ಧ್ಯಾನವನೆ ಮಾಡಿ ನವರತ್ನ ಸಿಂಹಾಸನಸಾನಂದದಿಂದ ನಿಮಗರ್ಪಿಸುವೆನುಶ್ರೀ ನಿಧಿಯೆ ಪಾದ್ಯಾಘ್ರ್ಯ ಮಧುಪರ್ಕಗಳನು ಸು-ಮ್ಮಾನದಿಂದರ್ಪಿಸುವೆ ಗೌರಿ ದೇವಿ ಜಯ 1
ತುಂಗಭಧ್ರಾ ಸರಸ್ವತಿ ಯಮುನೆ ಕಾವೇರಿಗಂಗಾದಿ ಶುಭತೀರ್ಥ ಸಲಿಲದಿಂದಮಂಗಲಸ್ನಾನವನೆ ರಚಿಸಿ ಜಡೆವೆಣೆದು ಕುಸುಮಂಗಳಂ ಮುಡಿಗೆ ಮುಡಿಸುವೆನಂಬಿಕೆ 2
ಚಂದ್ರಗಾವಿಯ ಸೀರೆ ಕುಪ್ಪಸವ ತೊಡಿಸುವೆನುಚಂದದಿಂದರಿಸಿನವ ಲೇಪಿಸುವೆನುಚಂದ್ರಕಸ್ತೂರಿ ತಿಲಕ ಕುಂಕುಮದ ರೇಖೆಯನುಅಂದದಿಂದಿಡುವೆ ಶ್ರೀ ಗೌರಿ ನಿಮಗೆ3
ಕಣ್ಣ ಕಪ್ಪಿಟ್ಟು ಕರಯುಗಕೆ ಗಂಧವ ತಿವುರಿಚಿನ್ನದಾಭರಣ ನಿಕರವನಿಡುವೆನುರನ್ನ ದುಂಗುರ ಹಾರ ಪದಕದಿಂದ ಶೃಂಗರಿಸಿನಿನ್ನ ಪದಯುಗವ ಪೂಜಿಪೆನು ಗೌರಿ ಜಯ4
ಚಾರು ಪುನ್ನಾಗ ಪೂಗಸಿರಿಸ ಸುರಹೊನ್ನೆ ಸಂಪಗೆ ಮೊದಲಾದ ಪೂಸರವ ಸಿರಿಮುಡಿಗೆ ಮುಡಿಸುವೆನು ಗೌರಿ ಜಯ 5