ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿಂತಾಮಣಿಯ ನರಸಿಂಹದೇವರು) ಚಿಂತಾಮಣಿ ನರಸಿಂಹನ ನೆನೆದರೆ ಚಿಂತಿತ ಫಲವೀವನು ಭ್ರಾಂತ ಬುದ್ಧಿಯೊಳನ್ಯ ದೈವವ ಭಜಿಸದೆ ಕಂತು ಜನಕ ಲಕ್ಷ್ಮೀಕಾಂತನ ನೆರೆನಂಬು ಪ. ಜಲಜ ಸಂಭವ ಶಂಭು ಬಲವೈರಿ ಮುಖದೇವ- ರ್ಕಳನೆಲ್ಲ ಸುಲಭದಿ ಸಲಹುವ ದೊರೆಯು ಕಲಿಕೃತ ಮಲವನ್ನು ಕಳವನು ನಿರತ ಬೆಂ ಬಲವಾಗಿ ದುರಿತಾಳಿಗಳ ಓಡಿಸುವನು ಕಳೆಯ ಪುರದಲಿ ನೆಲೆಯದೋರುವ ಚೆಲುವ ಲಕ್ಷ್ಮೀನಿಲಯ ಮೂರುತಿ ಯೋಗಿನಿಗಣ ಭಯಕ್ಕಾಗಿ ಸಂಸ್ತುತಿವೇದ 1 ನಾಗಭೂಷಣ ನಮ್ಮುದಾಗಿ ರಕ್ಷಿಸೀದ ವಾಗೀಶ ಪದಯೋಗ್ಯನಾಗಿ ಭೂಮಿಗೆ ಬಂದ ಯೋಗೀಶ ವಾದಿರಾಜರಿಗೊಲಿದನಾ ಬೇಗದಲಿ ಭಕ್ತಾಳಿ ರಕ್ಷಣ- ರಾಗಿಯೆನಿಪ ವಿರಾಗಿ ಹೃದ್ಗತ 2 ಶಂಖಾರಿ ಪದ್ಮ ಗದಾಧರ ನಿಜ ಜನ ಶಂಕಾನಿವಾರ ಶಂಕರ ವರದಾ ಲಿಂಗ ಸುಲಾಲಿತ ಪ್ರಲ್ಹಾದ ರಮಾಕುಚ ಕುಂಕುಮಲಿಪ್ತಾ ವಕ್ಷೋವೀವರ ಶಂಕಿಸದೆ ಸಕಲಾರ್ಥವೀವ ಮೃ- ಮಾಧವ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗುರುನಿಕರÀ ಸಂಸೇವ್ಯ ಸತಿಪತಿಯ ಬಿಂಬ ಪ ಪರಮ ಪಾವನ ನಾಮ ಪಾಹಿ ಪಾಹೀ ಎನ್ನ ಅ.ಪ ಪತಿತಪಾವನ ಪರಮಗತಿ ನೀನು ಸರ್ವಸ್ವ ಸತತ ತತ್ವದ ಪಾಲಿಸು ಎನ್ನ ಶಿರದಿ ಹಿತದಿಂದ ನೆಲಸಿರಲಿ ಹರಿದಾಸ್ಯ ಕೊಟ್ಟೆನಗೆ ರತಿ ಬಿಡಿಸು ವಿಷಯದಲಿ ಮನ ನಿನ್ನ ಬಿಡದಿರಲಿ 1 ನಿನ್ನ ಕ್ರಿಯ ಗುಣರೂಪ ನಿನ್ನ ತಿಳಿಯದೆ ನಡೆದೆ ಘನ್ನಭಾವವ ನೀಡು ಪೂರ್ಣದಯದಿ ಅನ್ಯವೆಂದಿಗು ಒಲ್ಲೆ ಅನ್ನನೀಯನಗಾಗು ಪೂರ್ಣಪ್ರಜ್ಞರ ದೈವ ಪನ್ನಗಾದ್ರಿನಿಲಯ 2 ಲಕ್ಷ್ಮೀನಿಲಯ ಜಯೇಶವಿಠಲನೆ ವಿಧಿವಂದ್ಯ ಲಕ್ಷ್ಯನಿನ್ನಲಿ ನೆಲಸು ಸತತ ಬಿಡದೆ ಪೃಷ್ಯೇಶ ತವ ಕರುಣ ಬಂದು ಎನ್ನೊಳು ಬೀಳೆ ಭವ ಹಿಂಗಿ ಮೋಕ್ಷಸುಖ ಕರಗತವೊ 3
--------------
ಜಯೇಶವಿಠಲ
ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ ಮರಣಕಾಲದಿ ಸಂಸ್ಮರಣ ಮಾತ್ರದಿ ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ 1 ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು ನರಹರಿಯ ರೂಪದಿಂ ಭರದಿ ಕಂಬದಿ ಬಂದು ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ 2 ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ ಉಳಿದಳು ಮಾನದಿಂ ಖುಲ್ಲನ ಸಭೆಯಲಿ ಅನುದಿನ ಚಲಿಸದೆ ಮನವಂ ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ 3
--------------
ರಾಮದಾಸರು