ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮ ನಿವೇದನೆ ಇಂದು ಪಾವನವಾಗಿರೊ | ಇಂದಿರಾ ರಮಣನ್ನ ದಿನ ವ್ರತವ ಮಾಡಿ ಪ ಅನುಜ ನಿಜಾಂಗನೆ | ತನಯರು ನೆರೆಹೊರೆ ಮನ ಜನಕೆ | ಸಿರಿ | ದಿನ ತ್ರಯವನು ಅನುಸರಿಸಿರೆಂದು 1 ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು | ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು | ತಾ ಕೂಗಿ ಸುಖದಲ್ಲೀ | ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ2 ಹರಿದಿನದಲ್ಲಿ ನೀರು ಬೆರಳಲಿ ಸುರಿದಾ | ಭೂಸುರನು ಚಾಂಡಾಲನು ನಿರುತದಲೀ | ವರಗೋಮಾಂಸ ನರಕಾ | ನರಿ ನಾಯಿರಾಸ | ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು 3 ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ | ಏನೇನು ಸಂಕಟ ತಾನೊದಗೆ | ಆನಂದ ಮತಿ ಈವಾ ಶ್ರೀನಾಥನ ದಿವಸ | ಧಾನ್ಯದಲಿಟ್ಟು ನಿದಾನಕೆ ಗತಿ ಎಂದು 4 ಇತರ ದಿವಸದಲ್ಲಿ ಅತಿಶಯದಿಂದಲೀ | ಕೃತ ಕರ್ಮಗಳು ವಿಹಿತವಹುದೂ | ರತಿಪತಿಪಿತನ ಅಪ್ರತಿವಾಸರದಲ್ಲೀ | ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು 5 ಎಲೆ ಹಾಕದೆ ಜಾಗರವ ಬೇಸರದಲೆ | ಲವಲವಿಕೆಯಿಂದ ಕವಿಗಳೊಡನೆ | ತವಕದಿಂದಲಿ ಪಾಡುತ ಗಾಯನ ಶುದ್ಧಾ | ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು6 ದಶಮಿ ವಂದು ಏಕಾದಶಿ ಎಂಟು ತಿಳಿದು | ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ | ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ | ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ 7 ಏಳೊಂದು ವತ್ಸರದ ಮೇಲೆ | ವತ್ಸರ ಬಿಟ್ಟು ವಾಲಾಯ ಉಳಿದವರು | ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ 8 ಆವಾದಾದರ ಬಿಡದಿರೀ | ಕೇವಲ ಸಾಧನವೂ | ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ | ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ 9
--------------
ವಿಜಯದಾಸ
ಆನಂದಮೆಂದಿದಕೆ ಹೆಸರಿಟ್ಟೀ ಪಾಪಿ ಪ ಮನಬಂದತೆರ ಸೇಂದಿ ಸೆರೆಕುಡಿದು ಉಬ್ಬಿ ಅ.ಪ ಕೊಡ ಪಡಗ ಹೆಂಡವನು ಕುಡಿದು ಎಚ್ಚರದಪ್ಪಿ ತಡೆಯದಲೆ ಮಲಮೂತ್ರ ಬಿಡುತದರೋಳುರುಳಿ ಬಡಿಸಿಕೊಂಡಟ್ಟೆಯಿಂ ಒಡನೆ ಎಚ್ಚರವೊಂದಿ ಕೆಡಿಸಿದಾನಂದಮ್ಹಿಡಿ ಕೊಡುವೆ ಶಾಪೆನುವಿ 1 ಅವಸರದಿಂ ಜಿಹ್ವೆಯ ಸವಿರುಚಿ ಲವಲವಿಕೆಯಿಂ ಭವಿಜನುಮಿಗಳು ಎಲ್ಲ ಕವಿದುಬಂದಿಳಿದು ಸವಿಯಬಾರದ್ದು ಸವಿದು ಶಿವನೆನಾವೆಂದೆನುವ ಭವಿಗಳೆಲ್ಲರು ಜಗದಿ ಶಿವನ ಪೋಲುವರೆ2 ಕದ್ದು ಮುಚ್ಚಿಲ್ಲದಲೆ ಮುದ್ದೆ ಮುದ್ದೆ ಗಾಂಜವನು ಸಿದ್ಧಪತ್ರೆಂದೆನುತ ಶುದ್ಧಮತಿಗೆಟ್ಟು ಬದ್ಧರೆಲ್ಲ ಸೇದಿ ನಿಜ ಪದ್ಧಿತಿಯನ್ಹದಗೆಡಿಸಿ ಶುದ್ಧಾತ್ಮರೆನಲು ಪರಿಶುದ್ಧರಾಗುವರೆ 3 ನಾನುನೀನೆಂದೆಂಬ ಖೂನಡಗಿ ಎತ್ತ ತಾನೆ ತಾನೆಂದು ಹೊಳೆವ ಬ್ರಹ್ಮ ಆನಂದ ಸೊಬಗು ಏನೊಂದು ತಿಳಿಯದೆ ಆನಂದವೆಂದೆನುತ ಶ್ವಾನನಂದದಿ ಕೂಗ್ವಿ ಜ್ಞಾನಾಂಧ ಅಧಮ 4 ಹುಚ್ಚುಮನುಜನೆ ನಿನಗೆ ಹೆಚ್ಚಿನ ಗೋಜ್ಯಾಕೆ ನಿಶ್ಚಲಭಕುತಿಂ ಬಚ್ಚಿಟ್ಟು ಮನದಿ ಅಚ್ಯುತ ಶ್ರೀರಾಮನ ಹೆಚ್ಚೆಂದು ದೃಢವಹಿಸಿ ಎಚ್ಚರದಿ ಭಜಿಸಿ ಭವಕಿಚ್ಚಿನಿಂದುಳಿಯೊ 5
--------------
ರಾಮದಾಸರು
