ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಶಿವಾತ್ಮ ಲಿಂಗವೆನ್ನ ಕರತಳಾಮಳಕವಾಗಿ ಶರೀರದೊಳಗೆ ಬೆಳಗುವುದು ಶ್ರೀ ಗುರು ವಚನದಿ ಕಂಡೆನು ಪ ಏನು ಬೇಕು ಎನಗೆ ಇನ್ನು ಮಾನವತ್ವ ಅಳಿದು ಸರ್ವ ತಾನೆ ಅಂಗದಿರವೆಯಾಗಿ ಸ್ವಾನುಭವದ ಸುಖದೊಳು ಧ್ಯಾನಿಸುತ್ತ ಒಳಹೊರಗಿಹ ಭಾನುಕೋಟಿ ತೇಜವನ್ನು ತೋರಿದಾ ಪರಶಿವಾತ್ಮ 1 ವಿಂಗಡಿಸಿದ ಷಟ್‍ಸ್ಥಳಗಳ ಸಂಗವಿಡಿದು ಚರಿಸುತ್ತಿರಲು ಲಿಂಗವೇ ಸರ್ವಾಂಗವಾಗಿ ಇಂಗಿತವ ತಿಳಿದವನು ಮಂಗಲಾತ್ಮನಾದ ಶ್ರೀಗುರು ಪುಂಗನು ಎನಗೊಲಿದು ದಿವ್ಯ ಕಂಗೊಳಿತ್ತುಧರಣಿ ಗಗನ ಡಂಗದ ಘನಲಿಂಗವಾ ಪರಶಿವಾತ್ಮ 2 ಒಂದರಂಕೆಯನ್ನು ಬರೆದು ಹೊಂದಿದಷ್ಟು ಲೆಖ್ಖ ಬೆಳೆವ ಅಂದದಂತೆ ಉಳಿದು ಅಳಿದು ನಿಂದ ನಿಜದ ನಿಲುವಿಗೆ ಬಂಧು ವಿಮಲಾನಂದ ಶ್ರೀಗುರು ಬಂದು ಎನ್ನ ಹೃದಯದಿ ಪರಶಿವಾತ್ಮ 3
--------------
ಭಟಕಳ ಅಪ್ಪಯ್ಯ
ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಭವಗಳನು ಖಂಡಿಸೆಂದು ಬಂದು ಬೇಡಿದೆ ಪ ಅರುಹಿನೊಳಗೆ ಇರಿಸಿಯೆನ್ನ ಮರವೆಯನ್ನು ಅಳಿಸೊಮುನ್ನಾ ಪರಮ ನೀನೆಯಾಗಿಯಾ ನಿಜದರುಹ ತೋರಿಸೈ 1 ಅಣುವಿನೊಳಗೆ ಅಣುವೆಯಾದ ಪ್ರಣವ ಜ್ಯೋತಿಯನ್ನು ತೋರೊ ತ್ರಿಣೆಯ ನೀನೆಯಾದಡೆ ನಾಂ ಪ್ರಣಿತನಾಗುವೇ 2 ಮೂರು ಐದರಿವುಗಳನ್ನು ಮೀರಿಹೋಗುವಂಥ ಮನವಾ ನಾರಿಕೈಯೊಳ್ ಕೋಟ್ಯಾತಕಿಂತು ನಟಿಸುತಿರುವಿಯೋ 3 ಪಾರುಗಾಣಿಸಯ್ಯ ನೀ ಸಂಸಾರ ಶರಧಿಯನ್ನು ಶಂಭು ಕೋರಿಕೆ ಈಡೇರಿಸಯ್ಯ ಅಪಾರಲಿಂಗವೇ 4 ಪರಮ ತತ್ವೋಕ್ತಾಧಿಕಾರಿ ಸುರಮುನೀಂದ್ರಾಕಾಶಪತಿ ಗುರುವು ತುಲಶಿರಾಮನೆ ತ್ವಚ್ಚರಣ ಶರಣಯ್ಯ5
