ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ನಮಸ್ತೆ ವಿಮಲೆ ಕೋಮಲೆ ರಮಾದೇವಿನಮಸ್ತೆ ನಮಸ್ತೆ ಪ. ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವನುಧರೆಯೊಳು ವರ್ಣಿಸುವ ಕವಿಯು ದಾವಸ್ವರಮಣನೆನಿಪ ರಮಣನುರದೊಳೆಂದೆಂದು ನೀ-ನರಮನೆಯ ಮಾಡಿ ಭಾಪುರೆ ಮೆರೆದೆಲೆಲೆ1 ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿನಿನ್ನ ತಾರುಣ್ಯ ಲಾವಣ್ಯಗಳನುಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-ನ್ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಗಣಸದನೆ2 ಕರ ವಕ್ತ್ರನೇತ್ರಗಳು ಪೂರ್ಣ ಹಯವದನ ಕೈಕೊಂಡ ನಿನ್ನ ಗಂಡಸ್ವರ್ಣಸಮವರ್ಣೆ ಕರ್ಣಾಯತಾಕ್ಷಿ 3
--------------
ವಾದಿರಾಜ
ಪಾಹಿಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ |ಮಹಾ ದುರಿತಾದ್ರಿಪವಿ ದೀನ ಸುರಧರಿಜೇ ಪಶಿಷ್ಟಜನರ ಪಾಲಿಪಳೆ ದುಷ್ಟ ಜನ ದೂರಳೇ |ಸೃಷ್ಟಿಪತಿ ಸೇವೆಯೊಳಗಿಟ್ಟುದುರುಳ|ಬಟ್ಟೆಹಿಡಿಸದಲೆ ದಯವಿಟ್ಟು ಪಿಡಿವದು ಕೈಯ |ಕಷ್ಟ ನಾಶನ ಮಾಡೆ ಕೊಟ್ಟು ಸುಖ ಪೂಜ್ಯೆ 1ಮದನಸತಿಕೋಟ ಲಾವಣ್ಯೆ ಗುಣಸಂಪನ್ನೆ |ಸುದತೀ ವೃಂದ ಶಿರೋಮಣಿ ಕರುಣಾರ್ಣವೆ ||ಮಧು ಜಿತ್ಪ್ರಿಯನ ರಾಣಿ, ವಾಣೀ ವೀಣಾಪಾಣಿ |ಹೃದಯದೊಳು ಕಮಲನಾಭನ ನಿರುತ ತೋರೇ 2ಈಶಾದಿ ಸುಮನಸಾರ್ಚಿತಪಾದಸರಸೀರುಹೆ |ಲೇಶೀತರಾನಂದೆ ಸುಗುಣೆ ಶ್ರೀ ಪ್ರಾ-ಣೇಶ ವಿಠಲನ ಕೊಂಡಾಡುವರೊಳಗೆ ಸ್ನೇಹ |ಹ್ರಾಸವಾಗದೆ ಈಯೆ ಇಭರಾಜ ಗಮನೆ 3
--------------
ಪ್ರಾಣೇಶದಾಸರು