ಆಸೆಗೆ ಮೇರೆಯನು ನಿರ್ಮಿಸಿದಿಯಿಲ್ಲವೋ ಬೇಸರವೆ ಇಲ್ಲಿದಕೆ ಎಷ್ಟಾದರಕಟ ಪ ಅನ್ನ ಸಿಗದ್ಹೊತ್ತಿನಲಿ ಅನ್ನ ಸಿಕ್ಕರೆ ಸಾಕು ಅನ್ಯಮೇನೊಲ್ಲೆಂದು ನಿನ್ನ ಕೋರುವುದು ಅನ್ನ ಚೆನ್ನಾಗಿ ಸಿಗಲು ತಣ್ಣಗಿರದುಂಡುಟ್ಟು ಹೊನ್ನು ಚಿನ್ನಕೆ ಸೋತು ಬನ್ನಬಡಿವುದಭವ 1 ಕಡುಕ್ಷೇತ್ರ ಮಾನ್ಯತನಗಡವಿ ತುಂಬಿರ್ದರು ಮಿಡುಕುವುದು ತಡೆಯದೆ ಎಡಬಲದಲಿರುವ ಬಡವರಾಸೆಗೆ ಕಂಡು ಪಡೆವ ಲವಲವಿಕೆಯಿಂ ಬಿಡದೆ ಅವರಿಗೆ ಕೆಡುಕು ಹುಡುಕುವುದು ಹರಿಯೆ 2 ಪೊಡವಿಯೆಲ್ಲನು ಒಂದೇ ಕೊಡೆಯಿಂದಾಳಲು ಮತ್ತು ಪಡೆಯಲಿಚ್ಛಿಪುದಿತರ ಪೊಡವಿಪರ ರಾಜ್ಯ ಸುಡುಗಾಡು ಕಡೆತನಕ ಸುಡುಸುಡೀ ಆಸೆಯನು ಬಿಡಿಸೆನ್ನ ರಕ್ಷಿಸೈ ಒಡೆಯ ಶ್ರೀರಾಮ 3
--------------
ರಾಮದಾಸರು
ತೆರಳಿದರು ವಿಜಯರಾಯರು ವಿಜಯ ವಿಠಲನ ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ ರವು ಗುರುವಾರ ಪ್ರಥಮ ಯಾಮದೀ ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ 1 ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ ಭಾಗವತ ಬ್ರಹ್ಮಸೂತ್ರ ಭಾರತ ಗೀತ ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ 2 ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ ನಿಕರಗಳ ಕವನ ರೂಪದಲ್ಲಿ ರಚಿಸಿ ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ 3
--------------
ಜಗನ್ನಾಥದಾಸರು
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯಅರ್ಚನೆ ಮಾಡುವ ಅರ್ಚಕ ಬುಧರಿಗೆಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದತಂತ್ರೋಕ್ತ ಪಥದಿ ನಿರಂತರ ಮರೆಯದೆ 1ಪೃಥುಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರಕೃತವರ್ಮ ಸಾತ್ಯಕಿ ಯದುಕುಲ ಸುರಖಷಿಯತಿತತಿ ಅರ್ಚಿಸಿ ಅತಿಧನ್ಯರಾದರೆಂದು 2ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ ಸಂತತಿಗಳಿಂದತಾನು ಇಷ್ಟನಾಗಿ ನಾರಾಯಣನಾತ್ಮನೆಂದು 3ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ 4ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರಸೂನ ತುಳಸಿ ಗಂಧಮೋಘ ನೈವೇದ್ಯದಿಂಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು 5ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ ರತ್ನಾಭರಣವೈಜಯಂತಿಕಿರೀಟಕುಂಡಲದಾಮಹಾರ ನೂಪುರಗಳಿಂದ6ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತಸೇವ್ಯಮಾನನಾಪಾದ ಮೌಳ್ಯಾಂತ ವೀಕ್ಷಿಸಿ7ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದಅಹಿವರಶಯನಜ ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು ಪರವಶದಿಂದ 8ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆಭೇರಿಆಲಾಬುತಂಬೂರಿಭಾಗವತಗಾನಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ 9ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ 10ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ ಪರಮಾತ್ಮನೆಂದುಆತ್ಮ ಮತ್ತೆ ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ 11ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿಸರ್ವಕಾಲದಲಿ ಸರ್ವಸಮರ್ಪಣೆಯೆಂದು 12ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
--------------
ಪ್ರಸನ್ನವೆಂಕಟದಾಸರು