ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ ಪ ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ ಅ.ಪ. ಖಂಡುಗ ಜೀವವ ಕೈಲ್ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆ ಯಮ ದಂಡನೆ ತಪ್ಪದೋ 1 ಜಂಗಮರು ಜಗತ್ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ 2 ಐವತ್ತಾರು ದೇಶದ ಒಳಗೆ ಇಪ್ಪತ್ತೊಂದುಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ 3
--------------
ಮೋಹನದಾಸರು
ಜಂಗಮರು ನಾವು ಲಿಂಗಾಂಗಿಯಾರುಮಂಗಳಾವಂತರು ಭವಿಗಳಂತಲ್ಲಾ ಪ ಶಿವ ಗುರುದೈವ ಕೇಶವ ನಮ್ಮ ಪರದೈವಭುವನ ಜೀವನ ನಮ್ಮ ಗುರು ಶಾಂತನೂ ||ಶಿವನ ದ್ರೋಹವ ಮಾಡುವನೆ ಅಪರಾಧಿಅವನೆ ಅದ ತಿಳಿಯುವನು ಶ್ರುತಿ ಸಮ್ಮತಾ 1 ಮಜ್ಜನ ಉಂಟುಸೌಭಾಗ್ಯವಿಹ ಮಹಾಂತನ ಮಠದವರೂ 2 ವಿರಕ್ತರಾವು ಸುಶೀಲವಂತರು ನಾವುವೀರಭದ್ರನ ಪ್ರೀಯ ಭಕ್ತರಾವೂ ||ಕಾರಣಾ ಕರ್ತ ಶ್ರೀ ಮೋಹನ ವಿಠಲನೆಕಾರುಣ್ಯ ಮಾಡು ದಮ್ಮಯ್ಯ ಎಂಬುವರಾವು 3
--------------
ಮೋಹನದಾಸರು
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಪ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? 1 ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? 2 ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? 3 ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?4 ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? 5 ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? 6
--------------
ಕನಕದಾಸ
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಶನ ಚರಣದಾಸನಾಗಿರ್ದರೆ ಆಶಾಪಾಶ ನೀಗಿರಬೇಕು ಪ ಈಶನರಿತ ಗುರು ಶಿಷ್ಯನಾಗಿರ್ದರೆ ದೂಷಣ ಭೂಷಣ್ಹೋಗಿರಬೇಕು ಅ.ಪ ಹರಿಸರ್ಮಣಾಮೃತ ಸುರಿವನಾಗಿರ್ದರೆ ಧರೆಯ ಭೋಗ ಮೀರಿರಬೇಕು ಪರತತ್ತ್ವದ ಮೂಲರಿತವನಾದರೆ ಮರವೆ ಮಾಯ ಹಾರಿರಬೇಕು 1 ವೇದ ವೇದಾಂತವ ಸಾಧಕನಾದರೆ ವಾದ ವಾಂಛಲ್ಯವ ತೊಡೆದಿರಬೇಕು ಬೋಧ ಪಡೆದು ನಿಜ ಸಾಧುವಾದರೆ ನಾದಶಬ್ದವಡಗಿರಬೇಕು 2 ಮಾನಸಪೂಜೆಯ ಖೂನ ಬಲ್ಲ್ಯಾದರೆ ತಾನು ತನ್ನನು ಅರಿತಿರಬೇಕು ಧ್ಯಾನವಿಡಿದು ನಿಜಜ್ಞಾನಿಯಾದರೆ ಮಾನಭಿಮಾನಕ್ಹೊರತಿರಬೇಕು 3 ಬೋಗದ್ವಾಸನ್ಹಿಂಗಿ ಭಾಗವತನಾದರೆ ಕೂಗಿನ ನೆಲೆ ತಿಳಿದಿರಬೇಕು ಯೋಗ ಬಲಿಸಿ ಮಹಯೋಗಿಯಾದರೆ ರಾಗರಹಿತನಾಗಿರಬೇಕು 4 ಲಿಂಗವ ಧರಿಸಿ ಜಂಗಮನಾದರೆ ಸಂಗರಹಿತನಾಗಿರಬೇಕು ಅಂಗ ಮೂರು ನೀಗಿ ಲಿಂಗ ತಾನಾದರೆ ಲಿಂಗಾಂಗ ಸಮರಸ ತೋರಬೇಕು 5 ಸತ್ಯವರಿತು ಸತ್ಪುರುಷನಾದರೆ ಸತ್ತಂತೆ ಜಗದೊಳಿರಬೇಕು ಮೃತ್ಯುಗೆಲಿದು ಪರಮಾರ್ಥಿಕನಾದರೆ ಮತ್ರ್ಯರ ಗುಣ ಮರ್ತಿರಬೇಕು 6 ಘೋರ ಭವಾಂಬುಧಿ ಪಾರುಗಂಡಿರ್ದರೆ ಪಾರ ಹಾರೈಕೆ ಅಳೆದಿರಬೇಕು ಸಾರಮೋಕ್ಷ ತನ್ನ ಸೇರಬೇಕಾದರೆ ಧೀರ ಶ್ರೀರಾಮನೊಲಿಸಿರಬೇಕು 7
--------------
ರಾಮದಾಸರು
ಲಿಂಗ ಕಟ್ಟುವೆ ಯಾಕೋ ನೀ ಲಿಂಗಲಿಂಗಾಂಗವೆಲ್ಲವು ಸರ್ವಾಂಗ ಲಿಂಗಪಉಳಿಮುಟ್ಟದ ಲಿಂಗ, ಊರು ಮುಟ್ಟದ ಲಿಂಗತಿಳಿಯೆ ತಂದೆ ತಾಯಿಗಳಿಂದಾಗದ ಲಿಂಗಕುಲಕರ್ಣಿ ಕಂಚುಗಾರರಲಿ ಹುಟ್ಟದ ಲಿಂಗನಲಿಯತು ತನ್ನಿಂ ತಾನಾದ ಲಿಂಗ1ಏಕವಾಗಿಹ ಲಿಂಗ ಎಲ್ಲವು ತಾನಾದ ಲಿಂಗಸಾಕಾರವಾಗಿ ಸಂಚರಿಸುತಿರುವ ಲಿಂಗನಾಲ್ಕು ತನುವಿಗೆ ನಿಲುಕದ ಲಿಂಗಬೇಕೆಂದ ರೂಪಿಗೆ ಬಂದಂತ ಲಿಂಗ2ಏನು ತೋರದ ಲಿಂಗ ಎಡೆದೆರೆಪಿಲ್ಲದ ಲಿಂಗಧ್ಯಾನಕೆ ಮೌನಕೆ ನಿಲುಕದ ಲಿಂಗಜ್ಞಾನ ಮೂರುತಿ ಚಿದಾನಂದ ಲಿಂಗತಾನೆ ವಿಲಾಸದಿ ಬಂದಂಥ ಲಿಂಗ3
--------------
ಚಿದಾನಂದ ಅವಧೂತರು