ಗೋವಿಂದ ನಮೋ ಗೋವಿಂದ ಪ
ಮಂದ ಮನವೇ ನೀನು
ಅಂದು ನೋಡೆಲೊ ಒಮ್ಮೆ ಅ.ಪ
ತಂದೆ ಗೋವಿಂದ ಎನ್ನೆಲೊ ಮನವೆ
ಬಂದ ಬಂಧನವೆಲ್ಲವ ಕಳೆವ
ಕುಂದುನಿಂದೆಗಳಿಲ್ಲದೆ ಕಾಯ್ವ ಹಿಂದೆ
ಮುಂದೆ ತಾನೆ ನಿಂತಿರುವ ಆಹ
ಸಿಂಧುಶಯನ ತನ್ನನ್ಹೊಂದಿ ಭಜಿಪರನ್ನು
ಕಂದರೆನ್ನುತಾನಂದದಿ ಸಲಹುವ 1
ಎಲ್ಲಿ ಕರೆದರಲ್ಲೆಬರುವ ಸೊಲ್ಲು
ಸೊಲ್ಲಿನೊಳಗೇ ನಿಂತಿರುವ
ಅಲ್ಲಿಇಲ್ಲಿ ಎಂದೆಂಬ ಹೇವ ಇಲ್ಲ
ಮಲ್ಲಮರ್ದನ (ಉಂ) ಚಲುವ ಆಹ
ಪುಲ್ಲನಯನ ತನ್ನ ನಿಲ್ಲದೆ ಭಜಿಪರ
ಲಲ್ಲೆನಿಂತುಕೊಂಡುಲ್ಲಾಸದಿ ಕಾಯುವ 2
ಇವರವರೆಂಬುವ ಭಾವ ದೇವ
ಮಾವ ಮರ್ದನಗಿಲ್ಲೆಲವೋ
ದಿವ್ಯಭಾವ ಭಕ್ತರ ಪಿಡಿದು ಕರೆವ
ಕಾವ ಜೀವದಿ ಬಿಡಿದನುದಿನವು ಆಹ
ಜಾವಜಾವಕೆ ಶ್ರೀರಾಮನ ಚರಣವ
ಭಾವಿಸಿ ಭಜಿಪರ ಭಾವದೋಳ್ ಬೆರೆತಿರುವ 3