ಮಾನವನೆ ನೀ ಮರುಗದಿರೈ ಪ
ನಾನು ನನ್ನದೆಂಬಭಿಮಾನದಲಿ ಅ.ಪ
ಹೊಟ್ಟೆಗೋಸುಗ ಪರರಿಷ್ಟಾನು ಸಾರದಿ
ಕೆಟ್ಟ ನುಡಿಗಳನು ನುಡಿಯುತಲಿ 1
ಸಾವುತಪ್ಪದೆ ಮುಂದೆ ಭಾವಿಸಿ ನೋಡದೆ
ಜೀವನಕ್ಕಿಲ್ಲದೆ ನಿರ್ಜೀವಿ ನಾನೆಂದು 2
ಓಲಗ ನಷ್ಟವಾಗೋದಲ್ಲದೆ ಲಾಭವುಂಟೇನೋ3
ದುರುಳರ ಬೇಡುವರೆ ಕರೆಕರೆ ಯಾಕೆ 4
ಹಿರಿಯರು ಪೇಳಿದ ಪರಮಬೋಧೆಯಿಂದಾ
ಗುರುರಾಮವಿಠ್ಠಲನ ಚರಣವ ನಂಬಿದೆ 5