ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ಬೇಡುವೆ ಹರಿಯ ಮುರಾರಿಯ ಸ್ಮರ ಕೋಟಿತೇಜನ ಸುರಮುನಿವಂದ್ಯನ ಪ ಮನ್ಮಥಕೋಟಿ ಲಾವಣ್ಯರೂಪದಿ ಮೆರೆವ ಮನ್ಮಥಯ್ಯನ ಪೊಗಳುತ್ತಲಿ ಚಿನ್ಮಯರೂಪನ ಚಿದ್ರೂಪನಾದನ ಹೃನ್ಮನದಲಿ ಪಾಡಿಪೊಗಳಿ ಕೊಂಡಾಡುತ ಅ.ಪ ಮನ್ಮನÀದೊಳು ಸ್ಮರಿಸಿ ಸ್ಮರಿಪ ಭಾಗ್ಯವು ಮುನ್ನ ಕರುಣಿಸಿ ಸಲಹು ಬಲು ಸಂ- ಪನ್ನ ನಿನಗೆದುರಿಲ್ಲ ಧರೆಯೊಳು ಪನ್ನಗಾದ್ರಿ ನಿವಾಸ ಶ್ರೀಶನ1 ವಿಶ್ವವ್ಯಾಪಕ ನೀನೆ ವಿಶ್ವಮೂರುತಿ ನೀನೆ ವಿಶ್ವ ನೀನೆ ಶ್ರೀ- ವಿಶ್ವವಸುನಾಮ ಸಂವತ್ಸರದೊಳು ಮೆರೆವ ವಿಶ್ವಮೂರುತಿ ಶ್ರೀ ಸರ್ವೇಶ್ವರ ನೀನೆಂದು2 ವಿಶ್ವಮಯ ವಿಶ್ವೇಶ ಶ್ರೀಹರಿ ವಿಶ್ವನಾಮಕ ವಿಮಲ ಸುಖಮಯ ವಿಶ್ವವನು ಉದರದೊಳು ಧರಿಸಿದ ವಿಶ್ವವನು ವದನದಲಿ ತೋರ್ದನ 3 ಕಮಲದಳಾಕ್ಷನ ಕಮನೀಯ ರೂಪನ ಕಮಲ ಸಂಭವನ ಪೆತ್ತಿಹ ಧೀರನ ಕಮಲಮುಖಿಯ ಕರಕಮಲದಿ ಪೂಜ್ಯನ ಕಮಲೆಯೊಡಗೂಡುತ ನಲಿವನ 4 ಕಮಲ ಕರದೊಳು ಪಿಡಿದ ಕಮಲೆಯ ಕಮಲನಾಭನ ಪಿತನೆ ಮುದದೊಳು ಕಮಲೆಯನು ಕೈಪಿಡಿದು ಮೆರೆಯುವ ಕಮಲನಾಭವಿಠ್ಠಲನ ಪ್ರತಿದಿನ5
--------------
ನಿಡಗುರುಕಿ ಜೀವೂಬಾಯಿ