ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ 1 ಮಣಿಪ್ರಚುರ ಮುತ್ತಿನ ಮುಕುಟ ಸು | ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ| ಕೌಸ್ತುಭ ಸೂರ್ಯನಗೆಲ್ಲ್ಲೆ | ವನಮಾಲೆ ಹರಿಮಣಿ ಪದಕ ಪಾ | ವನ ಪೀತಾಂಬರ ಮಿನಗುವ ಕಾಂಚಿ | ಝಣ ಝಣ ಮಹಾ | ಧ್ವನಿ ಚರಣ ಭೂಷಣವಾಗಿಯೂ ಮಾ | ನಿನಿ ಕೂಡಾ 2 ಎತ್ತಿದ ಶ್ವೇತಾತಪತ್ರ ಚಾಮೀಕರ | ವಿತ್ತ ನಭ ತುಳುಕುತ್ತಲಿರೆ ಧ್ವಜ | ಮಾತ್ರ ಬಂದಾಗಿ ತೂಗುತ್ತಿರಲು | ಸುತ್ತಲು ಊದುವ ತುತ್ತುರಿ ಶಂಖ | ವತ್ತಿ ಬಾರಿಸುವ ಮತ್ತೆ ವಾದ್ಯಗಳು | ತುತ್ತಿಸುವ ಮುನಿ | ಉತ್ತಮ ಜನ ಬಾ | ಗುತ್ತ ವಡನೆ ಬರುತಿರಲು 3 ವಸು ರುದ್ರಾದಿತ್ಯ ವಸುಜನರ ಪಾ | ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ ರಸ ನಾಮಕ ಹರುಷದಿಂದ | ನಸುನಗುತ ನೀಕ್ಷಿಸಿಕೊಳುಂತ ಆ | ಲಸ ಮಾಡದೆ ರಂ | ಜಿಸುವ ಲೀಲಾಮಾನಸ ವಿಗ್ರಹ ಮೆ | ಚ್ಚಿಸಿದ ಜನರ | ವಶವಾಗಿಪ್ಪ ರಾಕ್ಷಸ ರಿಪು 4 ವನಧಿ ಚಿನ್ಮಯ ಉ | ಭಯಾ ಭಯ ಹಾರೆ | ಪಯೋವಾರಿ ನಿಧಿ | ಶಯನ ಚತುರ್ಬೀದಿಯಲಿ ತಿರುಗಿ | ಪ್ರೀಯದಿಂದಲಿ ಸ | ತ್ಕ್ರಿಯವಂತ ಜಯ ಜಯ ಪ್ರದಾ | ಸಾರಥಿ ನಿ | ರಯ ವಿದೂರ ವಿಜಯವಿಠ್ಠಲ ಸಾ | ಹಾಯವಾಗುವ ಗಿರಿಯ ವೆಂಕಟರಾಯ ಬಂದಾ 5
--------------
ವಿಜಯದಾಸ
ಶೌರಿ ಬಾರೋ ಭಕ್ತರ ದೊರೆ ಬಾರೋ ಬಾಬಾ ಮನೆಗೆ ಪ ಚಾರುತರ ನವರತುನದ ಶೃಂ- ಗಾರ ರಥದೊಳು ಕುಳಿತು ಬೇಗನೇ ಭೇರಿ ವಾದ್ಯಗಳೆಲ್ಲ ಮೊಳಗಲು ನಾರಿ ರುಕ್ಮಿಣಿ ಭಾಮೆ ಸಹಿತಅ.ಪ ಸುರರು ಅಸರರು ಕೂಡಿ ಶರಧಿಯ ಮಥಿಸಲು ಭರದಿ ಪುಟ್ಟಲು ಸುಧೆಯು ಪರಮ ಹರುಷದಿಂದ ದೊರಕಿತಮೃತವೆಂದು ಅಸುರರೆಲ್ಲರು ಬರಲು ಬೆರಗಾಗಿ ಸುರರೆಲ್ಲ ಉಪಾಯವನರಿಯದೆ ಗಗನ ನೋಡುತಿರಲು ತ್ವರದಿ ಶ್ರೀಹರಿ ಅವರ ನೋಡುತ ಪರಿಪರಿಯ ಆಭರಣ ಪೀತಾಂ- ಬರಗಳಿಂದಲಂಕರಿಸಿ ಸುಂದರ ತರುಣಿ ರೂಪವ ಭರದಿತಾಳಿದೆ 1 ಹರಿಯ ಸ್ತ್ರೀರೂಪವ ಪರಶಿವ ಸ್ಮರಿಸುತ ಮರಳಿ ನೋಡಲಪೇಕ್ಷಿಸೆ ಪರಿ ಪ್ರಾರ್ಥಿಸೆ ಪರಮಾತ್ಮ ನುಡಿದನು ಇದುತರವಲ್ಲೆನುತ ಉರಗ ಭೂಷಣನ ಪ್ರಾರ್ಥನೆ ಸಲಿಸುವೆನೆಂದು ತರುಣಿಯಾದನು ಹರಿಯು ಪರಮಸೂಕ್ಷ್ಮದ ವಸನ ವಡ್ಡ್ಯಾ- ಣಗಳಲಂಕರಿಸುತ್ತ ವನದೊಳು ಚರಿಸುತಿರೆ ಹರ ಬೆರಗಾಗಿ ಹಿಂದೋ- ಡುತಲಿ ಬರೆ ಮರೆಯಾದ ದೇವನೆ 2 ಹಿಂದೆ ದೈತ್ಯನು ಬಹುಚಂದದಿ ತಪಗೈದು ಕಂದುಗೊರಳನ ಮೆಚ್ಚಿಸೇ ಬಂದನಾಗಲೇ ಶಂಭು ಇಂದುವರ ಬೇಡೆನಲು ವಂದಿಸಿ ಬೇಡಿದ ವರವ ತಾನು ಅಂದು ವರಗಳ ಕೊಟ್ಟು ಹಿಂದಿರುಗಲು ಶಿವನು ಹಿಂದೆ ಬೆನ್ನಟ್ಟಿದ ರಕ್ಕಸನೂ ಹಿಂದÀುರಗದಲೆ ಓಡುತಲೆ ಶ್ರೀ ತಂದೆ ಕಮಲನಾಭ ವಿಠ್ಠಲ ನೆಂದು ಮೊರೆಯಿಡೆ ಕೇಳಿ ತ್ವರದಲಿಬಂದು ರಕ್ಷಿಸಿ ಕಾಯ್ದ ಶ್ರೀಹರಿ 3
--------------
ನಿಡಗುರುಕಿ ಜೀವೂಬಾಯಿ