ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ದಾಸನಿವನೇ ಅನನ್ಯ ರಕ್ಷಕÀನೇ ಪ ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರಿ ಧ್ವರಿಯೇ ಅ.ಪ ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರಿ ಪ್ರೇಮೀ ಘನ್ನವಿಪತ್ತಿವಗೆ ಬಹುಬನ್ನಬಡಿಸುತಿಹುದೋ 1 ಬಂದ ವಿಪತ್ತನ್ನು ಈಗ ಛಿಂದಿಸಿಬಿಡು ವೇಗ ಬಂದಾದುರಿತಗಳೆಲ್ಲ ನೀ ನಿಂದ್ರಾದಂತೆ ಮಾಳ್ಪದೋ 2 ಅನ್ಯರಿUಸಾಧ್ಯವಿದು ಎನ್ನ ಮನಕೆ ತೋರುತಿಹದು ನಿನ್ನನುಳಿದು ಕಾಯ್ವೊರಾರಾಪಾನ್ನ ಜನಪಾಲಾ 3 ಇನ್ನು ಸಂದೇಹವ್ಯಾಕೆ ಘನ್ನ ಮಹಿಮಬೇಡಿಕೊಂಬೆ ನಿನ್ನ ಸೇವಾ ನಿರುತವಿತ್ತು ಎನ್ನವಚನ ಲಾಲಿಸಯ್ಯಾ 4 ಭುವನದೊಳಗೆ ಬಪ್ಪೊದಯ್ಯ ತಾನೆ ಪ್ರೀತನಾಗುವನು 5
--------------
ಗುರುಜಗನ್ನಾಥದಾಸರು
ಬಿನ್ನಪ ಲಾಲಿಸಯ್ಯ ಭಕ್ತಪರಾಧ- ವನ್ನು ಕ್ಷಮಿಸಬೇಕಯ್ಯ ಪ. ಅನ್ಯಾಯ ಕಲಿಕಾಲಕ್ಕಿನ್ನೇನು ಗತಿ ಸುಪ್ರ- ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತಅ.ಪ. ಮಕ್ಕಳ ಮಾತೆಯಂದದಿ ಕಾಯುವ ಮಹ- ದಕ್ಕರದಿಂದ ಮುದದಿ ಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತು ರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನು ದಿಕ್ಕಿಲ್ಲದವರ ಧಿಕ್ಕಾರ ಗೈದರೆ ಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ- ವರ್ಕಳಮಣಿ ನಿನಗಕ್ಕಜವಲ್ಲವು ಕುಕ್ಕುಟಧರವರ ಮುಕ್ಕಣ್ಣತನಯ1 ಜಾತಿ ನೀತಿಯನು ಬಿಟ್ಟು ಡಾಂಭಿಕತನದ ರೀತಿಗೆ ಪ್ರೀತಿಪಟ್ಟು ಸೋತು ಹಣವ ಕೊಟ್ಟು ಖ್ಯಾತರೆಂಬುವ ಗುಟ್ಟು ಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿ ಯಾತುಧಾನರ ಗುಣ ಯಾತಕ್ಕರಿಯದು ಭೂತೇಶ್ವರಸಂಜಾತ ಸುರನರ- ವ್ರಾತಾರ್ಚಿತ ಪುರಹೂತಸಹಾಯಕ ನೂತನಸಗುಣವರೂಥ ಪುನೀತ2 ಯಾವ ಕರ್ಮದ ಫಲವೋ ಇದಕಿ- ನ್ಯಾವ ಪ್ರಾಯಶ್ಚಿತ್ತವೋ ಯಾವ ವಿಧವೊ ಎಂಬ ಭಾವವರಿತ ಪುರುಷ ಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲ ದೇವ ಲಕ್ಷ್ಮೀನಾರಾಯಣನ ಪಾದ ಸೇವಕನೀ ಮಹಾದೇವನ ಸುತ ಕರು- ಣಾವಲಂಬಿಗಳ ಕಾವ ನಮ್ಮಯ ಕುಲ- ದೇವ ವಲ್ಲೀಪತಿ ಪಾವಂಜಾಧಿಪ3
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್
