ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಸಂಜೀವನೌಷಧ ಸುಲಭದಿ ದೊರೆತಮ್ಯಾ- ಲಂಜುವದ್ಯಾಕಿನ್ನು ಕುಂಜರ ವರದಾಯಿ ಕುಬ್ಜೆಗೊಲಿದ ನಮ್ಮ ಕಂಜನಾಭನ ಪಾದಕಂಜರ ನೆನವೆಂಬ ಪ. ಕಲಾನಿಯಮವಿಲ್ಲ ಕುಡಿದರೆ ಖೈಂಯಲ್ಲ ನಾಲಿಗೆ ತುದಿಯೊಳಗಿರುವುದೆಲ್ಲಾ ಸಾಲಾಗಿ ನಿಲುವುದು ಸರಿಯಾದ ವ್ರಯದಿಂದ ಪಾಲಗಡಲನಾಥ ಪಾಲಿಸಿ ಕುಡಿಸುವ 1 ವ್ಯತ್ಯಾಸದಿಂದಲಪಥ್ಯವಾಗದು ಭ್ರಮೆ ಪಿತ್ತಶಾಂತಿಯನೀವುದು ತುತ್ತು ತುತ್ತಿಗೆ ನಮ್ಮ ಸತ್ಯವರನ ಪೆಸ- ರೆತ್ತಲು ಭವರೋಗ ಕತ್ತರಿಸುವ ದಿವ್ಯ 2 ಅಡವಿಯೊಳಗೆ ಪೋಗಿ ಕಡಿದು ತರುವುದಲ್ಲ ಅಡಿಗೆಗಿಕ್ಕುವ ಪಾಕ ಮಾಳ್ಪುದಲ್ಲ ಕುಡಿದು ನೋಡಿದರತಿ ಕಡುಮಧುರವು ನಮ್ಮ ಒಡೆಯ ವೆಂಕಟರಾಜನಡಿಗಳ ನೆನೆವೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಬಿಗ ನಾ ನಿನ್ನ ನಂಬಿದೆ - ಜಗದಂಬಾರಮಣ ನಿನ್ನ ಹೊಂದಿದೆ ಪತುಂಬಿದ ಹರಿಗೋಲಂಬಿಗ - ಅದಕೊಂಬತ್ತು ಛಿಧ್ರಗಳಂಬಿಗ ||ಸಂಭ್ರಮದಿಂದಲಿಅಂಬಿಗ ಅದರಿಂಬನರಿತು ನಡೆಸಂಬಿಗ 1ಹೊಳೆಯ ಅಬ್ಬರ ನೋಡಂಬಿಗ ಅಲ್ಲಿಸೆಳವು ಬಹಳ ಕಾಣೋಅಂಬಿಗ ||ಸುಳಿಗೊಳಗಾದೆನುಅಂಬಿಗ - ಎನ್ನಸೆಳೆದುಕೊಂಡು ಒಯ್ಯೋಅಂಬಿಗ 2ಹತ್ತು ಬೆಂಬಡಿಗರು ಅಂಬಿಗರು - ಅಲ್ಲಿಒತ್ತಿ ಬರುತಲಿಹರಂಬಿಗಹತ್ತುವರೆತ್ತಲುಅಂಬಿಗ ಎನ್ನಎತ್ತಿಕೊಂಡು ಒಯ್ಯೋಅಂಬಿಗ 3ಆರು ತೆರೆಯ ನೋಡಂಬಿಗ ಸುತ್ತಿಮೀರಿ ಬರುತಲಿವೆಅಂಬಿಗ ||ಆರೆನೆಂತಿಂತುಅಂಬಿಗ ಮುಂದೆದಾರಿಯ ತೋರಿಸುಅಂಬಿಗ 4ಸತ್ಯವೆಂಬುವ ಹುಟ್ಟುಅಂಬಿಗ ಓದುಭಕ್ತಿಯೆಂಬುವ ಪಾತ್ರಅಂಬಿಗ ||ನಿತ್ಯಮುಕ್ತ ನಮ್ಮ ಪುರಂದರವಿಠಲನಮುಕ್ತಿಮಂಟಪಕೆ ಒಯ್ಯೋ 5
--------------
ಪುರಂದರದಾಸರು