ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಬರಿದೇ ಚಿಂತಿಸಲಿ ಬ್ಯಾಡಾ | ಹರಿಚರಣ ಸ್ಮರಿಸಿ ಸುಖಿಯಾಗು ಕಂಡ್ಯಾ ಪ ಕರ್ಮ ಜನಿತ ಲಾಭಾ ಲಾಭ | ವಿಧಿ ವರೆದ ಪರಿಯಾ | ತನ್ನಿಂದ ತಾನೇ ಬಹದೆಂದು ಖರಿಯಾ | ಇನ್ನು ತಾ ಬಯಸಿದರೆ ಬಾರದರಿಯಾ | ನಿನ್ನೊಳು ನೀ ತಿಳಿದು ನಂಬು ಹರಿಯಾ 1 ಬಸಿರೊಳಗ ಬೆಳೆಸಿ ಶಿಶುತನದಿಂದ ಯೌವನದ | ದೆಸೆಗೊಟ್ಟು ಸಲುಹಿದ ನಲ್ಲವೇನೋ | ಬಿಸಜಾಕ್ಷ ಅಸಮರ್ಥನಾದನೇನೋ | ಕುಶಲ ನಾನೆಂದ-ಹಂಕರಿಸಿದೇನೋ 2 ಬೊಂಬಿಯಾನು ಆಡಿಸುವ ಸೂತ್ರಧಾರಕನಂತೆ | ಇಂಬಾಗಿ ಕುಣಿಸುವನು ಪ್ರಾಣಿಗಳನು | ಡಿಂಬಿನೊಳು ನಿಂತು ತಾ ಚೇತಿಸುವನು | ಕುಂಭಿನಲಿ ಸ್ವತಂತ್ರನಲ್ಲ ನೀನು | ಅಂಬುಜನಾಭನ ಲೀಲೆಯೆಂದು ಕಾಣು 3 ಬದಿಲಿದ್ದ ಪಾತ್ರೆಯನು ಬಾವಿಯೊಳಗದ್ದಿದ್ದರೆ | ಉದಕ ತುಸು ಬಹದೆಂದು ನುಡಿದು ಸೊಲ್ಲಾ | ನದಿಯೊಳೆದ್ದಲು ನೀರು ಹೆಚ್ಚದಲ್ಲಾ | ಇದನರಿಯದೆವೆ ಭ್ರಾಂತಿಯೊಳಗ ಖುಳ್ಳಾ | ಕುದಿದು ಸಂಸಾರದಲಿ ಸೊರಗಿದನೆಲ್ಲಾ 4 ಗುರು ಮಹಿಪತಿಸ್ವಾಮಿ ಬೋಧಾಮೃತವ ಸವಿದು | ಹರಿಚರಣದಲಿ ಭಾರವಪ್ಪಿಸಿಟ್ಟು | ದೊರಕಿದದರಿಂದ ಸಂತುಷ್ಟಬಟ್ಟು | ಸ್ಥಿರಚಿತ್ತನಾಗಿ ಕಳವಳಿಕೆ ಬಿಟ್ಟು | ತರುಣೋಪಾಯದ ತಿಳಿಯೋ ಜ್ಞಾನಗುಟ್ಟು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಾಂತ ಶಾಂತವು ಎಂದು ಎಂಬರಿ ನಿಮ್ಮನುಶಾಂತವಿಂತಿರುತಿರೆ ಶಾಂತಶಾಂತವಿಂತಿರೆ ಜೀವ ಮುಕ್ತನುಶಾಂತಿಲಿ ಭ್ರಾಂತಿರೆ ಭಯವುಕೃತಾಂತಪಸತಿಜಾರೆಯಾಗಲು ಗುರುನಾಥಲೀಲೆಯೆಂದುಸತಿಗನುಕೂಲವೇ ಶಾಂತಖತಿಯ ಮಾಡಲು ನಾನಾಜನರು ಚಂಚಲವಾಗದಸ್ಥಿತಿಯೇ ಶಾಂತ ಸತತ ಸಂಸಾರ ಕರಕರೆ ಬಳಲಿಕೆಸಂಗವಿಲ್ಲದಿಹುದೇ ಶಾಂತಅತಿ ಚೋರ ಸುಲಿದೊಯ್ಯೆ ಆನಂದದಲಿನಸುನಗುತಿರುವುದೇ ಶಾಂತ1ವಿಷವನಿಕ್ಕಿದವರನ್ನು ಕಾಣಲು ಅವರೊಳುವಿಶ್ವಾಸವಿಹುದೇ ಶಾಂತದುಶ್ಮನನು ತನ್ನನ್ನು ಕಡಿಯಬರೆ ಇದುಮೋಕ್ಷವೆಂಬುದೆನೆ ಶಾಂತಮುಸುಕಿನ ಮಾತ ಊರ ಮುಂದಿಕ್ಕಲುಮತಿಗೆಡದಿಹುದದು ಶಾಂತಹಸಿದು ಮಕ್ಕಳು ಅಳೆ ಹೆಂಡತಿ ರೋಧಿಸೆಕುಸಿದು ಬೀಳದೊಡದು ಶಾಂತ2ಕೊಟ್ಟಿದ್ದು ಸುಳ್ಳು ಎಂಬುವರೆದುರಿಗೆಕೊಟ್ಟಿಲ್ಲವೆಂಬುದೇ ಶಾಂತಭ್ರಷ್ಟರು ನಾನಾ ನಿಂದೆಯ ಮಾಡಲುಭಯ ಹುಟ್ಟದಿರುವುದೇ ಶಾಂತಬಿಟ್ಟುಹೋಗಲು ತನ್ನಸತಿಸುತರೆಲ್ಲರುಭ್ರಾಂತಿಯ ತೋರುವುದೇ ಶಾಂತದಿಟ್ಟ ಚಿದಾನಂದ ಸದ್ಗುರು ತಾನಾಗಿದೃಢನಾಗಿಹುದದು ಶಾಂತ3
--------------
ಚಿದಾನಂದ ಅವಧೂತರು