ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಕೀಕುವರ ನವಘನಸುಂದರ ಭಾವಜ ಜನಕ ಮಾದೇವ ಕೃಪಾಕರ ಪಾವನ ಸುಕುಮಾರ ಹರೇ ಹರೇ ಪ ನಿರುಪಮ ಚರಿತ ವರಗುಣ ಭರಿತೇ ಮರಕತಮಣಿ ಮಾಲಾಹಾರ ಸಂಶೋಭಿತೇ ಸುರಗಂಗಾಸುತ ರಾಜಿತಮೌನಿಯುತೇ ವೈರಿಕುಲ ಭಂಜನ ಪಾಂಡವ ಮಿತ್ರೇ1 ಶ್ರೀವನಮಾಲಾಧರ ಮುರಳೀಕರ ದೇವಸುಧಾಕರ ಶ್ರೀ ಮಾಂಗಿರಿವರ ಭಾವಕಜನಪರಿವಾರ ಶುಭಂಕರೇ ರೇವತೀರಮಣಾ ನಂದಕರೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀವಧು ನಯನಾಬ್ಜ ವಿಲೋಚನಾ ದಾವನಾಗಿಹ ಪಂಕಜಲೋಚನಾ ದೇವನಂಘ್ರಿಯ ಚರಿತದ ಸೂಚನಾ ಪಾತಕ ಮೋಚನಾ 1 ಮತಿ ಮಂತಾಂಭುನಿಧಿ ದ್ವಿಜರಾಜ ದಿತಿ ಸುತಾಹಿ ಕುಲದ್ವಿಜರಾಜಾ ಸುತ ಮುನಿಹೃದಯಾಬ್ಜದಿನೇಶಾ ಸತತ ದುಷ್ಕøತ ತರುರದನೇಶಾ2 ಆವನೀಭುವ ನತ್ರಯವ ಪಾಲಕಾ ದೇವಕೀತಪದಲಾದನು ಬಾಲಕಾ ದೇವನಾಡಿದ ಮನಿಲಿಯ ಶೋದಾ ಭಾವಿಸಲ್ಕವಗ ಗತಿ ಶ್ರೀಯಶೋದಾ3 ಪರಮ ಸುಂದರ ನಂದ ಕುಮಾರಾ ಅರಿತು ಬಂದನುಗರ್ಭದಿ ಮಾರಾ ಧರಿಯೊಳಾವನ ಮನಿ ಕಾಪುರದ್ವಾಶಕಾ ಸ್ಮರಸಲೀ ಜಗದ ಪಾವಿದಾರಕಾ4 ಮಾನವ ತಂದಿಯಾ ಸುಗಮದಿಂದರಿದ ಬಂಧನ ತಂದಿಯಾ ಮಗನ ಕಾಯಿದಾ ಶಿಕ್ಷಿಸಿ ತಂದಿಯಾ ಮಗನ ಶಿಕ್ಷಿಸಿ ಕಾಯಿದಾತಂದಿಯಾ5 ವನಧಿ ವಂಧಿಸಿ ತೇಲಿಸಿ ಪರ್ವತಾ ಜನಪದಾಟಿಸಿ ವಾನರ ಪರ್ವತಾ ಘನಮಹಿಮನು ಜಾನಕಿ ಕಾಂತಾ ನೆನಹುತಿಹನು ಸಹಶಿವಕಾಂತಾ 6 ಸೇವಿಗಂಡೊಲಿದು ರಾಘವ ತಮ್ಮನಾ ರೇವತೀರಮಣಗೆಂಬನುತಮ್ಮನಾ ಜೀವಗಾಯಿದಾ ಭೀಮನತಮ್ಮನಾ ಪಾವನಂಘ್ರಿಯ ನೆನಿಸತತಂಮನಾ7 ಕುದಿಪುತಿರ್ಪುದು ಮಡು ಪವನಾಶನಾ ವಿದಿತೆ ಘಾಳಿಗೆ ಜೀವನ ನಾಶನಾ ಅದರೊಳಗಡಲು ತಾಜಗ ಜೀವನಾ ಸುಧಿಯ ರೂಪವ ಆಯಿತು ಜೀವನಾ8 ಜಲದಲೀ ನೆನಿಯಲು ಮದವಾರಣಾ ವಲಿದು ಮಾಡಿದ ಬಂಧ ನಿವಾರಣಾ ಸತಿಸ್ವರೂಪದ ನೀಡಿದ ಮುಕ್ತಿಯಾ ನಲಿದು ಮಾಡಲಿ ಶ್ರೀ ಹರಿ ಭಕ್ತಿಯಾ9 ದಾವ ತೇಲಿಸಿದ ನಚ್ಚಿಲಿ ಗೋಕುಲಾ ದೇವ ಕಾವನು ನೋಡಿರಿ ಗೋಕುಲಾ ಜೀವಜಾಲದ ಬೇಡಿ ಪ ಗೋಕುಲಾ ತಾವಿಹರಿಸುತಿಹನು ಗೋಕುಲಾ 10 ಸ್ಮರಿಸಿ ಗೋಕುಲಲ್ಯಾಕಳ ಕಾವನಾ ಧರೆಯೊಳೊಪ್ಪುವ ಕಾಟಿಯ ಕಾವಳಾ ಚರಣ ಗೋಚರ ಮುನಿಮನ ಕಾವನಾ ಶರಣ ಹೋಗದು ಸಕಲಿ ಕಾವನಾ11 ಅವನಂಘಿಯ ಸೇರೆ ವನೌಕಸಾ ಜೀವರಾದರು ಸಾಮದಿವೌಕಸಾ ಭಾವಿಸಲ್ಕಾರಿಯದಾದಳು ಶ್ರೀರಮಾ ದೇವನಾಸ್ತುತಿಸಿ ಬಣ್ಣಿಪ ರಾರಮಾ12 ಮುನಿ ಬಂದನೆಂದು ಸ್ಮರಿಸಲು ಕೃಷ್ಣಾ ಮನಸ್ನೇ ಹದಿಂದೋಡಿ ಬಂದನು ಕೃಷ್ಣ ಅನೇಕ ಪದಾರ್ಥದಿಂ ದುಣಿಸುತಾ ಘನಾನಂದ ನೀಡಿದ ಪಾರ್ಥನ ಸೂತಾ13 ಸುರಗಂಗಿಯ ಪಡದ ದಾವನ ಚರಣ ಅರಿಮರ್ದನಾಗಿಹ ದಾಪಾಣಿ ಚರಣಾ ಸರಿಜಾರ ನಖದಾ ತೇಜಕ್ಕ ತರಣೀ ಇಂದಿರೆ ತರುಣಿ14 ಚರಣಧ್ಯಾಯಿಪದಾವನು ಮಾಧವಾ ಸುರನರೋರಗ ಪೂಜಿ ಮಾಧವಾ ಧರಿಯೊಳಾದನು ಬಾಲಕ ನಂದನಾ ಚರಿತ ಪಾಡಿದ ಮಹಿಪತಿ ನಂದನಾ15
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯಾಸೋಕ್ತಿಯನುಸರಿಸಿ ಹತ್ತು ಅವತಾರವನುಶ್ರೀಶ ಮಾಡಿದ ದಿನದ ಕ್ಲಪ್ತಿಯಂ ಬರೆವೆ ಸಂ- |ತೋಷದಿಂ ಕೇಳ್ಪುದೆಲ್ಲರು ಪೊರೆವ ಹರಿಯು ಅಭಿ-ಲಾಷೆ ಪೂರೈಸಿ ಬಿಡದೇ ಪಕೃತಯುಗಪ್ರಭವಮಧು ಶುದ್ಧ ಪ್ರತಿಪದಜಲಧಿಸುತವಾರ ರೇವತೀ ವಿಷ್ಕಂಭ ಹಗಲು ಸಂ-ಯುತ ಹನ್ನೆರಡು ಘಳಿಗೆಗವತರಿಸಿಶ್ರೀ ಮತ್ಸ್ಯ ಹತಮಾಡಿ ತಮನೆಂಬನಾ ||ಚತುರಾಸ್ಯವೈವಸ್ವತರಿಗೊಲಿದು ಮೆರೆದ ನೀಕ್ಷಿತಿಯೊಳಗೆ ಮತ್ತಾಯುಗದಿಕೂರ್ಮರೂಪದಿಂಚ್ಯುತರಹಿತನವತಾರ ಮಾಡಿ ಮಾಡಿದ ಕಾರ್ಯ ಮತಿವಂತರಿಗೆ ಪೇಳೂವೆ 1ವಿಭವಾಬ್ದ ಜ್ಯೇಷ್ಠ ಶುಕ್ಲದ್ವಿತೀಯಬುಧವಾರಶುಭದ ರೋಹಿಣಿ ಋಕ್ಷ ಧೃತಿ ಯೋಗ ದಿವದಲ್ಲಿತ್ರಿಭುವನೇಶ್ವರ ನಾಲ್ಕು ಘಳಿಗೆಗುದಿಸಿಯಮೃತಕೃತುಭುಜರಿಗುಣಿಸಿ ಕರುಣದಿಂ ||ಅಭಯವಿತ್ತನ್ಯರನು ದಣಿಸಿ ಧರಿಸಿದನು ಜಲ-ಜಭವಾಂಡ ಮಂದರಾದ್ರಿಯ ಬೆನ್ನಮ್ಯಾಲಿಂದಸುಭುಜಾಹ್ವಯನ ಚರಿತೆ ಸ್ಮರಿಸೆ ಕ್ಲೇಶಹ ಮತ್ತೆ ನಭಗವಹನಾ ಯುಗದಲಿ 2ಶುಕ್ಲ ಸಂವತ್ಸರದಶುಭಮಾಘ ಮಾಸದಲಿಶುಕ್ಲ ಪಕ್ಷದ ಸಪ್ತಮೀ ಭಾನುವಾರದಲಿಅಕ್ಲೇಶಪ್ರದ ಅಶ್ವಿನೀ ಸಾಧ್ಯಯೋಗದಲಿ ಶುಕ್ಲಶೋಣಿತ ವಿದೂರ ||ಶುಕ್ಲಾಂಬರಧರ ಕಿಟಿರೂಪದಿಂದವತರಿಸಿಹಕ್ಲಾಸುರ ಹಿರಣ್ಯಶನ ತರಿದುತ್ವರತನ್ನಒಕ್ಲಾದವರ ಪೊರೆದ ಹಗಲೆಂಟು ಘಳಿಗೆಯೊಳು ಶುಕ್ಲಾಂಗಆ ಯುಗದಲಿ 3ಆಂಗಿರಸವೆಂಬ ಸಂವತ್ಸರದ ವೈಶಾಖತಿಂಗಳದಿಸಿತಪಕ್ಷಚತುರ್ದಶೀ ಶನಿವಾರತುಂಗಸ್ವಾತಿಪರಿಘದಿವಾಷ್ಟ ವಿಂಶತಿ ಘಳಿಗೆಗಾಂಗೇಯಗರ್ಭನೊರವು ||ಸಂಘಟನೆವಾಗಲಾ ಸಮಯದೊಳು ಸ್ತಂಭದಿಂಸಂಗರಹಿತಹರಿಘುಡಿಘುಡಿಸುತಲಿ ಉದಿಸಿನರಸಿಂಗಾಹ್ವಯದಿಹೇಮಕಶ್ಯಪನ ತರಿದು ತರಳಂಗೆ ಸನ್ಮುದವಿತ್ತನೂ4ತ್ರೇತಾಯುಗದಲದಿತಿ ದೇವಿ ಭಕುತಿಗೆ ಮೆಚ್ಚಿಧಾತಾಬ್ದ ಭಾದ್ರಪದಸಿತಪಕ್ಷದ್ವಾದಶೀಖ್ಯಾತಿ ವಿಷ್ಣುಭ ಶುಕ್ರ ಧೃತಿ ಹತ್ತೈದು ಘಟಗೆಪೋತಭಾವದಿ ದಿವವಲಿ ||ತಾಂ ತಾಳಿ ಅವತಾರವಂ ತ್ರಿವಿಕ್ರಮನಾಗಿಭೂತಲಾಗಸವಳೆದು ವೈರೋಚಿನಿಯ ತುಳಿದುಪ್ರೀತಿಪಡಿಸುತ ಶಕ್ರನಂ ಸ್ವರ್ನದಿಯ ಪಡೆದ ಈತಗೆಣೆಯಾರೊ ಜಗದಿ 5ಅದೆ ಯುಗದಲಿ ಪ್ರಮಾಥಿಯೆಂಬ ಸಂವತ್ಸ-ರದಲಿ ವೈಶಾಖ ಶುದ್ಧ ತೃತೀಯೆ ಸುಕರ್ಮ ಯೋ-ಗದಲಿ ರೋಹಿಣಿಮಂದಹನ್ನೊಂದು ಘಟರಾತ್ರಿಯೊದಗುತಿರೆಭೂಪತಿಗಳಾ ||ವಧೆಗೆ ವಿಪ್ರರ ವೃಂದವನು ಪೋಷಣೆಯ ಮಾಡು-ವದಕೆ, ಜಮದಗ್ನಿಯಿಂದವತರಿಸಿ ರಾಮ ನಾ-ಮದಲಿ ಪರಶುವ ಧರಿಸಿ ಈ ಧಾತ್ರಿಯೊಳು ಬಹು ಮೆರೆದಮತ್ತು ಆ ಯುಗದಲಿ 6ತಾರಣೆಂಬಬ್ಧ ಮಧುಮಾಸ ಶುಕ್ಲ ನವಮಿಯಆರನೇ ತಾಸು