ಕರುಣಿಸು ರಘುನಂದನ ರಾಮಾ
ನಿರುತವು ನಿನ್ನನೆ ಸ್ಮರಿಸುವ ಭಾಗ್ಯವ ಪ
ಪರಮಮಂಗಳನಾಮಾ ದುರಿತಭಂಜನ ನಾಮ
ಗಿರಿಜೆಪಾಡುವ ನಾಮಾ | ಜಾನಕೀರಾಮ ಅ.ಪ
ರಾಮನೆನೆ ಪಾಪವು ಲಯವಹುದಂತೆ
ರಾಮಾಯೆನೆ ಭಯಗಳು ಪರಿಹರವಂತೆ 1
ರಾಮನೆನೆ ಮಾಯೆಯು ಹರವಂತೆ
ರಾಮನ ನುತಿಸೆ ಮನ ಪರವಶವಂತೆ2
ಜಯರಾಮ ಜಯರಾಮ ಎನುತಿರುವಂತೆ]
ದಯಮಾಡೊ ಮಾಂಗಿರಿರಂಗ ನೀನಂತೆ 3