ವಾಯು ದೇವರು
ಪಾವಕ ಭಾರತೀಶ ಮಹ ಶೂರಾ ಪ
ಕೇಸರಿ ರೂಪನೆಶರಣೆನ್ನುವೆ ತವ ಚರಣಾಬ್ಜಗಳಿಗೆ ಅ.ಪ.
ಕೂರ್ಮ ಕರ್ಮ - ಕರಣ 1
ಭೀಮಾ - ಕೌರವರಳಿದ ನಿಸ್ಸೀಮ | ಪ್ರಥಮಾಂಗ ಹರಿಗೆ ಸುಧಾಮಅಸಮ ನಿನ್ನೊಳು ಹರಿಪ್ರೇಮ | ನಿನಗೊಂದಿಪೆ ಮುಂದಿನ ಬೊಮ್ಮಶ್ಯಾಮಸುಂದರ ಹರಿ ಪ್ರೇಮ ಸಂಪೂರ್ಣನಿಮ್ಮೋಲಗೆ ಬಯಸುವೆ ಭೂಷ ಲಲಾಮ2
ಮಧ್ವಾ - ಬಹುಶ್ರುತಿ ಪ್ರತಿಪಾದ್ಯ | ಮಧ್ವಾಖ್ಯ ತತ್ರ್ಯತಿ ಸಿದ್ಧಶುದ್ದ ಸತ್ವಾತ್ಮಕ ತನು ಬದ್ಧ | ಬದ್ದ ತ್ವವು ನಾಮಮಾತ್ರ ಸಿದ್ದಅದ್ವಿತೀಯ ಗುರು ಗೋವಿಂದ ವಿಠಲನಸಿದ್ಧಾಂತಿಸಿ ಬಹು ಹಳಿದೆ ವಿರುದ್ಧ 3