ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ ಉಂಬವ ತಾನಾರು ಉಣಬಲ್ಲವನಾರುಸಂಭವಿಸುವನಾರು ಸಮನಿಸಿ ಇಂಬಾಗಿಹನಾರು 1 ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ 2 ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ 3 ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲುನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು 4 ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣಮೂಗರಿದವ ಜಾಣ ಮೂಗದು ನಿರ್ವಾಣ5 ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದುಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು 6 ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ7
--------------
ಚಿದಾನಂದ ಅವಧೂತರು
ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷ ಶಾಯಿಯೆ ನಾ ಕಾಣದೇ ಮಾಡಿದ ದುಷ್ಕರ್ಮಂಗಳಿಗೆ ಪ ತಿರುಮಲೆಯಂತೆ ನಾ ಮಂಚದುರುಗನಿಂಬುಗೊಂಡು ಕ ರ್ಪುರದ ವೀಳಯದ ಮಡುಪುಗಳನೇ ಕೊಟ್ಟು ಪರಿಯಂತ ಕಾಲನೊತ್ತುತ ಲಿರುತಿರ್ದು ಪರಿದು ಎನ್ನ ನೆರೆಪಾತಕನಾಗಿ ಮಾಡಿದುದಕೇ 1 ಕಡಲಶಯನ[ನ]ನೇಕ ಕೋಟಿ ಕಮಲಭವಾಂಡ ಕೊಡೆಯನೆ ಕಾಮಪಿತನೇ ಸರ್ವೋತ್ತಮನೇ ನಾ ಕುಡಿದು ಮಿಕ್ಕ ಹಾಲ ನೀ ಕುಡಿದು ಯೆನ್ನಾ ಪಾಪದೊಳು ಕೆಡಹಿ ಬಹಳ ಯಾತನೆ ಬಡಿಸೀ ಕೆಡಿಸಿದುದಕೇ 2 ಗುರುಶಿಷ್ಯರುಗಳು ಸ್ವಾಮಿ ಭೃತ್ಯರುಗಳು ದಂಪತಿಗಳೆಂಬೀ ಪರಿಯ ತಾರತಮ್ಯಂಗಳೊಂದಿಲ್ಲವೇ ಹರೀ ಶರಣವತ್ಸಲನೇ ವೇಲಾಪುರದ ವೈಕುಂಠಕೇಶವ ನರನ ಪಾಮರನ ದುರಿತಶರಧಿಯ ದಾಂಟಿಸುವುದಕೇ 3
--------------
ಬೇಲೂರು ವೈಕುಂಠದಾಸರು
ಯಾರ ಕೃತಕವು ಇದು ವಿಚಾರವನು ಮಾಡಿ ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು ಮೃಗ ಮೈಮೇಲೆ ಬೀಳುವುದ 1 ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು ಕೆಟ್ಟ ಪಥದಲಿ ಚಾರುಗಟ್ಟಿವಿಳಿದು ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು 2 ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ 3 ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು ಬಂದುದೆನಗೈಶ್ವರ್ಯ ಎಂದು ಹರುಷಿಸುತ ಮಂದಹಾಸದ ಒಳಗೆ ಬಂಧನದಲಿರುತಿರ್ದು ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ 4 ಮೂರು ಮಂದಿಯು ಬಂದು ಸೇರಿದರು ದೂರಿಡುವ ಆರು ಕರೆದರು ತಾನು ಬಾರೆನೆಂಬ ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ ಸಾರಿ ಚೋರತ್ವದಲ್ಲಿ ಪರವೂರ ಸುಲಿವ 5 ಮೇಲು ದುರ್ಗವ ಕಂಡು ಗಾಳಿಗೋಪುರವನ್ನು ಆಳ ಬಲುಹುಳ್ಳವನು ಅವಸರದೊಳು ನೂಲಯೇಣಿಯನಿರಿಸಿ ಏರಿಳಿದು ಬಾಹಾಗ ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು 6 ಹೀಗಿರುವ ಕೃತ್ಯಗಳು ನಾಗಶಯನನಿಗರುಹು ಬೇಗದೊಳು ಪರಿಹರಿಪ ಯೋಗವನು ಕೊಡುವ ನಾಗಗಿರಿವಾಸನಹ ವರಾಹತಿಮ್ಮಪ್ಪ ತೂಗುವನು ತೊಟ್ಟಿಲೊಳು ಆಗುವುದನಿತ್ತು 7
--------------
ವರಹತಿಮ್ಮಪ್ಪ