ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಉತ್ಸವಗೀತೆ ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ ಕೋಲುವ ನೋಡುವ ಬನ್ನಿರೆಲ್ಲ ಪ ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ ಮೇಲೆ ಕಟ್ಟುಗಳಿಂದ ವಿಸ್ತರಿಸಿ ಕದಳಿಯಕೊನೆ ಕಬ್ಬು ತೆಂಗಿನ ಫಲಗಳ ವಿಧವಿಧವಾಗಿ ಶೃಂಗಾರ ಮಾಡಿದರು 1 ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ ಭದ್ರೆ ಶ್ರೀರಂಗನಾಯಕಿಯು ಬಂದು ಮಜ್ಜನವನು ಮಾಡಬೇಕೆನುತಲೆ ಮೂದ್ರ್ವಾರಮಧ್ಯದಲಿ ತಾ ನಿಂದಳು 2 ತಂದು ಹರವಿದರು ಬತ್ತವ ವಿಸ್ತಾರವಾಗಿ ತಂದಿಟ್ಟು ಕರ್ಪೂರಬಟ್ಟಲುಗಳು ತುಂಬಿ ಕಲ್ಪೋಕ್ತ ದಿಂದಲೆ ಪೂಜೆಯ ಮಾಡಿದರು 3 ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು ರಂಭೆಗಭಿಷೇಕವ ಮಾಡೆ ಗಂಧವ ಅಂಬೆ ಶಿರದೊಳು ಧರಿಸಿ ಪೂಮಾಲೆಯ [ಸಂಭ್ರಮದಿ]ಧರಿಸಿ ನಿಂದಳು ದೇವಿ 4 ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ] ಶಂಖನಾದವು ತಾಳಮೇಳ ವಾದ್ಯಗಳಿಂದ ಪಂಕಜಮುಖಿಗಭಿಷೇಕವ ಮಾಡಿದರು 5 ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ ಒಪ್ಪುವ ಕಂಕಣವನು ಕಟ್ಟಿದರಾಗ 6 ರತ್ನದ ಕಿರೀಟವಿಟ್ಟು ಲಲಾಟದಲ್ಲಿ ಮತ್ತೆ ತಿದ್ದಿದ ಕಸ್ತೂರಿಬಟ್ಟು ರತ್ನದ ಪದಕವು ಇಟ್ಟು ಕೊರಳೊಳು ಇಂದಿರೆ ವಂದಾಳು 7 ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ ನಿಂದು ಸೇವೆಯ ಮಾಡುತಿರಲು ಅರ್ತಿ ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ ದೇವಿಗೆ ಪೂಜೆಯ ಮಾಡಿದರು 8 ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು [ನಾರಿಯರ] ರ ಸಾಲುಗಳಿಂದ ಬಾಣ ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ] ನಾರಾಯಣನರಾಣಿ ಕೋಲುವಿನಲ್ಲಿ 9 ಛತ್ರಿಚಾಮರ ಸೂರೆಪಾನ ಪಿಡಿಯೆ ಮದ ಹಸ್ತಿಗಳು ಮಾಡುವ ಸಲಾಮು ಸುತ್ತಿ ದೀವಟಿಗೆಯು ತುತ್ತೂರಿ ನಾದವು ಮತ್ತಧಿಕಾರಿಗಳು ಮಂಟಪದಲಿ 10 ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು ಸೂರ್ಯಚಂದ್ರರು ಮುತ್ತಿನಬಟ್ಟು [ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ ಯ್ಯಾರದಿಂದಲೆ ಬಂದಳು ಮಂಟಪಕೆ 11 ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ ಹಸ್ತವಡಗೆ ಹರಡಿವಂಕಿ ದಕ್ಷಿಣ ಹಸ್ತದಿ ರತ್ನದಹಂಸವು ವಾಮ ಹಸ್ತವ ಮೊಣಕಾಲಿನೊಳಿಟ್ಟಳು 12 ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು ಕುಂದಣದ ಪಾಗಡವಿಟ್ಟು ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು ಕುಂದಣದ ಮಂಟಪದಲಿ ಕುಳಿತಳು 13 ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ ಕಟ್ಟಿದರು ಕಲ್ಕೀತುರಾಯಿ ದೃಷ್ಟಿಯಬಟ್ಟು ರತ್ನದ ಕುಂಡಲ [ಇಟ್ಟು] ಮತ್ತರಗಿಣಿಯನು ಮಾತಾಡಿಸುತ 14 ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ ಮತ್ತೆ ವಡ್ಯಾಣವನಿ[ಡಲು] ರತ್ನದ ಹಸ್ತದಿ ಅಭಯವ ಕೊಡುತ [ನಿಂತಳು] ಮೊರ್ನೋಮಿಯ ಮಂಟಪದಲ್ಲಿ 15 ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು ಮಿಂದು ಮಡಿಗಳ ತಾನುಟ್ಟು ಚಂದದಿ ನೈವೇದ್ಯವ ಭಕ್ತರಿಗಿತ್ತು ಬಂದು ಆಸ್ಥಾನದಿ ನಿಂದಳು ದೇವಿ 16
--------------
ಯದುಗಿರಿಯಮ್ಮ
ನಾ ಮಂದನಾದರು ಸರಿ ಗುರುಗಳ ಕೃಪೆಯಿಂದ ನಾ ಎಂಬುದ ಮರೆತು ಅರಿತಷ್ಟು ಪೇಳುವೆನು ಕಾಮನಯ್ಯ ಕೇಶವನ್ನ ಸ್ಮರಿಸು ಲಲಾಟದಲ್ಲಿ ಒಮ್ಮನಸಿನಿಂದ ಮೂಲವನ್ನು ಉದರ ಮಧ್ಯದಲಿ ಸಾನುವಂದಿತಾದ ಮೇಶನನ್ನು ಹೃದಯದಿ ಉ ಪಮೇರಹಿತನಾದ ಗೋವಿಂದನನ್ನು ಕಂಠ ಮಧ್ಯದಿ ಪತಿ ಶ್ರೀ ವಿಷ್ಣುವಿನನ್ನುದಷೋದರದಿ ಶೂನ್ಯ ಮಧುರಿಪುವಿನ ದಕ್ಷಭುಜದಿ ವಾಮ ಪ್ರತಿಕಂಠದಿ ತ್ರಿವಿಕ್ರಮನನ್ನು ವಾಮನ ಉದರದಿ ವಾಮನ ಮೂರ್ತಿಯನ್ನು ವಾಮ ಭುಜಕಂಠದಿ ಶ್ರೀಧರ ಹೃಷಿಕೇಶರನ್ನು ಸ್ವಾಮಿಯಾಗದಿ ಪದ್ಮನಾಭನನ್ನು ಪುಷ್ಟಭಾಗದಿ ನಿಮ್ಮ ಮಹಿಮ ಗುರು ಕಾಳೀಮರ್ಧಕೃಷ್ಣ ಭಿನ್ನ ದಾಮೋದರನನ್ನು ಶಿರೋ ಭಾಗದಿ ನೆನೆಯೊ 1 ಉದರ ಮಧ್ಯದಲಿ ಐದು ಚಕ್ರಂಗಳು ಹೃದಯಾಕಾಶದಲ್ಲಿ ಮೂರು ಚಕ್ರಂಗಳು ಹೃದಯ ಮೇಲಿನ ಕಂಠದಲ್ಲಿ ಒಂದು ಉದರದಕ್ಷ ಕುಕ್ಷಿಯಲ್ಲಿ ಎರಡು ಮಧುಸೂದÀನ ಸ್ಥಳದಿ ಮೇಲೆ ಎರಡು ಅಧರ ಭಾಗದಿ ವಾಮ ಬಾಹುವಿನಲ್ಲಿ ಒಂದು ಅದಲ್ಲದೆ ವಾಮಕಂಠದಿ ತಾ ಒಂದು ಎದೆಯ ಬಲಪಕ್ಷ ಕಪೋಲದಿ ಮೂರು ಒಂದು ಇದೇ ಇದೇ ತಿಳಿದು ಚಕ್ರಂಗಳ ಧರಿಸುವರು ಸದಮಲಗುರು ಕಾಳೀಮರ್ಧನಕೃಷ್ಣನ ಕೊಂಡರು ದಕ್ಷ ಬಾಹು ಕಂಠದಲ್ಲಿ ಕೆಳಗೆ ಒಂದು ಒಂದರಂತೆ ಕುಕ್ಷಿವಾಮದಲ್ಲಿ ಭಂಧದಿಕೊಂದು ಪರಂಗಳ ಪಕ್ಷಿವಾಹನನಾದ ಶ್ರೀಧರಸ್ಥಾನದ ಮೇಲೆ ಎರಡು ಕಪೋಲ ಒಂದು ಮೂರರಂತೆ ಕ್ರಮದಿ ದಕ್ಷನಾಗಿ ಧರಿಸಿ ಗುರು ಕಾಳೀಮರ್ಧನ ಕೃಷ್ಣನನೆಯೆ 3
--------------
ಕಳಸದ ಸುಂದರಮ್ಮ
ಲಲಾಟದಲ್ಲಿ ಇಡುವನೋ ಕಾವನು ಅವನನು ನಮ್ಮ ಪವಮಾನನೊಡೆಯನು ವಾಮ ಉದರದಲ್ಲಿ ಯಾವಾನಲೂ ಇಟ್ಟು ಮೆರೆಯುವನೋ ಅವನ ಗೊವತ್ಸ ನ್ಯಾಯದಿ ಕರವನು ಪಿಡಿವನು ಗಧಾಧರನು ಹಾವನ್ನೆ ಹಾಸಿಗೆ ಮಾಡಿಕೊಂಡ ಶ್ರೀಧರನ ಸ್ಥಾನದ ಕೆಳೆಗೆ ಪವಮಾನಿಗುವ ಮತಾ ಎರಡು ಗಧಾಯುಧ ಧರಿಸಲು ಪಾವನನಂತಾದವನು ಅವರ ದುರಿತಕಾನನಕೆ ಸಾವು ಹುಟ್ಟಿಲ್ಲದ ಪರಮಪುರುಷನ ಈ ಆಯುಧವ ಅವನು ವಾಮಸ್ತನದಿ ತಾನೊಮ್ಮೆ ಇಕ್ಕುವನೋ ಸಾನು ಹುಟ್ಟುಗಳಿಂದ ದೂರಗೈಸುವ ಗುರು ಕಾಳೀಮರ್ಧನಕೃಷ್ಣ 4 ಪದ್ಮ ಮುದ್ರೆಯನ್ನು ಭಕುತಿ ಪೂರ್ವಕವಾಗಿ ಹೃತ್ ಪದ್ಮದಿ ಬಂದು ಧರಿಸಲುಬೇಕು ದಕ್ಷ ಭುಜದ ಕೆಳೆಗೆ ಪದ್ಮಂಗಳೆರಡನ್ನು ದಕ್ಷ ಉದರಕೆಳೆಗೆ ಪದ್ಮವೆ ಒಂದನ್ನು ವಕ್ಷಸ್ಥಾನದಿ ಒಂದು ಪದ್ಮವ ಧರಿಸಲು ಭಕ್ತವತ್ಸಲನಾದ ಪದ್ಮ ರಮಣಗುರು ಕಾಳಿಮರ್ಧನಕೃಷ್ಣ ಪೊಳೆವಾ 5
--------------
ಕಳಸದ ಸುಂದರಮ್ಮ