ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭ ಮಂಗಳಂ ಪ. ವೈಕುಂಠವಾಸನಿಗೆ ವಾಣೀಶಗ್ವಲಿದವಗೆ ಲೋಕದಲಿ ಪ್ರಹ್ಲಾದಗ್ವಲಿದ ಲಕ್ಷ್ಮೀಶಗೆ ಪ್ರಾಕೃತದಲಿ ವಸುದೇವ ಪುತ್ರನೆಂದೆನಿಸಿ ಜೋಕೇಲಿ ಗೋಕುಲಕೆ ಜಾರಿ ಬಂದವಗೆ 1 ಪುಟ್ಟ ಮಗುವಾದವಗೆ ಪೂತಣಿಯ ಕೆಡಹಿದಗೆ ತೊಟ್ಟಿಲೊಳು ಮಲಗಿ ತೂಗಿಸಿಕೊಂಬಗೆ ದುಷ್ಟ ಶಕಟನÀ ಮುರಿದು ತೃಣಾವರ್ತನೆಂಬ ದೈತ್ಯನ ಮುಟ್ಟಿ ಪ್ರಾಣವ ತೆಗೆದ ಮುದ್ದುಕೃಷ್ಣನಿಗೆ 2 ಅಂಬೆಗಾಲಿಕ್ಕಿದಗೆ ಅಂಗಳದೊಳಾಡಿದಗೆ ತುಂಬಿದಾ ಪಾಲುಗಳ ತಾನೆ ಸವಿದು ಇಂಬಿಟ್ಟು ಬಾಲರಿಗೆ ಸವಿ ಇಕ್ಕಿ ಸವಿದವಗೆ ಅಂಬುಜಾಕ್ಷ ನಮ್ಮ ಹಯವದನಗೆ 3
--------------
ವಾದಿರಾಜ
ಮಂಗಳಂ ಮಂಗಳಂ ಲಕ್ಷ್ಮೀಶಗೆ ಮಂಗಳಂ ಮಾಕಮಲಾಸನ ವಂದಿತ ಶೃಂಗಾರಶೇಖರ ತುಂಗಗಿರೀಶ ಪ. ಶ್ರೀಲೋಲ ಶುಭಗುಣಜಾಲಪಾಲಿತ ಸತ್ವ ಶೀಲ ಸುಂದರ ವನಮಾಲ ನೀಲಕುಂತಲ ನಿರ್ಜಿತಾಳಿ ಕುಲಾನನ ಕಪೋಲ ಗೋಪಾಲ 1 ಶರಣಾಗತ ರಕ್ಷಕರಣ ಧುರೀಮ ಮ- ದ್ಫರಣ ತ್ರಿಲೋಕೀ ಧಾರಣ ಕರುಣಾಮೃತ ಹರ ತರುಣಾರ್ಕ ಕೋಟಿಭಾ ಭರಣ ರಮಾಧೃತ ಚರಣಾರವಿಂದ 2 ನಿತ್ಯ ಪದ್ಮ ಸರೋವರ ಪದ್ಮ ನಿರಂತರ ಸಂಚಾರ ಪದ್ಮನಾಭ ಹೃತ್ಪದ್ಮ ಸುಸಂಸ್ಥಿತ ಪದ್ಮ ಪತ್ರ ನೇತ್ರ ಪದ್ಮಜ ಜನಕ 3 ಇಂದಿರಾವರ ಪೂರ್ಣೇಂದು ನಿಭಾನನ ವಂದನೀಯ ವಾಸುದೇವ ಮಂದಿರೆ ಮಮ ನಿತ್ಯಾನಂದದಾಯಿ ನಿಜ ಬಂಧುತಯಾಸ್ಥಿತ ಮಂದಹಸಿತೆ 4 ದಾಸೀಕೃತ ಕಂಜಜೇಶಾಹೀಶ ವಿ- ವೇಶಾಮರೇಶ ರಮೇಶಾ ಶೇಷ ಭೂಧರ ನಿಜ ವಾಸ ದಯಾರಸ ಮಾಶುಪ್ರವರ್ಷಯ ಹೇ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಂದನೆಯನು ಮಾಡೋ ನಾಮವ ಛಂದದಿ ನೀ ಪಾಡೋ ಭವ ಬಂಧ ಹರಿವುದು ಮುಂದುವರಿದ ಮನಸೊಂದನು ಬಂಧಿಸಿ ಪ ಕಳೆಯದೆ ಮುದದಿಂದ ಮಾಧವ ಗೋವಿಂದನೆಂದು 1 ನಡೆ ನುಡಿಗೊಮ್ಮೊಮ್ಮೆ ಶ್ರೀ ವಿಷ್ಣು ಮಧುಸೂದನನೆಂದು ಒಡನೆ ತ್ರಿವಿಕ್ರಮ ವಾಮನ ಶ್ರೀಧರ ಬಿಡದೆನ್ನ ಸಲಹೋ ಹೃಷಿಕೇಶನಂದು 2 ಚಿತ್ತ ಶುದ್ಧಿಗಳಿಂದ ಶ್ರೀ ಪದ್ಮನಾಭನೆ ಗತಿಯೆಂದು ಮರುತಸುತನ ಕೋಣೆವಾಸ ಲಕ್ಷ್ಮೀಶಗೆ 3
--------------
ಕವಿ ಪರಮದೇವದಾಸರು
ಸಚ್ಚಿದಾನಂದಮಯಗೆಚ್ಚರಿಕೆ ಪ ನಿಶ್ಚಯದ ನಿರುಪಮಂಗೆಚ್ಚರಿಕೆ ಅಚ್ಚರಿಯ ಸಚ್ಚಿತ್ರಂಗೆಚ್ಚರಿಕೆ ಅ.ಪ ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು ಕಾಂತೆಯರು ಕಟ್ಟುಮೆಟ್ಟದವೊಲೆಚ್ಚರಿಕೆ 1 ಸಂಚಿತಾಭರಣಗಳ ಮಿಂಚುಗುರುಚರಣಗಳ ಕುಂಚ ಕಾಳಂಜಿಯವರೆಲ್ಲವೆಚ್ಚರಿಕೆ 2 ನೀಡೆಸೆವ ಸೆಳ್ಳುಗುರು ಮೂಡುತಿಹ ಮೊಲೆಹೊಗರು ಆಡಿಸುವ ಹಡಪದವರೀಗ ಎಚ್ಚರಿಕೆ 3 ಬಿಂಬಾಧರಂ ಪೊಳೆಯೆ ಕಂಬುಕಂಠವು ಹೊಳೆಯೆ ಪೊಂಬಾಳ ದೀವಿಗೆಯ ಜನರು ಎಚ್ಚರಿಕೆ 4 ಚೆನ್ನಸಿರಿಯರಮನೆಯ ಚಿನ್ನವಾಗಿಲ ಕೊನೆಯ ರನ್ನದೋರಣ ತಡಿಯವರೆಚ್ಚರಿಕೆ 5 ಇಂದಿರಾದೇವಿಯರ ಮಂದಿರದ ಬೀದಿಯೊಳು ಸಂದಣಿಯಲತಿ ಜತನವಿರಲಿ ಯೆಚ್ಚರಿಕೆ 6 ದೇವಿಯರ ಮನೆಗೆ ವಿವಾಹ ತಾಬೇಡಿ ಬಂದ ದೇವಪುರ ಲಕ್ಷ್ಮೀಶಗೆಚ್ಚರಿಕೆ 7
--------------
ಕವಿ ಲಕ್ಷ್ಮೀಶ