ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾ ಕಾಂತನೆ ಪೊರೆ ಶ್ರೀ ಹರೇ ಪ ನಂದ ನಂದನ ದಿವ್ಯ ಸುಂದರ ಮಂದಾರ ಅ.ಪ. ವಲ್ಲವೀ ಕುಚತಟ ಪಲ್ಲವ ಕುಂಕುಮ ಚೆಲ್ವಕಪೋಲನೆ ಸಲ್ಲಲಿತಾಂಗನೆ 1 ಮನ್ನಿಸು ಭಾಸುರ ರೂಪನೆ 2 ಬಾಲಕ ಧ್ರುವನುತ ಲೀಲಾವಾಮನ ರೂಪ ಬಾಲ ಗೋಪಾಲ ಭೂಲೀಲಾ ವಿಹಾರಿಯೆ 3 ಚಾಪಾ ಪಾಪಾಳಿ ಖಂಡನ ಭೂಪ ನಿರ್ಲೇಪನೆ 4 ಕಂಸವಂಶಾಂತಕ ವಂಶವಿನೋದಿಯೆ ಅಂಶುಕ ಭಾಸುರ ಧೇನುಪುರಾಧೀಪಾ 5
--------------
ಬೇಟೆರಾಯ ದೀಕ್ಷಿತರು
ಕಂಡೆ ಕಂಡೆ ಕೃಷ್ಣನ ಕಂಡೆ ಕಂಡೆ ಪ ಕಮಲ ಪುಂಡರೀಕ ಭವಾದಿ ಪೂಜ್ಯನ ದಂಡ ಪಾಶಾನ್ವಿತನ ಕೋಟಿ ಮಾರ್ತಾಂಡಸಮ ಸಂಕಾಶದೇವನ ಅ ಅರುಣ ಪಂಕಜದಿರವ ಸೋಲಿಪ ಚರಣತಳಿನಖ ಬೆರಳ ಪಂಕ್ತಿಯು ಪರಡು ಬಣ್ಣದ ಪಿರಡಿಜಂಘೆಯು ಉರದಿ ಜಾನುಗಳೆರಡು ದರ್ಪಣ ತೆರದಿ ಶೋಭಿಸೆ ಕರಿಕರೋರುಗಳು ತರು ನಿತಂಬದಿ ಮೆರೆವ ಪೀತಾಂ ಬರದ ನಿರಿ ಸಡಗರದಿ ದೈತ್ಯರ ಮರುಳುಗೊಳಿಸಿದ ಪರಮ ಪುರುಷನ 1 ನಳಿನನಿಭ ಪೊಕ್ಕಳು ತನೂದರ ವಳಿಗಳತ್ರಯ ಚೆಲುವ ವಕ್ಷ ಸ್ಥ್ಥಳದಿ ಪದ್ಮಾಲಲನ ಕಾಂಚನ ಗಳದ ರೋಮದ ಕಲಿತ ಭುಜಯುಗ ಕುಲಿಶ ಪಲ್ದುಟಿಗಳು ಪ್ರವಾಳ ವರ್ತುಳ ಕ ಪೋಲ ಪರಿಮಳ ಚಂಪಕದಳದ ನಾಸಿಕ ಜಲಜಲೋಚನ ವಿಲಸಿತ ಭ್ರೂ ತಿಲಕ ಫಣಿಯನು 2 ಮಕರ ಕುಂ ಡಲವು ಮೂಗುತಿ ಎಳೆನಗೆಯ ಮೊಗ ಹುಲಿಯುಗುರು ಥಳಥಳಿಪ ಕೌಸ್ತುಭ ಬಲವು ಪದಕಾವಳಿ ಸರಿಗೆ ಶ್ರೀ ತುಲಸಿ ವನಮಾಲ ಸಗ್ವಲಯ ರುಳಿ ಬಿಂ ದಲಿ ರಸಾದ್ಯೆಳದಳ ಯುಗಳ ಕರ ತಳನಾಗೋ ಮಕ್ಕಳೊಡನೆ ಗೋ ಕುಲದಿ ಚರಿಸಿದೆ ಲಲಿತಾಂಗನೆ 3 ನೇಣು ಕಡಗೋಲು ಪಾಣಿಪೃಥಗಳ ಶ್ರೇಣಿಯಲಿ ಒಡ್ಯಾಣ ನೂಪುರ ಪ್ರಾಣಮುಖ್ಯರು ಕಾಣದತಿ ಕ ಲ್ಯಾಣಗುಣಗಣ ಶ್ರೇಣಿವಂತನ ಮಾಣದನುದಿನ ಸಾನುರಾಗದಿ ಧೇನಿಸುವರ ಮನೋನುಕೂಲನ ಬಾಣಗುರುವಿನ ಕಾಣೆನೆನಿಸಿದ ಜಾಣ ಪರಮ ಪುರಾಣ ಪುರುಷನ 4 ಭೂತಕೃತ್ಯದ್ಭೂತಿದಾಯಕ ವೀತ ಶೋಕ ವಿಧಾತಮರ ಪುರು ಹೂತ ಮುಖವಧ್ಯಾತ ಖರಮುರ ಸೂತಗತಸಂಕೇತ ತ್ರಿಗುಣಾ ತೀತ ನಂದನೀಕೇತನದಿ ನವ ನೀತ ಸವಿದ ಪುರಾತನ ಜಗ ನ್ನಾಥ ವಿಠಲನ 5
--------------
ಜಗನ್ನಾಥದಾಸರು