ದುರಿತ ವಿದೂರ ಪ
ತಾಪಸ ಪ್ರಿಯ ನಿಜದಾಸ ಮಂದಾರಾ ಅ.ಪ
ನಾ ಸತ್ಯರೊಳಭಿಮಾನಿಯಾಗಿದ್ದು ಸಕಲ
ವಾಸನೆಗಳ ಕೊಂಡು ಎಲ್ಲ ಜೀವರ ಅಭಿ-
ಲಾಷೆಗಳರಿತು ಸುಖಗಳೀವುತ ಸರ್ವಾ-
ವಾಸನಾಗಿಹ ಇಂದಿರೇಶ ಕೃಪಾಳೊ 1
ಘೃತ ಯುತ ಗುಗ್ಗುಳ ಸಂಮಿಳಿತ ಕೃಷ್ಣಾಗರು ಮಿ-
ಶ್ರೀತ ಧೂಪವ ಶ್ರೀಸಹಿತನಾಗಿ ನೀ ಕೈಕೊ-
ಳ್ಳುತ ಭಕ್ತರಿಗೀಪ್ಸಿತ ವರವೀವನೆ 2
ವಾಸನೆಯರಿತು ಸರ್ವಭೂತದಲಿ ನಿ-
ವಾಸುದೇವನಿಗೆ ಸುವಾಸನೆಯಾವದು
ವಾಸುಕಿ ಶಯನ ಶ್ರೀಗುರುರಾಮ ವಿಠಲಾ 3