ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲೆಯರು ನಿನ್ನ ಲಾಲಿಸುವರೋ ಸೋಲದಿರು ಮನವ ಗೋಪಾಲ ಪ ಲೋಲತನದಿ ಬಾಲ ನಿನಗೆ ಕಾಲ ಕಳೆಯಲು ಅ.ಪ ಪೊಂದಲೋಸುಗ ಸುಂದರಿಯರು ಸಂದು ಮಾಡುವರೊ ಮುಕುಂದ ಮಂದಹಾಸದಿಂದ ನಿನಗೆ ಗಂಧ ಪೂಸುವರೊ ಗೋವಿಂದ 1 ಓರೆಗಣ್ಣಿನ ನೋಟದಿಂದ ಸೂರೆಗೊಳುವರೊ ನಾರೇರು ಕೋರಿಕೆಯನು ಮೀರಿದರೆ ನೀ ದೂರು ಮಾಡುವರೊ ಮುರಾರೆ 2 ಮುರಳಿನಾದವ ಮಾಡೆ ನಿನ್ನ ತೆರಳ ಬಿಡರಿವರು ಮನೆಗೆ ಸರಳನೆಂದು ಅರಿತು ನಿನ್ನ ಮರುಳು ಮಾಡುವರೊ ಶ್ರೀ ಕೃಷ್ಣ 3 ಎನ್ನ ಮನವನು ತಿಳಿಯುವುದಕೆ ಕನ್ಯೆಯರಿಗಳವೇ ಪೇಳಮ್ಮ ಇನ್ನು ಪೋಗುವುದಿಲ್ಲವೆ ಪ್ರ ಸನ್ನಳಾಗಮ್ಮ ಯಶೋದೆ 4
--------------
ವಿದ್ಯಾಪ್ರಸನ್ನತೀರ್ಥರು