ದಿವದಲಿ ಪುನರ್ವಸು ಚಂದ್ರವಾರ ಶೂಲೆಂಬ ಯೋಗದಲಿ ದಶರಥನೃಪತಿಹಾರೈಸಿದುದಕೆ ಒಲಿದು ||ಶ್ರೀರಾಮನಾಮದಿಂದವತರಿಸಿ ದೈತ್ಯ ಪರಿವಾ-ರ ರಾವಣನ ಸಂಹರಿಸಿ ವಿಭೀಷಣಗೊಲಿದುವಾರಿಜೋದ್ಭವಮುಖ ದಿವೌಕಸರಿಗಾನಂದ ತೋರಿಸಿದ ಸೀತಾಪತಿ 7ಮೂರನೇ ಯುಗ ವಿರೋಧೀ ಶ್ರಾವಣವದಿ ಅ-ರ್ಧರಾತ್ರಿಯೊಳಷ್ಟಮೀ ರೋಹಿಣೀವಜ್ರಬುಧವಾರದಲಿ ಅಜನ ಬಿನ್ನಹಕೊಪ್ಪಿ ಕೃಷ್ಣಾವತಾರವನು ತಾಳಿ ಧರೆಗೆ ||ಭಾರವಾಗಿದ್ದ ಕಂಸಾದಿ ಖಲವೃಂದ ಸಂ-ಹಾರಮಂ ಗೈದು ಪಾಂಡವರ ಪೋಷಿಸಿವಿಪ್ರಗೋ ರಕ್ಷಣೆಯ ಮಾಡಿ ಧರ್ಮವಂ ಸ್ಥಾಪಿಸಿದ ಶ್ರೀರಮಣ ಮಧ್ವಸದನ 8ಕಲಿಖರಾಬ್ಧಾಷಾಢ ಶುದ್ಧ ದಶಮಿ ವಿಶಾಖನಳಿನಸಖವಾರ ಶುಕ್ಲಾಹ ಯೋಗ ದಿವಾಷ್ಟಘಳಿಗೆಯೊಳು ಜನನೆಂಬ ದೈತ್ಯನಲ್ಲವತರಿಸಿ ಬಲುದುರ್ಮತಿಯ ಪ್ರೇರಿಸಿ ||ಕಳೆಗೆಡಿಸಿ ಬುದ್ಧಾವತಾರವೆಂದೆನಿಸಿ ಶಿವ-ಗೊಲಿದು ತ್ರಿಪುರವ ಕೆಡಿಸಿ ಸಜ್ಜನರ ಸಂಶಯವಕಳದು, ಕರುಣಾಂಬುಧಿಯ ಮಹಿಮೆಯಂತಿಳಿಯಲಸದಳಮಾವಿಧಿಗೆ ಎಂದಿಗೂ 9ದನುಜಪತಿ ಯುಗ ದುರ್ಮುಖಾ ಮಾರ್ಗಶಿರ ಶುದ್ಧಶನಿವಾರ ದ್ವಿತೀಯೆ ಪೂರ್ವಾಷಾಢ ವೃದ್ಧಿ ಮೂ-ರನೆ ಘಳಿಗೆ ದಿವದ ಕಲ್ಕ್ಯವತಾರದಿಂಮ್ಲೇಂಛರನು ಸದೆದು ಭೂ ದಿವಿಜರಾ ||ಘನಮೋದ ಪಡಿಸಿ ವಾಜಿಯನೇರಿ ಮೆರೆದಾಡಿಅನಿಮಿಷರ ಕೈಯ್ಯ ಪೂ ಮಳೆಯಂಗರಿಸಿಕೊಂ-ಡನಘ ಬಲ್ಲವರಿಗಲ್ಲಲ್ಲೆ ಇರುತಿಹನುಪ್ರಣತಜನಕಾಮಧೇನೂ 10ಈ ಪರಿಯಲಚ್ಯುತನ ಅವತಾರ ಚರಿತೆ ಸಂ-ಕ್ಷೇಪದಿಂ ವಿರಚಿಸಿದೆ ಸದ್ಭಕ್ತಿಯಿಂದಿದನುಪಾಪಿಗಳಿಘೇಳದಲೆ ಕಾಲತ್ರಯದಿ ಪಠಸೆ ತಾಪತ್ರಗಳ ಕಳೆದು ||ಈ ಪೊಡವಿಯೊಳಗೆ ಬಹುಮಾನ ಮಾಡಿಸಿ, ತಂದೆ-ಯೋಪಾದಿ ಕ್ಷಣ ಬಿಡದೆ ಸಲಹಿ ಪ್ರಾಂತಕೆ ತನ್ನಆ ಪರಂಧಾಮ ವೈದಿಸುವನತಿ ಕರುಣಾಳು ಶ್ರೀಪ ಪ್ರಾಣೇಶ ವಿಠಲಾ 11
--------------
ಪ್ರಾಣೇಶದಾಸರು