ಮಳೆಯ ಪಾಲಿಸ್ಯಯ್ಯ-ಮಂಗಳ-ನಿಳಯ ಲಾಲಿಸಯ್ಯ ಪ ಗೋವುಗಳಳಿವುವಯ್ಯಾ ಅ.ಪ. ಗೋವಿಪ್ರರ ಕುಲವ-ಕಾಯುವ-ದೇವನು ಸಾವುವುನಿನ್ನುಳಿದಾವನು ಕಾವನು1 ಕೆರೆಯೊಳು ನೀರಿಲ್ಲಾ-ಭಾವಿಗಳೊರತೆಯ ಸೊರಿಲ್ಲಾ ತುರುಗಳು ಜೀವನದಿರವನು ಕಾಣದೆ ಹರಣವ ಬಿಡುವುವು ಕರುಣದಿ ಬೇಗನೆ 2 ಬಲರಿಪುಖಾತಿಯಲಿ ಬಾಧಿಸೆ ಜಲಮಯ ರೀತಿಯಲಿ ಚಲಿಸದೆ ಕರದೊಳಾಚಲವನು ಕೊಡೆವಿಡಿದುಳುಹಿದೆ ಗೋವ್ಗಳ ಬಳಗವ ನೀಗಳುಂ 3 ಜಲನಿಧಿಕೃತ ಶಯನ ಶಾರದ ಜಲರುಹದಳನಯನ ಜಲಧೀದಿತಿ ಜಲಚರಮಾರುತಿ ಜಲಜಕರಗಳಿಂ ಜಲದಾಗರದಿಂ4 ದಾರಿಯಜನರೆಲ್ಲ-ಬಹುಬಾಯಾರಿ ಬರುವರಲ್ಲಾ ವಿಚಾರಿಸುತಿರ್ಪರು 5 ಬೆಳಿದಿಹ ಸಸ್ಯಗಳು ಬಿಸಲಿನ ಝಳದಲಿ ಬಾಡಿಹವು ನಳಿನನಯನ ನಿನ್ನೊಲುಮೆಯ ತೋರಿಸಿ ಘಳಿಲನೆ ಪೈರುಗಳುಳಿಯುವ ತೆರೆದೊಳು6 ಕರುಣಾನಿಧಿಯೆಂದುನಿನ್ನನು ಶರಣುಹೊಕ್ಕೆನಿಂದೂ ಶರಣಾಭರಣ ಪುಲಿಗಿರಿಯೊಳು ನೆಲಸಿಹ ವರದ ವಿಠಲದೊರೆವರದ ದಯಾನಿಧೆ 7
--------------
ಸರಗೂರು ವೆಂಕಟವರದಾರ್ಯರು
ಬಿನ್ನಪಲಾಲಿಸಯ್ಯ ಭಕ್ತಪರಾಧ-ವನ್ನು ಕ್ಷಮಿಸಬೇಕಯ್ಯ ಪ.ಅನ್ಯಾಯ ಕಲಿಕಾಲಕ್ಕಿನ್ನೇನುಗತಿಸುಪ್ರ-ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.ಮಕ್ಕಳ ಮಾತೆಯಂದದಿ ಕಾಯುವ ಮಹ-ದಕ್ಕರದಿಂದ ಮುದದಿಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತುರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನುದಿಕ್ಕಿಲ್ಲದವರ ಧಿಕ್ಕಾರ ಗೈದರೆಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-ವರ್ಕಳಮಣಿ ನಿನಗಕ್ಕಜವಲ್ಲವುಕುಕ್ಕುಟಧರವರ ಮುಕ್ಕಣ್ಣತನಯ 1ಜಾತಿ ನೀತಿಯನು ಬಿಟ್ಟು ಡಾಂಭಿಕತನದರೀತಿಗೆ ಪ್ರೀತಿಪಟ್ಟುಸೋತು ಹಣವ ಕೊಟ್ಟು ಖ್ಯಾತರೆಂಬುವಗುಟ್ಟುಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿಯಾತುಧಾನರಗುಣಯಾತಕ್ಕರಿಯದುಭೂತೇಶ್ವರಸಂಜಾತ ಸುರನರ-ವ್ರಾತಾರ್ಚಿತ ಪುರಹೂತಸಹಾಯಕನೂತನಸಗುಣವರೂಥಪುನೀತ2ಯಾವ ಕರ್ಮದ ಫಲವೋ ಇದಕಿ-ನ್ಯಾವ ಪ್ರಾಯಶ್ಚಿತ್ತವೋಯಾವ ವಿಧವೊ ಎಂಬ ಭಾವವರಿತ ಪುರುಷಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲದೇವ ಲಕ್ಷ್ಮೀನಾರಾಯಣನಪಾದಸೇವಕನೀ ಮಹಾದೇವನ ಸುತ ಕರು-ಣಾವಲಂಬಿಗಳಕಾವನಮ್ಮಯ ಕುಲ-ದೇವ ವಲ್ಲೀಪತಿ ಪಾವಂಜಾಧಿಪ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