ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡಿದ ನಾಟಕವ ಕಿರಾತ ಮದನಗೂಢ ಚಿದಾನಂದನನರಿಯದ ನರ ಮೃಗವ ಪ ಸ್ತ್ರೀಯ ದೇಹವು ಎಂಬ ಅಡವಿಯೊಳಗೆಸ್ತ್ರೀಯ ಹುಬ್ಬೆಂಬ ಸಿಂಗಾಡಿ ತೆಗೆದುಮುಂಗುರುಳುಗಳು ಎಂಬ ಸಿಂಜನಿಯನೆ ಬಿಗಿದುಸ್ತ್ರೀ ದೃಷ್ಟಿಯೆಂದೆಂಬ ಸಿಳೀ ಮುಖವನೆ ಪಿಡಿದು 1 ಸಿರಿತುಳುಕುವ ಅವಯವದ ಸಿಡಿಬಲೆಯನೊಡ್ಡಿಪರಿಯ ತಿಳಿಯದೆ ಬರುವ ಪುರುಷ ಮೃಗವಕರುಣವಿಲ್ಲದೆ ಮಹಾ ಕೋಪದಿಂದಲಿಎರಡು ಗಿರಿಯ ಸಂದಿಯಲಿರಿದು ಇರಿದು ಕೆಡುತಿಹ 2 ಇಂತು ಬೇಟೆಯನಾಡಿ ಎಲ್ಲ ಲೋಕವ ಕೆಡಹಿಚಿಂತೆ ಮಾಡುವ ಚಿದಾನಂದ ಭಕ್ತರ ಮುಂದೆ ಸುಳಿಯಲಿಕಂಜಿಮರೆಯದೆ ಶಿವನ ಗುರುತ ಅಂತಹುದುಇವರನೀಗ ಮುಟ್ಟಬಾರದು ಎಂದು 3
--------------
ಚಿದಾನಂದ ಅವಧೂತರು
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ಬಂದದೊಂದು ಚೆಂದ ಸಾಲದೆ ಗೋಪಿಯ ಕಂದ ಪ ವಿಕಟ ಪೂತನಿಯ ಕೊಂದುಶಕಟಾಸುರನ ಪಾದದಿ ತುಳಿದುಧಿಕಿಟ ಧಿಕಿಟ ಎನ್ನುತಲಿಕುಕಿಲಿರಿದು ಕುಣಿಯುತ ಮನೆಗೆ 1 ಗೋವರ್ಧನ ಪರ್ವತವನೆತ್ತಿಗೋವುಗಳ ಕಾಯ್ದು ತನ್ನಮಾವ ಕಂಸನ ಕೊಂದುಕಾವನ ಜನಕ ಪಾಡುತ ಮನೆಗೆ 2 ಫಾಲನೇತ್ರ ಚಂದ್ರಶೇಖರನಸುಲಭದಿಂದ ಬಾಧೆಯ ಬಿಡಿಸಿಪಾಲಿಸುವ ಕರುಣದಿಂದಬೇಲಾಪುರದ ಚೆನ್ನಕೇಶವ3
--------------
ಕನಕದಾಸ
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