ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ ನೆರೆದು ಬಂದು ಪ ಜನಕೆ ಗ್ರಾಸವೆಂತಹುದೆಂದು ಅನುಮಾನ ಹಚ್ಚಿಕೊಂಡು ಬಡವಾಗದಿರೆಲೆ ಆಲೋಚನೆ ಮಾಡು ನಿನ್ನೊಳಗೆ ತಿಳಿದು ಮರಳಿ ಮರಳಿ ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ ಚಿನುಮಯ ಸತ್ಯಸಂಕಲ್ಪ ದೇವ| 1 ಇನಿತು ಜೀವಿಗಳಿಗೆ ಕಾಲಕಾಲಕೆ ಗ್ರಾಸ ಮಾಡಿಯಿಪ್ಪಾ ಕ್ಷಣಮಿರಗೊಡದೆ ಆವಲ್ಲಿಯಿದ್ದರೂ ವುಣಿಸುವ ಉಚಿತವನ್ನೆ ತಿಳಿದು ನೋಡಿ ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ ನಿರ್ಮಾಣ ಮಾಡಿದಂತೆ ಬೊಮ್ಮಾ2 ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ ಧನ ನಿಧಾನನೆನೆಸಿ ಶ್ರೀಹರಿಯ ಆಜ್ಞಾದಿ ಜನಿಸುವಾಗಲೆ ಅವರವರವಾಡಿಪನಾ ಕೊನೆಯ ಸೆರಗಿನಲಿ ಕಟ್ಟಿಹನೋ ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ ಗುಣಿಸಿ ನೋಡಿದರೆ ಕಾರುಣಿಕÀವಹುದೊ 3 ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ ಅನುಭವಕೆ ತಂದುಕೊಂಡು ಗ್ಲಾನಿಯಾಗೋ ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ ತನುವ ಶೋಷಿಸಿ ವಿರೋಧಾವಾಗಿ ಕೊಂಬೆ ಸಿರಿ ನಮ್ಮ ವಿಜಯವಿಠಲರೇಯಾ ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ
--------------
ವಿಜಯದಾಸ
ಲೋಭಿಯು ಬೇಡಲು ಲಾಭವೇನಿರುವುದು ನಾಭಿಯು ಒಣಗುವುದು ಪ ಲೋಭಿಗೆ ಧನದಿಂದ ಶೋಭೆಯುಂಟೆ ಮನ ಕ್ಷೋಭೆಯಲ್ಲದೆ ಸತತ | ತನ್ನಯ ಮನಕ್ಷೋಭೆಯಲ್ಲದೆ ಸತತ ಅ.ಪ ನೂರು ಛಿದ್ರಗಳಲ್ಲಿ ತೋರುತಿದ್ದರು ದೇಹ ಕೋರನು ನವವಸನ | ಏನೆಂದು ಕೋರನು ನವವಸನ ಮೂರು ಕಾಸಿಗೆರಡು ಮಾರುತಿದ್ದರು ಅದ ದೂರದಿ ತ್ಯಜಿಸುವನು | ನೂತÀನವಸ್ತ್ರ ದೂರದಿ ತ್ಯಜಿಸುವನು 1 ಬಂಧು ಜನರು ತನ್ನ ಮಂದಿರಕ್ಕಿಳಿಯಲು ನೊಂದುಕೊಳ್ಳುವ ಮನದಿ | ತತ್ತಳಿಸುತ ನೊಂದುಕೊಳ್ಳುವ ಮನದಿ ತೊಂದರೆಗಳ ಪೊಂದಿಹೆನೆನ್ನುತ ಮುಂದಕೆ ಸಾಗಿಸುವ | ಬಂದವರನು ಮುಂದಕೆ ಸಾಗಿಸುವ 2 ಮುಗ್ಗಿದ ಧವಸವು ಅಗ್ಗÀದಿ ಮಾರಲು ಹಿಗ್ಗುತ ಕೊಳ್ಳುವನು | ಸೊಗಸಿನಲಿ ಹಿಗ್ಗುವನು ಒಗ್ಗಿಹುದೆನ್ನುತ ನುಗ್ಗಿಸಿ ಉದರದಿ ಸಗ್ಗದೆ ನಡೆಯುವನು | ಪರನುಡಿಗೆ ಸಗ್ಗದೆ ನಡೆಯುವನು 3 ಹಣದಲಿ ಲೋಭಕೆ ಕೊನೆ ಮೊದಲಿಲ್ಲದೆ ಒಣಗಿಸುವನು ತನುವ | ಕಾರ್ಪಣ್ಯದಿ ಒಣಗಿಸುವನು ತನುವ ಗೆಣೆಯನಿವನು ನಾಲ್ಕಾಣೆಯ ಕಂಡರೆ ಕುಣಿಯುವನು ಮನದಲ್ಲಿ | ಎಣೆಯಿಲ್ಲದೆ ಕುಣಿಯುವ ಮನದಲ್ಲಿ4 ಕಿಕ್ಕಿರಿದರು ಧನ ಕಕ್ಕುಲತೆಯೊಳ್ ತನ್ನ ಮಕ್ಕಳ ಸಲಹುವನು | ರಕ್ಕಸನಿವ ಮಕ್ಕಳ ಸಲಹುವನು ಮಿಕ್ಕ ಧನವ ಬಲು ಅಕ್ಕರೆಯಿಂದ ಎವೆ ಯಿಕ್ಕದೆ ನೋಡುವನು | ನೇತ್ರದಿ ಎವೆಯುಕ್ಕದೆ ನೋಡುವನು 5 ನುಡಿದರೆ ಸವಿಮಾತ ಒಡವೆ ವಸನಗಳಿ ಗ್ಹಿಡಿವಳೆಂದರಿಯುತಲಿ | ಸಡಗರದಿ ಹಿಡಿವಳೆಂದರಿಯುತಲಿ ಕರವ ಪಿಡಿವ ತನ್ನ ಮಡದಿಯ ಕಂಡರೆ ಸಿಡಿಮಿಡಿಗÀುಟ್ಟುವನು | ನಿರ್ಘೃಣನಿವ ಸಿಡಿಸಿಡಿ ಗುಟ್ಟುವನು 6 ರಾಯರೆ ನಿಮ್ಮ ಸಹಾಯ ಹೊರತು ಕಾಣೆನೆನಲು ಕಾಯುವ ಧಣಿ ನಾರಾಯಣನೆನುತಲಿ ನುಡಿಯುವನು 7 ಈ ಧನವೆ ದೊಡ್ಡ ಸಾಧನವೆನ್ನುವ ಮೇಧಾವಿಯು ಇವನು | ಓದಲರಿಯದ ಮೇಧಾವಿಯು ಇವನು ಪಾದ ಕಮಲದಲಿ ಆದರವರಿಯನಿವ | ಎಂದೆಂದಿಗು ಆದರವರಿಯನಿವ 8 ಘನತೆಯು ಬೇಡವು ಜನತೆಯು ಬೇಡವು ಧನವಿದ್ದರೆ ಸಾಕು | ಈ ನರನಿಗೆ ಧನವಿದ್ದರೆ ಸಾಕು ಮನುಜ ಮುಟ್ಟದ ಗುಬ್ಬಿಯನನುಕರಿಸುತ ಜೀ ವನವನು ಕಳೆಯುವನು | ಕ್ಲೇಶದಿ ಜೀವನವನು ಕಳೆಯುವನು9 ಗಳಿಸಿದವನ ಧನ ಬಳಸಿದವನಿಗೆಂಬ ಮುಳುಗಿ ಮುಳುಗುತಿರುವ | ಕ್ಲೇಶಗಳಲಿ ಮುಳುಗು ಮುಳುಗುತ್ತಿರುವ 10 ಭುಜಗಶಯನ ಹರಿ ಸುಜನರು ತನ್ನನು ಅಜನೆಂದು ಕರೆಯುತಿರೆ | ಸೃಷ್ಟೀಶನ ಅಜನೆಂದು ಕರೆಯುತಿರೆ ತ್ಯಜಿಸದೆ ಹೆಸರನು ಅಜಗಳ ಸ್ತನದಂತೆ ಸೃಜಿಸಿದನೀ ಜನರ | ಪ್ರಸನ್ನ ಹರಿ ಸೃಜಿಸಿದನೀ ಜನರ 11
--------------
ವಿದ್ಯಾಪ್ರಸನ್ನತೀರ್ಥರು
ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ 1 ವಾಗತ್ಯಪಡುವದೆ ವಿಧಿನಿಷೇಧಾರಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುವುದೆ ಆರ್ಶೀವಾದ ಬೀಗುರುಪಚಾರವೇ ಭೂತದಯವು 2 ಮೈಮರೆತು ಮಲಗುವುದೆ ಧರಣಿ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೋಯ್ಯಾಲಿತನವೆಲ್ಲ ಹರಿಯ ವಿಹಾರ 3 ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನವು ಬರಲದೇ ಭಗವದ್ಭಜನೆಯೋಗ ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ 4 ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು ಯದೃಚ್ಛಾಲಾಭವೇ ಸುಖವುಯೆನಲು ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ 5
--------------
ವಿಜಯದಾಸ