ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮೇಷ್ಟಿ ರೂಪಿಣೀ ಸ್ಥಿತಿಸುವಗೆ || ಹರಿಹರರೂಪಿಣೀ ವರದ ಸಂಹಾರಗೆ | ವಿರಹಿತವಾದ ಮಹದೇವಗೆ ಮಂಗಳ ಮಂಗಳ ಜಯಮಂಗಳ ಮಹದಾತ್ಮ ಲಿಂಗಗೆ 1 ಉತ್ಪತ್ತಿ ಸ್ಥಿತಿ ಲಯ ಕಾರಣರೂಪಗೆ | ಗುಪ್ತಗೂಢ ಗುಣತ್ರಯ ಸಾಕ್ಷಿಗೆ | ವ್ಯಾಪ್ತನಾಗಿ ತನ್ನೊಳು ತಾನಾದಗೆ | ಪ್ರಾಪ್ತುಳ್ಳ ಪುರುಷರ ಪಾಲಿಪಗೆ ||ಮಂ||2 ಹಂಸ ಪರಮಹಂಸಾಶ್ರಮದೊಳಿಹಗೆ | ಸ್ವಸಾಕ್ಷಿ ಸರ್ವ ದಂಭ ರಹಿತ ಸದೋದಿತಗೆ | ವಾಸವಾಗಿಹನು ತುಂಗಭದ್ರ ನಿಲಯಗೆ | ದಾಸ ಭೀಮಾಶಂಕರನ ಹೃದಯಾಬ್ಜದಾತ್ಮಗೆ || ಮಂ|| 3
--------------
ಭೀಮಾಶಂಕರ
ಶಂಭು ಶಂಕರ ನಿಜಲಿಂಗಗೆ ಮಂಗಳಕುಂಭಿನೀಧರ ಭೂಷ ಲಿಂಗಗೆ ಮಂಗಳ ||ಮಂಡೀಯನಾದಿ ವ್ಯೋಮಕೇಶಗೆ ಮಂಗಳ |ರುಂಡಮಾಲೆಧರ ಈಶಗೆ ಮಂಗಳ 1 ತ್ರಿಪುಟ ತ್ರಿಪುರ ಸಂಹಾರಗೆ ಮಂಗಳ ವಿಪರೀತ ಪರಿಜ್ಞಾನ ಹರಗೆ ಮಂಗಳ 2 ಜ್ಞಾನದಾತನು ಗುರುನಾಥಗೆ ಮಂಗಳ |ಏನೆಂಬೆ ಗುರುಕೃಪೆ ನಿತ್ಯಗೆ ಮಂಗಳ 3
--------------
ಭೀಮಾಶಂಕರ
ಪಾರ್ವತಿರಮಣನಾ ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ 1 ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ 2 ಅಲ್ಲಿದ್ದ ಜನರ ಸಹಿತಾಗಿ ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ ಕೃಷ್ಣಧ್ಯಾನವ ಮಾಡುತ ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ 3 ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ4 ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು5 ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ6 ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ 7 ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ 8 ಜನಿತ ಪಾತಾಳಗಂಗಿ ಉದಕವು ತಂದು ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ 9 ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು 10 ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ 11 ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ 12 ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ13 ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು 14
--------------
ಓರಬಾಯಿ ಲಕ್ಷ್ಮೀದೇವಮ್ಮ
ಜಯಮಂಗಳಂ ಶುಭೋದಯ ಮಂಗಳಂ ಜಯ ಕಕುದ್ಗಿರಿ ಗಂಗಾಧರ ಲಿಂಗಗೆ ಪ ಜಡೆಯುಡುಪತಿಯು ಗಂಗೆಯೊಡಗೂಡ್ದ ಮಸ್ತಕಕೆ ಮಡುಹಿ ಮಾರನ ಭಸಿತದಾಳ್ದ ಪಣೆಗೆ ಪೆಡೆಯೆತ್ತಿ ಗಾನಗೈವಹಿ ಕುಂಡಲಂಗಳಿಗೆ ದೃಢಭಕತರಿಷ್ಟದಾಯಕ ಶಿವನಿಗೆ 1 ಸೋಮಸೂರ್ಯಾಗ್ನಿ ಲೋಚನೆಗೆ ವಿಷದಾಳಿ ಸುರ ಸ್ತೋಮವನು ಕಾಯ್ದ ಶೋಭನ ಕಂಠಕೆ ಭೀಮನಿಗೆ ಭಯಹರಗೆ ಪರಶುಮೃಗ ಹಸ್ತನಿಗೆ ಕಾಮಿತಾರ್ಥದ ವರಾಭಯ ಕರನಿಗೆ 2 ನಾಗಕಂಕಣಧರಗೆ ನಾಗೋತ್ತರೀಯನಿಗೆ ನಾಗಯಜ್ಞೋಪವೀತವ ತಾಳ್ದಗೆ ನಾಗಚರ್ಮಾಂಬರಗೆ ನಗರಾಜ ಚಾಪನಿಗೆ ಗಮನ ಬಾಣಗೆ ಶಿವನಿಗೆ 3 ಗಿರಿಜೆಗರ್ಧಾಂಗವನ್ನಿತ್ತ ಶುಭವಿಗ್ರಹಗೆ ವರ ವೃಷಭವನ್ನೇರಿ ಸಂಚರಿಪಗೆ ಬರೆದುಂಗುಟದಿ ಹೊಳೆದ ಚಕ್ರದಿಂ ದೈತ್ಯಕುಲ ಹರಣ ವರದಾಯಕಗೆ ಸರ್ವೆಶಗೆ 4 ತಿರುಪತಿಯ ವಾಸವನು ದೃಢಗೈದು ಕಕುದ್ಗಿರಿಯ ಪರಮ ಕ್ಷೇತ್ರದಿ ಮಹಿಮೆಗಳ ತೋರ್ಪಗೆ ವರದ ವೆಂಕಟಪತಿಗೆ ಗಂಗಾಧರೇಶ್ವರಗೆ ಶರಣಾಗತರ ಕಾಯ್ವ ಸಾಂಬಶಿವಗೆ 5
--------------
ತಿಮ್ಮಪ್ಪದಾಸರು
ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ 1 ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ 2 ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ 3 ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ 4
--------------
ರುಕ್ಮಾಂಗದರು