ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆಯರಸನ ಛಂದದಿಂದ ಭಜಿಸೋ | ಮನದಲಿ ನೀ ನಿಲಿಸೊ ಪ ಕುಂದನು ಎಣಿಸದೆ ಬಂದು ಕಾಯ್ವ ನಿನ್ನಾ |ನೆಂದು ಕಂದ ಬಲು ಘನ್ನಾ ಅ.ಪ. ಪಾದದ ಮೂಲವು | ಪಾತಾಲವು ಎಂದೂ | ಉಪರಿ ರಸಾತಲವೆಂದುಪಾದದ ಪರ್ವವು | ಮಹಾ ತಲಾಖ್ಯ ಲೋಕ | ಉಪರಿ ತಲಾತಲ ಲೋಕ ||ಸಾಧಿಸು ಜಂಘೆಗಳ್ | ದ್ವಯವೆ ಸುತಲ ಲೋಕ |ಚಿಂತಿಸಿ ಕಳೆ ಶೋಕ ||ಮೋದದ ಊರು ದ್ವಯ | ವಿತಲಾತಲವೆನ್ನೂ | ಮುಂದೆ ಸಾಗುತಲಿನ್ನು 1 ಭೂರಿ ಲಲಾಟವೆ | ತಪಸಿಗಳಾಸ್ಥಾನಾ | ಶಿರ ಬ್ರಹ್ಮನ ಸ್ಥಾನ 2 ಮುನ್ನ ಸೂಕ್ಷ್ಮ ಚಿಂ | ತನೆಯೇ ಬಲು ಕಷ್ಟ | ಎಂದೆನುತ ವಿಶಿಷ್ಟಘನ್ನ ಮಹಿಮ ಹರಿ | ತಾಳಿದ ಬೃಹದ್ರೂಪ | ಅದುವೆ ವಿರಾಟ್ರೂಪಾ ||ನಿನ್ನ ಬಿಂಬ ಗುರು | ಗೋವಿಂದ ವಿಠಲನ್ನ | ಮತ್ತೆ ಸ್ಥೂಲವನ್ನಾ ನನ್ನೆಯೆಂದೈಕ್ಯವೆ | ಚಿಂತಿಸೋದು ಮುನ್ನ | ಒಲಿವನು ಗುಣ ಪೂರ್ಣ 3
--------------
ಗುರುಗೋವಿಂದವಿಠಲರು
ಉರುಠಾಣೆ ಮಾಡುವೆ ಅರಸ ನಿನಗೆ ನಾ ಪ ಸ್ಮರಶತ ಸುಂದರ ಸರ್ವಲೋಕೇಶ್ವರ ಚರಣಸೇವೆಕಳ ಕರುಣದಿ | ನೋಡು ದ- ಶುಭ ಚರಿತ ಅ.ಪ ಕರಕಮಲವ ದಯಮಾಡು | ನಿನಗೆ ನಾ ಅರಿಸಿನ ಪೂಸುವೆ ಸರಸಿಜನಯನ 1 ದಿಟ್ಟ ಲಲಾಟವ ಕೊಟ್ಟರೆ | ಕುಂಕುಮ ವಿಟ್ಟು ತಿದ್ದುವೆನು ಸೃಷ್ಟಿಗೊಡೆಯನ 2 ಪರಮ ಪುರುಷ ನಿನ್ನ | ಶಿರಕೊರಳಿಗೆ ನಾ ಧರಿಸಿ ಲೇಪಗೈಯ್ಯುವೆ ಪ್ರಾಣೇಶಾ 3 ಪರುಷೋತ್ತಮ ಭಾಸ್ಕರ ಕುಲತಿಲಕ 4 ಹೇಮದ ತಟ್ಟೆಯ ತಾಂಬೂಲವ | ಗುರು- ರಾಮವಿಠಲ ತವಕದಿ ಸ್ವೀಕರಿಸೈ 5
--------------
ಗುರುರಾಮವಿಠಲ