋಹ ಪಾಶದಲಿ ಸಿಕ್ಕಿ ನರಳುವೆ ಚಿತ್ಸಂ- ದೋಹ ಎಂದು ತವಪಾದ ನೆಳಲೀವೆ 1 ಯಾತಕಿಂತು ಸಾವಕಾಶ ಮಾಡುವಿ ದೀನ ನಾಥ ಬಹು ಪರಿಕಿಸಿ ನೋಡುವಿ ಪಾತಕಾಂಶವಿರಲು ನೀಡಾಡುವಿ ಎನ್ನ ಮಾತನ್ಯಾಕೆ ಮರೆತು ಮುಂದೋಡುವಿ 2 ನಿತ್ಯವಾದ ನಿನ್ನ ಸೇವೆ ನಡೆಸಲು ತಕ್ಕ ಶಕ್ತಿಯಿಲ್ಲ ಸ್ವರವನ್ನೆತ್ತರಿಸಲು ಒತ್ತಿ ಬಹ ವಿಧ ವಿಧ ಕೊರೆತವು ಗಂಡ ಕ್ಲೇಶ ಭರಿತವು 3 ಸಿರಿನಲ್ಲ ಹೀಗೆ ಭೃತ್ಯನನ್ನು ಬಿಡುವುದು ಥರವಲ್ಲ ದತ್ತ ಸ್ವಾತಂತ್ರ್ಯವರಿಯದ ಕ್ರಮವೆಲ್ಲ ತೀರಿ ಕತ್ತಲೆ ಮುಸುಕಿದಂತಿರುವುದಲ್ಲ 4 ಮಾಯಕ ಮೋಹದಿ ಸಿಕ್ಕಿ ನೊಂದೆನು ತಿಮ್ಮ ರಾಯ ಶೇಷ ಗಿರೀಶ ಕೇಳ್ಮುಂದೇನು ಬಾಯ ಬಿಟ್ಟು ಬಿರಿನುಡಿಯಂದೆನು ಲಕ್ಷ್ಮೀ ಪ್ರೀಯನೆಣಿಸದಿರದ ನೊಂದೆನು 5
--------------
ತುಪಾಕಿ ವೆಂಕಟರಮಣಾಚಾರ್ಯ
ವನರುಹ ನಯನಾ | ವನಜೇಕ್ಷಣ ಪ್ರಿಯವನರುಹ ನಯನಾ | ಪ ತನುಮನ ಧನಗಳಾ | ನಿನಗರ್ಪಿಸುವಂಥಜನರ ಮನೋರಥ | ಅನುನಯದಿಂದಲೀವೆ 1 ಮನಸಿಜ ಜನಕನೇ | ಫಣಿಶೈಲ ಸದನನೇಅನಲಾಕ್ಷನ ಪ್ರಿಯ | ಗುಣ ಪರಿಪೂರ್ಣ 2 ಮನೆ ಮಗ ಮಡಧ್ಯಬಿ | ಮಾನವು ಪೋಗಲಿಲ್ಲಘನ ವಿಷಯಕೆ ಮನ | ಅನುಸರಿಸುವುದಯ್ಯ 3 ಕನಸು ಮನಸಿನೊಳು | ನಿನಪದ ಧ್ಯಾನವಅನುನಯದಿಂದಲಿತ್ತು | ಜನುಮ ಸಾರ್ಥಕ ಮಾಡೊ 4 ವ್ರಜ ಕರ ಪಿಡಿದು 5
--------------
ಗುರುಗೋವಿಂದವಿಠಲರು
ವ್ಯಾಸರಾಯ ನಿನ್ನ ಅನುದಿನಾ | ಸ್ಮರಿಪ ಜನಕೆತೋಷದಿಂದ ಲೀವೆ ಸಾಧನಾ |ವಾಸುದೇವ ಕೃಷ್ಣಲೀಲೆ | ರಾಶಿಗುಣವ ಬೋಧಿಸುತ್ತಶ್ರೀಶ ಪಾದಪದುಮ ಕಾಂಬ | ಲೇಸು ಮುಕ್ತಿ ಮಾರ್ಗತೋರ್ವೆ ಅ.ಪ. ಏಸೊ ಮುನಿಗಳಿದ್ದು ಮಾಡದಾ | ಶಾಸ್ತ್ರವೆಂಬ ಭೂಷಣಂಗಳ್ಹರಿಗೆ ತೊಡಿಸಿದಾ |ಕೇಶವನೆ ಸರ್ವೋತ್ತಮನು | ದೋಷದೂರನೆಂದು ತಿಳಿಸಿಮೋಸಪಡಿಪ ಮಾಯಿ ಮತವ | ಘಾಸಿಮಾಡಿ ಜಯವ ಪಡೆದೆ 1 ವಾಸುದೇವ ವಾಲೀಲೆಯಏಸೊ ವಾದಿ ಜಯದ ಪತ್ರ | ಭೂಷಣಗಳ್ ಶ್ರೀಶಗಿತ್ತೆ 2 ಶೇಷನಾವೇಶದಿಂದಲಿ | ಪುಟ್ಟಿ ನೀವುವ್ಯಾಸರಾಯರೆಂಬ ಪೆಸರಲಿ |ದೇಶ ಪತಿಗೆ ಬಂದ ಕುಹು | ದೋಷಯೋಗ ಹರಿಸುತ ಸಿಂಹಾಸನೇರಿ ಜಗದಿ ಬಹಳ | ಭಾಸುರ ಸುಕೀರ್ತಿ ಪಡೆದೆ 3 ನ್ಯಾಯ ಗ್ರಂಥವೆಂದು ಕರೆಸಿಹ | ಚಂದ್ರಿಕಾದಿನ್ಯಾಯಾ ಮೃತವು ತರ್ಕ ತಾಂಡವ |ಗೇಯದಿಂದ ತುಚ್ಛ ಭಾಷ್ಯ | ಗಾಯನ ಮಾಡ್ದದುರ್ಮತೆನ್ನ ಮಾಯಿಮತವ ಗೆದ್ದು ಮಧ್ವ | ಧೇಯ ಸಾಧಿಸೀದ ಗುರುವೆ 4 ಪರಮ ಶಿಷ್ಯರೆಂದು ಮೆರೆವರಾ | ವಿಜಯಿಂದ್ರವರ ಸುವಾದಿರಾಜರೆಂಬರಾ |ಗುರುಗಳಾಗಿ ಯತಿ ಸುರೇಂದ್ರ | ವರ ಸುಪುತ್ರ ಭಕ್ಷೆ ಬೇಡೆಪರಮ ಹರುಷದಿಂದ ವಿಜಯ | ಇಂದ್ರರನ್ನ ಕಳುಹಿ ಪೊರೆದೆ 5 ಜ್ಞಾನಿಯರಸ ವ್ಯಾಸ ಮುನಿಗಳಾ | ಮನುಜರೆಂದುಹೀನ ಜನರು ಪೇಳೆ ಆವರ್ಗಳಾ |ಭಾನುಸೂನು ನರಕ$ನೇಕ | ಕಾಣಿಸುತ್ತ ಹಿಂಸಿಸೂವಶ್ರೀನಿವಾಸ ಹರಿಯ ಮುಂದೆ | ಗಾನ ಗೈದು ಆಡುತಲಿಪ್ಪ 6 ಪರಮಹಂಸ ಮುನಿಯು ಮನದಲಿ | ಪೂಜೆಗೈದುಹರಿಯ ಕಾಂಬ ಹೃದಯ ಗುಹೆಯಲಿ |ಗುರುವರ ಬ್ರಹ್ಮಣ್ಯ ಪೂಜ್ಯ | ಗುರು ಗೋವಿಂದ ವಿಠ್ಠಲಾನಚರಣ ವನಜ ಧ್ಯಾನಾಸಕ್ತ | ವರ ಸುನವ ವೃಂದಾವನಸ್ಥ 7
--------------
ಗುರುಗೋವಿಂದವಿಠಲರು