ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವನೆ ನೀ ಮರುಗದಿರೈ ಪ ನಾನು ನನ್ನದೆಂಬಭಿಮಾನದಲಿ ಅ.ಪ ಹೊಟ್ಟೆಗೋಸುಗ ಪರರಿಷ್ಟಾನು ಸಾರದಿ ಕೆಟ್ಟ ನುಡಿಗಳನು ನುಡಿಯುತಲಿ 1 ಸಾವುತಪ್ಪದೆ ಮುಂದೆ ಭಾವಿಸಿ ನೋಡದೆ ಜೀವನಕ್ಕಿಲ್ಲದೆ ನಿರ್ಜೀವಿ ನಾನೆಂದು 2 ಓಲಗ ನಷ್ಟವಾಗೋದಲ್ಲದೆ ಲಾಭವುಂಟೇನೋ3 ದುರುಳರ ಬೇಡುವರೆ ಕರೆಕರೆ ಯಾಕೆ 4 ಹಿರಿಯರು ಪೇಳಿದ ಪರಮಬೋಧೆಯಿಂದಾ ಗುರುರಾಮವಿಠ್ಠಲನ ಚರಣವ ನಂಬಿದೆ 5
--------------
ಗುರುರಾಮವಿಠಲ
ಶಯನ ಸುಖವೇ ಸುಖವೆ ರಂಗನಾಥ ಭಯಗೊಂಡ ಭಕ್ತರೊಳು ದಯವಿಲ್ಲವೆ ಪ ಶರಣನ ಕೈ ನೀಡಿ ಪೊರೆಯೆಂದು ಪೇಳ್ವಾಗ ದುರಿತಗಳ ಹರಿಸೆಂದು ಬೇಡುವಾಗ ಕರುಣಾನಿಧಿ ನೀನೆಂದು ಹಾಡಿ ಹಂಬಲಿಪಾಗ ಶಿರಬಾಗಿ ಪಾದಕೆ ವಂದಿಸುವಾಗ ರಂಗಾ 1 ಜೀವಿಗಳ ಪಾಲಿಸುವ ಹೊಣೆ ನಿನಗೆ ಸಲುವಾಗ ದೇವ ನೀನೋಬ್ಬನೇ ದಿಕ್ಕೆನುವಾಗ ಭಾವದಲಿ ನಿನ್ನಮೂರ್ತಿಯ ನೆನೆದು ನಲಿವಾಗ ದೇವ ಎನ್ನಪ್ಪ ಬಾಯೆನುವಾಗ ರಂಗಾ 2 ಸ್ವಾಭಿಮಾನದಿ ನೀನು ಲೋಕವನು ಮರೆವಾಗ ಲೋಭಿ ನೀನೆನ್ನದೇ ಜಗವೆಲ್ಲ ರಂಗಾ ಲಾಭವುಂಟೇ ಭಕ್ತಜನಕೆಲ್ಲ ಕ್ಷಯರೋಗ ನಾಭಿಗಂಟದೆ ಪೇಳು ಮಾಂಗಿರಿಯರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್