ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾನ ಹರಿನಾಮ ಕೀರ್ತನೆಯ ಗಾನ ಪರಮಾದರವಿದ್ದರೆ ಗಾನ ಪ ಗಾನದಿಂದ ಹರಿಯುವ ಬಾಷ್ಪಾಂಜಲಿ ಭಾನುವಂಶ ಶೇಖರಿನಿಗುಪಾಯನ ಅ.ಪ ಗಾನರಸದ ಮಜ್ಜನದಿಂದಲಿ ಮನ ಕಾಣಲು ಶಮದಮ ಸುಖಗಳನು ಕೂರ್ಮ ಮೊದಲಾದ ರಮೇಶನ ನಾನಾ ಲೀಲೆಗಳನ್ನು ಪೊಗಳುವುದೇ 1 ನಾರಿಯ ಸೌಂದರ್ಯಕೆ ಮಾಂಗಲ್ಯವು ಕಾರಣವಾಗುವ ತೆರದಲ್ಲಿ ಹೇರಳ ಗಾಂಭೀರ್ಯವ ರಸಪುಂಜಕೆ ಬೀರುವ ಶೌರಿಯ ಮಧುರನಾಮಗಳೆ2 ಆದಿವ್ಯಾಧಿ ಜನನಾದಿ ವಿರೋಧದ ಬಾಧೆಯ ಕಳೆಯುವ ಔಷಧಿಯು ಮಾಧವ ಮಧುಸೂಧನ ಶ್ರೀಧರಪರ ಬೋಧ ಪ್ರಸನ್ನನ ಮಧುರ ನಾಮಗಳೇ 3
--------------
ವಿದ್ಯಾಪ್ರಸನ್ನತೀರ್ಥರು
ಚನ್ನಕೇಶವ ನಿನ್ನ ಭಜನೆಯೊಂದುಳಿದು ನಾ ನನ್ಯರ ನಂಬೆನು ಸಲಹಯ್ಯ ಹರಿಯೇ ಪ ತರಳಾ ಧೃವನಂತೆ ತಪಸ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಸರಸ ಜಾಂಬುಕಿಯಂತೆ ಸೇವೆಯನರಿಯೆನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೇ 1 ದಾಸ ಕನಕನಂತೆ ಭಕ್ತಿಯ ನರಿಯೆನು ವಾಸುಕಿಯಂತೆ ನಾ ಯಾಚನೆಯರಿಯೇ ದಾಸ ಮಾರುತಿಯಂತೆ ದಾನತ್ವವರಿಯೆನು ವಾಸವನಂತೆ ನಾ ಕೀರ್ತನೆಯರಿಯೇ 2 ಹರಿಯ ಲೀಲೆಗಳನ್ನು ಒಂದಿಷ್ಟನರಿಯೆನು ಹರಿ ಪೂಜೆ ಸೇವೆಯ ಸ್ಮರಣೆಯನರಿಯೇ ಹರಿಯ ಮನೆ ಘಂಟೆಯ ಬಾರಿಸಲರಿಯೆನು ಸಿರಿ ಚನ್ನಕೇಶವ ಮಹಿಮೆಯನರಿಯೇ 3
--------------
ಕರ್ಕಿ ಕೇಶವದಾಸ
ದೇವಿ ಯಶೋದೆಯು ದೇವ ಶ್ರೀ ಕೃಷ್ಣಗೆ ಪ. ಅಷ್ಟು ಬ್ರಹ್ಮಾಂಡವ ಪೊಟ್ಟೆಯೊಳಿಂಬಿಟ್ಟ ದಿಟ್ಟ ಶ್ರೀ ಕೃಷ್ಣಗೆ ಸೃಷ್ಟಿಯೊಳ್ ಸುಖಿಸೆಂದು 1 ದಿಟ್ಟಡಿಯಿಡುತಲಿ ದಿಟ್ಟ ಲೀಲೆಗಳನ್ನು ನೀ ನಷ್ಟು ತೋರಿಸು ಎಂದು ಪುಟ್ಟ ಶ್ರೀ ಕೃಷ್ಣನ 2 ಅಷ್ಟೈಶ್ವರ್ಯದಿ ದಿಟ್ಟ ಶ್ರೀ ಶ್ರೀನಿವಾಸ ಸುಖಿಸೆಂದು 3
--------------
ಸರಸ್ವತಿ ಬಾಯಿ
ಪಾಲಿಸು ಪಾಲಿಸು ಪಾಲಯಮಾಂ ಸತತಇಂದಿರಾದೇವಿ ಪಪಾಲಿಸು ಪನ್ನಗವೇಣಿಪಾಲಿಸುಪಂಕಜಪಾಣಿಪಾಲಿಸು ಗುಣಗಣ ಶ್ರೇಣಿ ಪಾಹಿನಿತ್ಯ ಕಲ್ಯಾಣಿ ಅ.ಪಬಾಲಕನು ತಾನಾಗಿ ಗೋಪಿಗೆಬಾಲಲೀಲೆಗಳನ್ನು ತೋರಿದಶ್ರೀಲಲಾಮನನ್ನು ಮೆಚ್ಚಿಮಾಲೆಹಾಕಿದಂಥ ಲಕ್ಷ್ಮಿ 1ಅಂಬುಧಿಯೊಳ್ ಶಯನಿಸಿದಕಂಬುಕಂಧರಹರಿಯಬೆಂಬಿಡದೆ ಸೇವಿಪ ಭಕ್ತ ಕು-ಟುಂಬಿ ನಿನ್ನ ನಂಬಿದವರ 2ನಿನ್ನನೆ ನಾನಂಬಿರುವೆ-ನನ್ಯರ ನಾಶ್ರಯಿಸದಲೆಸನ್ನುತಾಂಗಿ ಎನ್ನ ಮನದ-ಲಿನ್ನು ಹರಿಯಪಾದತೋರು3ಸರಸೀಜಾಸನ ಮಾತೆಸ್ಮರಿಸುವೆ ನಿನ್ನಯಪಾದಸ್ಮರಣೆ ಮರೆಯದಂತೆ ಕೊಟ್ಟುಹರಿಯ ತೋರು ಹರುಷದಿಂದ 4ಕಮಲೇ ಹೃತ್ಕಮಲದಿ ಶ್ರೀಕಮಲನಾಭ ವಿಠ್ಠಲಮಿನುಗುವಂಥ ಸೊಬಗು ತೋರುವಿನಯದಿಂದ ನಮಿಪೆ ನಿನ್ನ 5
--------------
ನಿಡಗುರುಕಿ ಜೀವೂಬಾಯಿ