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರುತಿ ಮತವ ಕೇಳಿ ನೀ ಮರುಳಾಗಬೇಡ | ಶ್ರುತಿಯುತರ ಸಂಗ ಬಿಡಬೇಡ ಪ ಮಾಡಿದನ್ನವು ಎಲ್ಲ ಪ್ರಸಾದವೆ ನೋಡು | ಆಡುವ ವಚನ ಅಕ್ಷರ ಮಂತ್ರವೇ | ರೂಢಿಯೋಳ್ ಜನರೆಲ್ಲ ಸಾಧು ಸತ್ಪುರುಷರೇ | ಬೇಡುವವರೆಲ್ಲ ಫಲಗಳ ಕೊಡುವರೇ 1 ಜಲವೆಲ್ಲ ತೀರ್ಥವೇ ಸ್ಥಳವೆಲ್ಲ ಕ್ಷೇತ್ರವೇ |ಶಿಲೆಯೆಲ್ಲ ತಿಳಿದರದು ಶಿವಲಿಂಗವೇ | ಹಲವು ಮತದಿ ಸಾಯೋದು ಜಪಮುಕ್ತಿಯೇಕುಲವೆಲ್ಲ ಕಾಷ್ಠವದು ಶ್ರೀ ಗಂಧವೇ 2 ಮೂರ್ತಿ ಭವತಾರಕ ಪಾದದ |ಬೋಧದಲಿ ಸುಖಿಯಾಗೊ ಮನುಜಾ3
--------------
ಭಾವತರಕರು
ಲಿಂಗವ ಕಟ್ಟುವ ವಿವರವ ಹೇಳುವೆತಲೆವಾಗಿ ಕೇಳಲೆ ಹುಚ್ಚು ಬಡ್ಡಿಲಿಂಗ ಕಟ್ಟಿದೆಯಾದರೆ ಚಿದಾನಂದಲಿಂಗವಾಗುವೆ ಹುಚ್ಚು ಬಡ್ಡಿಪಹೊಟ್ಟೆಯೊಳಗಿರೆ ತಾಯಿಗೆ ಲಿಂಗವಕಟ್ಟುವೆಯೋ ಹುಚ್ಚು ಬಡ್ಡಿಮುಟ್ಟುಮಿಂದಿರೆ ಬಿಂದು ಬೀಳುವಾಗ ಲಿಂಗವಕಟ್ಟಿದೆಯಾ ಹುಚು ಬಡ್ಡಿಕಟ್ಟುವೆ ಯಾರಿಗೆ ಕಟ್ಟಿಕೊಂಬವನಾರುಇಷ್ಟು ಅರಿಯೆ ಹುಚ್ಚು ಬಡ್ಡಿಕಟ್ಟಿದೆಯಾದರೆ ಅಂಗವೆ ನೀನಾಗುನಿಜಲಿಂಗನಹೆ ಹುಚ್ಚು ಬಡ್ಡಿ1ಲಿಂಗ ಹೋಯಿತು ಎಂದು ಪ್ರಾಣವ ಕೊಡುವೆಯೋಲಿಂಗ ಹೋಯಿತೆ ಹುಚ್ಚು ಬಡ್ಡಿಲಿಂಗವು ಹೋದರೆ ನೀನು ಉಳಿವುದೆಂತುಲಿಂಗವು ನೀ ಹುಚ್ಚು ಬಡ್ಡಿಲಿಂಗವ ನೀನೆರಡಾಗಿ ಲಿಂಗವ ಕಟ್ಟಿಹೆಲಿಂಗಾಗಿಯೇ ಹುಚ್ಚು ಬಡ್ಡಿಅಂಗ ಸಜ್ಜೆಯು ಆಗಿ ಲಿಂಗವೇ ನೀನಿರೆಲಿಂಗ ಕಟ್ಟಿದೆ ಹುಚ್ಚು ಬಡ್ಡಿ2ಲಿಂಗವನೆ ಕಟ್ಟಿನಿದ್ರೆಯ ಮಾಡಲುಲಿಂಗವೆಲ್ಲಿತ್ತೋ ಹುಚ್ಚು ಬಡ್ಡಿಲಿಂಗವ ನೀನೀಗ ಲಿಂಗೆಂದು ಪೂಜಿಸನೀನಾರೋ ಎಲೆ ಹುಚ್ಚುಬಡ್ಡಿಲಿಂಗ ಚಿದಾನಂದ ಸದ್ಗುರುವನು ಹೊಂದುಲಿಂಗವ ತಿಳಿವೆ ಹುಚ್ಚು ಬಡ್ಡಿಲಿಂಗವ ತಿಳಿದ ಬಳಿಕ ಲಿಂಗಅಂಗವು ಅಂಗ ಲಿಂಗವು ಹುಚ್ಚು ಬಡ್ಡಿ3
--------------
ಚಿದಾನಂದ ಅವಧೂತರು