ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷ ಪರ್ಯಂಕ ಶಯನ ವಿಷಯದಭಿ ಲಾಷೆ ಪರಿಹರಿಸಿ ಕಾಯೋ ಪ ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
--------------
ಜಗನ್ನಾಥದಾಸರು
ಸೂಳಿನ್ನ ಪೊಗುವವ ಏನಾದೆಂತಾ ಹಾಳಾದಬಳಿಕ ಪುಣ್ಯ ಮೂಳನಾಯಾದ ಪ ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1 ಸುಲಭದಿಂ ತನ್ನಯ ಕುಲನಾಶಗೆ ಅನ್ಯ ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು ಕುಲ ವಿಧವಿಧ ಭಕ್ತಿಗಳನಗಲಿ ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2 ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3 ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4 ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ ಧನವನಿತು ಅವಳ ಅಧೀನದಲ್ಲಿರಿಸಿ ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5
--------------
ರಾಮದಾಸರು
ಪುಟ್ಟಿಸಬೇಡವೊ ದೇವ - ಎಂದಿಗು ಇಂಥ-|ಕಷ್ಟಪಟ್ಟು ತಿರುಗುವ ಪಾಪಿ ಜೀವನವ ಪನರರ ಸ್ತುತಿಸಿ ನಾಲಗೆ ಬರಡು ಮಾಡಿಕೊಂಡು |ದರಪೋಷಣೆಗಾಗಿ ಅವರಿವರೆನದೆ ||ಧರೆಯೊಳು ಲಜ್ಜೆ - ಮಾನಗಳೆಲ್ಲವೀಡಾಡಿ |ಪರರ ಪೀಡಿಸಿ ತಿಂಬ ಪಾಪೀ ಜೀವನವ 1ಎಂಟುಗೇಣು ಶರೀರವ ಒಂದು ಗೇಣು ಮಾಡಿಕೊಂಡು|ಪಂಟಿಸುತ್ತ ಮೆಲ್ಲಮೆಲ್ಲನೆ ಪೋಗಿ ||ಗಂಟಲಸೆರೆಗಳುಬ್ಬಿ ಕೇಳುವ ಸಂಕಟ ವೈ-|ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ 2ಲೆಕ್ಕದಲಿ ನೀ ಮೊದಲು ಮಾಡಿದಷ್ಟಲ್ಲದೆ |ಸಖ್ಯಕೆವೆಗ್ಗಳಕೊಡುವರುಂಟೆ ||ಕಕ್ಕುಲತೆಪಟ್ಟರಿಲ್ಲ ಕರುಣಾಳು ನಿನ್ನ ಮೊರೆ |ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ 3
--------------
ಪುರಂದರದಾಸರು