ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಾದರು ದಯಮಾಡು ಪಂಡರಿನಾಥ ಪಾದ ಮುಟ್ಟಿ ಪ್ರಾರ್ಥಿಪೆನು ಪ ದಾನಧರ್ಮವು ಮಾಡಬೇಕೆಂದು ಮನವಿರೆ ದಾನವಾಂತಕ ಕೃಷ್ಣ ಧನವಿಲ್ಲವಯ್ಯ ಗಾನಲೋಲನೆ ಭಕ್ತಪಾಲ ನಿನ್ನಯ ಪಾದ ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ 1 ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ- ಮೂರ್ತಿ ಸೇವಿಸಲಸಮರ್ಥನಾಗಿರುವೆ ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ 2 ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ ಜ್ಞಾನಿಗಳರಸ ಭಕ್ತರ ಸುರಧೇನು ಅಜ್ಞಾನಿಗಳಳಿದು ಸುಜ್ಞಾನಜನರ ಸಂಘ 3 ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ ಖಗವಾಹನ ಕಂಸಾರಿಯೆ ದೇವ ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ ಪಾದಗಳು ಸೇವಿಪ ಪರಮಲಾಭವನು 4 ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ 5
--------------
ನಿಡಗುರುಕಿ ಜೀವೂಬಾಯಿ
ದೈತ್ಯರಲ್ಲೆ ದುರ್ಜನ ಸೇವೆ ಪ ಪರರ ಲಾಭವನು ಧರಿಯೊಳು ನೋಡುತ | ಧರಿಸಲಾರ ಧಿಕ್ಕರಿಸುತ ನುಡಿವನು | ಪರರ ಹಾನಿಯಲಿ ಮರುಗದೆ ಮನದೊಳು | ಹರುಷ ಬಡವುತ ಚರಿಸು-ನೈಯ್ಯಾ 1 ಖಳ್ಳೆದೆಯೊಳು ಮನದಲ್ಲಿ ಕಪಟವು | ಸೊಲ್ಲಿತೆ ನೋಡಲು ಬೆಲ್ಲನೆ ಬೀರುವಾ | ಒಳ್ಳಿತು ಗುಣಗಳ ಯಳ್ಳಿಲಿ ನಿತೈಣಿಸದೆ | ಕ್ಷುಲ್ಲತನದಿ ಕುಂದಲ್ಲಿಡುವ-ಕೈಯ್ಯಾ 2 ಸತಿ | ಎನ್ನ ಮಗÀನೆ ಮಗ ಯನ್ನ ಗುಣವೇಗುಣ | ತನ್ನನೆ ಹೊಗಳುತ ಅನ್ಯಕ್ಹಳಿವರೆ 3 ಆವದು ಅರಿಯದ ಭಾವಿಕ ಜನರನು | ತಾವೀಗ ಕಂಡರೆ ಆವನನುಗ್ರಹ | ಆವ ಮಂತ್ರ ನಿನಗಾವ ನ್ಯಾಸವೇ | ದಾವಾಗ ಛಲಣಿಯ ಭಾವಿಪರವರೇ 4 ತಂದೆ ಮಹಿಪತಿ ನಂದನ ಪ್ರಭುವಿನಾ | ಒಂದರಗಳಿಗೆಯ ಛಂದದಿ ಸ್ಮರಿಸದೆ | ನಿಂದೆಯ ಮನೆಯೊಳು ಸಂದಿಸಿ ಅನುದಿನಾ | ಮಂದ ಮತಿಯರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭವ | ಭಂಗವಾಗುವದು ಅಂಗವಯ್ಯೋ ಪ ಅಗ್ಗವಾದರು ಸಂತರು ಲಾಭವನು | ಮುಗ್ಗು ಜೋಳವ ಕೊಟ್ಟಿತು | ಗೊಗ್ಗಯ್ಯನೆಂಬರೇ ಕಡೆಯಲ್ಲಿ ನಿನಗೆ ಅಗ್ಗಳವದಕಿಂತ ಒಂದುಂಟು ಗಂಟು 1 ಸಕಲ ಶಾಸ್ತ್ರಗಳ ಬಲ್ಲೆ | ಮಿಕ್ಕ ಕಾಪುರುಷರಂತೇನು ಕಲ್ಲೇ | ಪ್ರಕಟಿಸುವರಾರಿಲ್ಲೆ ನಿನಗಿನ್ನು ಶಿವ ಶಿವಾನುಭವ ನೀನ್ಯಾಕ ಒಲ್ಲೆ ಇಲ್ಲೇ 2 ಹುಚ್ಚರೇ ಭವತಾರಕನ ಭಕ್ತರು ? ನೆಚ್ಚುವರೆ ಸಂಸಾರವ ? ಮೆಚ್ಚುವರೆ ಶ್ರುತಿಯುತರು ಈ ಮಾತಿಗೇ ? ಎಚ್ಚರಿಕೆ ಇನ್ನಾರ ಹಿಡಿಯೊ ಬೇಗ ಈಗ 3
--------------
ಭಾವತರಕರು