ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವ ಮಹದೇವಗೆ ಶರಣೆಂಬೆನಾ ಮಾಯಾ ಶಿರ ಮಾಲಾಧರನಿಗೆ ಶರಣೆಂಬೆ ನಾ ಪ ಪಾರ್ವತಿ ರಮಣಗೆ ಶರಣೆಂಬೆ ನಾ ಭವತಾಪ ಸಂಹಾರಗೆ ಶರಣೆಂಬೆನಾ ಸರ್ವಕಾಲ ಬಿಡದೆ ಶರಣೆಂಬೆನಾ ಸಾಧು ಸಜ್ಜನರ ಪೊರೆವಗೆ ಶರಣೆಂಬೆನಾ 1 ನಂದಿವಾಹನಗೆ ಶರಣೆಂಬೆನಾ ನಾಗ ಭೂಷಣಗೆ ಶರಣೆಂಬೆನಾ ಸುಂದರ ಮೂರ್ತಿಗೆ ಶರಣೆಂಬೆನಾ ಸುರಮುನಿ ವಂದ್ಯಗೆ ಶರಣೆಂಬೆನಾ 2 ಗಜಚರ್ಮಧಾರಿಗೆ ಶರಣೆಂಬೆನಾ ಕೈಲಾಸ ವಾಸಿಗೆ ಶರಣೆಂಬೆನಾ ಭಯನಾಶ ಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 3 ಲಯಕರ್ತ ಮೂರ್ತಿಗೆ ಶರಣೆಂಬೆನಾ ಕೈಲಾಸವಾಸಿಗೆ ಶರಣೆಂಬೆನಾ ಭಯನಾಶಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 4 ಆಕಾರಶೂನ್ಯ ಪರೇಶಗೆ ಶರಣೆಂಬೆನಾ ಅಖಿಲಾಕಾರ ತಾನೆಂಬಗೆ ಶರಣೆಂಬೆನಾ ಲೋಕದೋಳ್ ಭಕ್ತರ ಪೊರೆವಗೆ ಶರಣೆಂಬೆನಾ ಶ್ರೀಲೋಲ ಹೆನ್ನೆವಿಠ್ಠಲ ಪ್ರಿಯಗೆ ಶರಣೆಂಬೆನಾ 5
--------------
ಹೆನ್ನೆರಂಗದಾಸರು
ಶ್ರೀನಿವಾಸ ಮೂರುತಿಗೆ ಜಯತು ಮಂಗಳಂ ಶೇಷಾಚಲವಾಸನೀಗೆ ಶುಭಮಂಗಳಂ ಪ ರಂಗಮಾಣಿಕದ ದಿವ್ಯ ಕುಂದಣದ ಕಿರೀಟಕ್ಕೆ ಸುಗಂಧವಾದ ಕರ್ಪೂರ ಕಸ್ತೂರಿ ತಿಲಕಕೆ ಕಂದರ್ಪನ ಬಿಲ್ಲಪೋಲ್ವ ಚಂದವಾದ ಪುಬ್ಬುಗಳಿಗೆ ಮಂದಹಾಸದಿಂದ ನೋಳ್ಪ ಅರವಿಂದನಯನಗಳಿಗೆ 1 ನಾಸಿಕಕೆ ಕರ್ಣಕುಂಡಲಕೆ ಸುವಾಸನೆವುಳ್ಳ ಅಧರಕ್ಕೆ ಆಸುಂದರವಾದ ಶ್ರೀವತ್ಸ ಕೌಸ್ತುಭಮಣಿಗೆ ಲಾಸವಾಸಿ ಪಿತನ ಪಡೆದ ನಾಭಿಯ ಕಮಲಕೆ 2 ಶಂಖ ಚಕ್ರ ನಾಗ ಬಾಪುರಿ ತೋರ್ಪಹಸ್ತಪಾದಗಳಿಗ ಲಂಕಾರವಾದ ಪೀತಾಂಬರದ ವಡ್ಯಾಣದಂದಕ್ಕೆ ಅಂದುಗೆ ಗೆಜ್ಜೆಗಳಿಟ್ಟ ಅಂದವಾದ ಪಾದಗಳಿಗೆ ನಖ ಅಂಗುಷ್ಟದ ಬೆಳಕಿಗೆ 3
--------------
ಯದುಗಿರಿಯಮ್ಮ