ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಕೃಷ್ಣ ಕಂಡಿರೆ ಅದ್ಭುತ ಕೂಸ ಕಂಡಿರೆ ಕಂಡಿರೆ ಅದ್ಭುತ ಕೂಸ ನಾಭಿ- ಪ. ಮಂಡಲದೊಳಗಬ್ಜಕೋಶ ಅಹ ರಿಪು ಪುಂಡರೀಕ ಚಕ್ರ ಪಾಂಡವ ವನರುಹ ಚಂಡಗದಾದಂಡ ಮಂಡಿತ ಹಸ್ತನ ಅ.ಪ ಈರೇಳು ಭುವನದೊಳಿಲ್ಲದಂಥ ಚಾರು ಶೃಂಗಾರಗಳೆಲ್ಲ ಸಿರಿನಲ್ಲ ನಿನ ಗ್ಯಾರು ಸರ್ವೋತ್ತಮರಿಲ್ಲ ಅಹ ಕ್ರೂರ ಕಂಸಭಯಭೀರುಗಳಾಗಿಹ ಶೌರಿ ದೇವಕಿಯಯಿದಾರನೆಯ ಮಗುವನು 1 ಪಾದ ವೃತ್ತ ಜಂಘೋರು ಪರಿಗತವಾದ ಜಾನು ಶೃಂಗದಂತೆ ಪೂರ್ಣಮಾದ ಮಾ ತಂಗ ಹಸ್ತಸಮನಾದ ಅಹ ಪೀವರೋರು ಸಂಗಿ ಸರ್ವಲೋಕ ಮಂಗಲದಾಯಿ ಶುಭಾಂಗವಾಸನನ್ನು 2 ತ್ರಿಭುವನ ಕಮಲಾಧಾರ ನಾಳ ನೆಗೆದು ಬಂದಿರುವ ಗಂಭೀರ ನಾಭಿ ಸ್ವಗತ ಭೇದದಿಂದ ದೂರ ನಾನಾ ಬಗೆಯಾದ ಲೀಲಾವತಾರ ಅಹ ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ ಖಗಪತಿವಾಹನ ಮಗುವಾದ ಬಗೆಯನು 3 ಕಂಬುಸಮಾನ ಸುಗ್ರೀವ ಲಲಿ- ತಾಂಬುಜಮಾಲೆಯ ಭಾವ ವಿಧಿ- ಕೌಸ್ತುಭ ಶೋಭಾ ಕರು ಣಾಂಬುಧಿ ಭಕ್ತ ಸಂಜೀವಾ ಅಹ ಬಿಂಬಾಧರ ಕಮಲಾಂಬಕ ಮೃದುನಾಸ ನಂಬಿದ ಭಕ್ತ ಕುಟುಂಬಿಯಾಗಿರುವವನ 4 ಮಕರಕುಂಡಲ ಯುಗ್ಮಲೋಲ ದಿವ್ಯ ಕಪೋಲ ಭವ ಚಕಿತರ ಸಲಹುವ ಬಾಲ ಪೂರ್ಣ ಅಕಳಂಕ ತಾರೇಶ ಲೀಲಾ ದಿವ್ಯ ಮುಖ ಲಲಾಟ ರತ್ನ ನಿಕಲ ಕಿರೀಟ ಸೇ- ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ
ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |ಗೋಕುಲದೊಳಗಿರಲಾರೆವಮ್ಮ ಪಸಾಕು ಸಾಕು ನಮಗೇಕೆ ರಚ್ಚೆಗಳು |ಆ ಕೃಷ್ಣನಪರಿನೀ ಕೇಳಮ್ಮಅ.ಪಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||ರೇಳು ಭುವನದೊಳಾಡುತಲಿರಲಿ |ಆಲದೆಲೆಯ ನಮ್ಮಾಲಯವನೆ ಪೊಕ್ಕು-|ಬಾಲೆಯರೆಲ್ಲರ ಬತ್ತಲೆ ಮಾಡಿ ||ಶಾಲೆಗಳೆಲ್ಲ ಮೇಲಕೆ ಹಾರಿಸಿ |ಆಲಂಗಿಸಿಕೊಂಡು ಬರುವನಮ್ಮ 1ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |ಅನುಬಂಧನಾಗಿ ಇದ್ದರೆ ಇರಲಿ ||ಅನುವು ಕಂಡುಕೊಂಡಾವೇಳೆಯಲಿ |ಉಣಬಿಟ್ಟಾಕಳ ಕರುಗಳನುಣಿಸಿ ||ಮನೆಯವರೆಲ್ಲರನೆಬ್ಬಿಸಿ ತಾನೇ |ಮನೆಯೆಲ್ಲವ ಸೂರಾಡಿದನಮ್ಮ 2ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |ಯಾರ ಮುಂದೆ ಹೇಳಲಿ ಸೊಲ್ಲ? ||ಓರಗೆಯಲಿ ಸಂಸಾರ ಮಾಡುವ |ನಾರಿಯರೆಲ್ಲರ ರಂಬಿಸಿಕರೆದು ವಿ-|ಕಾರ ಮಾಡದಂತೆ ಪುರಂದರವಿಠಲಗೆ |ಸಾರಿಸಾರಿ ನೀ ಬುದ್ಧಿ ಹೇಳಮ್ಮ 3
--------------
ಪುರಂದರದಾಸರು