ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜೋರೆ ಹೀಂಗೆ ಅಂಜೋರೆನಮ್ಮ ಕಂಜನಾಭನ ಮುಂದೆ ಕಾದುವ ಭ್ರಮತೆಯರು ಪ. ಅಷ್ಟೂರೊಳಗೆ ಅತಿ ಶ್ರೇಷ್ಠಳೆ ಭಾವೆ ಅಷ್ಟೂರಿಗೆ ಅಭಯ ಕೊಡದಲೆಅಷ್ಟೂರಿಗೆ ಅಭಯ ಕೊಡದಲೆ ಒಳಗೋಗಿಕೃಷ್ಣನ ಮುಸುಕಲಿ ಅಡಗೋರೆ ಜಾಣಿ1 ಚಲುವರೊಳಗೆ ಅತಿ ಚಲುವಳು ಭಾವೆ ಎಲ್ಲರಿಗೆ ಅಭಯವ ಕೊಡದಲೆ ಎಲ್ಲರಿಗೆ ಅಭಯವ ಕೊಡದಲೆ ರಂಗನವಲ್ಲಿ ಮುಸುಕಲಿ ಅಡಗೋರೆ ಜಾಣೆ2 ಕೃಷ್ಣರಾಯನ ಮತ್ತಷ್ಟು ಮಡದಿಯರುಎಷ್ಟು ಅಂಜುತಲೆ ನಮಗಿನ್ನುಎಷ್ಟು ಅಂಜುತಲೆ ನಮಗಿನ್ನು ಕೈಕಾಲುಮುಟಿಗ್ಯಾಗಿ ಕುಳಿತಾರೆ ಜಾಣಿ 3 ಬಲರಾಮನ ಮಡದಿಯ ಛಲವನೆ ನೋಡಿರೆಲಲನೆಯರು ಕರೆಯೆ ಬರಲಿಲ್ಲಲಲನೆಯರು ಕರೆಯೆ ಬರಲಿಲ್ಲ ನಮಗಂಜಿನೆಲವ ಗೀಚುತಲೆ ಕುಳಿತಾರೆ ಜಾಣಿ 4 ಕಂಜಾಕ್ಷಿ ರುಕ್ಮಿಣಿ ಕರೆಯ ಬರಲಿಲ್ಲ ಸಂಜೀಲೆ ನಾವು ಬಂದೇವಸಂಜೀಲೆ ನಾವು ಬಂದೇವ ರಾಮೇಶನ ಅಂಜಿಕೆ ಇಲ್ಲೇನ ಮಡದಿಯರ ಜಾಣಿ 5
--------------
ಗಲಗಲಿಅವ್ವನವರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ 1 ಅಂದು ಧನ್ವಂತರಿಯು ತಂದಿರುವ ಪೀಯೂಷ ದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದಿ2 ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ ನಾ ಸ್ತುತಿಸಲೆಂತು ಜನನಿ 3 ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವ ವಿಬುಧರು ಮಧ್ಯದಿ ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ 4 ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು ಜಗದೊಳು 5 ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ ನಿತ್ಯದಿ ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವಿಯೆ ಕರುಣದಿಂದ 6 ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ ಶ್ರೀದೇವಿ ನಿಂದಿರುವಳು ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ ಪಾದಸೇವೆಯ ಕರುಣಿಸು 7 ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ ಭಕ್ತಿಯಲಿ ಶ್ರೀ ತುಳಸಿಯ ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ ಭೃತ್ಯರಂಜುವರು ಭಯದಿ 8 ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ- ರಂತರದಿ ಪಠಿಸುವವರ ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ ಕಾಂತ ನರಹರಿ ಪೊರೆವನು 9
--------------
ಕಾರ್ಪರ ನರಹರಿದಾಸರು