ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ಪ ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1 ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು 2 ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು3 ಏಕೋ ನಾರಾಯಣ ದೇವನೆಂದು ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4 ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5 ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಪರ ಇಲ್ಲೆಂದು6 ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್Àನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
--------------
ವಿಜಯದಾಸ
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ ವನಚರ ನಗಧರ ಅವನಿಯ ಉದ್ಧಾರ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1 ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ2 ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3 ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ 4 ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5 ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ 6 ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ 7 ರಜೋತಮ ಗುಣವನು ಭುಂಜಿಸುತ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ 8 ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
--------------
ವಿಜಯದಾಸ
ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ಅ.ಪ. ಎವೆಯ ಮರೆಯ ಮಾತನಾಡಿ ಪೋದ ಯಾಕೋ ವಿಧಿಯೇಸುಳಿಗುರುಳು ಕಡೆಗಣ್ಣ ನೋಟದಿಂದಲಿಕವಕವಿಸಿ ನಗುವ ಮುದ್ದು ಮುಖವನುತವಕದಿಂದ ಮರಳಿ ಮರಳಿ ನೋಡದ್ಹೋದೆವೆ 1 ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆಇಕ್ಕದೇಕೆ ಹೋದ್ಯೋ ವಿಧಿಯೇರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿಫಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ 2 ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆರಂಗವಿಠಲನ್ನ ಅಂಗ ಸಂಗವ ಬಿಟ್ಟು ಇಂಥಭಂಗ ಜೀವ ಸುಡ ಸುಡ ಸುಡಲ್ಯಾತಕೋ 3
--------------
ಶ್ರೀಪಾದರಾಜರು
ಕೋಳಿ ಕೊಗಿತಲ್ಲಾ - ಲಕ್ಷ್ಮೀಲೋಲನಲ್ಲದೆ ಅನ್ಯರಾರಿಲ್ಲವೆಂದು ಪ.ಮೊದಲ ಜಾವದಲಿ ಮುಕುಂದನೆಂದು ಕೂಗಿಎರಡಲಿ ಶ್ರೀ ವೆಂಕಟಾದ್ರಿಯೆಂದು ||ಉರಗಗಿರಿಯ ವಾಸ ಯಾದವ ಕುಲ ಗೊಲ್ಲಚದುರ ಚಲ್ಲಪಿಲ್ಲಿ ರಾಯನಲ್ಲದಿಲ್ಲವೆಂದು 1ಮೂರು ಜಾವದಲಿ ಮುರಾರಿಯೆಂದು ಕೂಗಿನಾಕರಲಿ ನಾರಾಯಣಯೆನಲು ||ಕ್ಷೀರಾಬ್ಧಿಯ ವಾಸ ಲಕ್ಷ್ಮೀಪತಿ ಕೋನೇರಿವಾಸ ವೆಂಕಟಕೃಷ್ಣರಾಯನೆಂದು 2ಪರಮಪುರುಷ ಮುಖ್ಯ ಆಧಾರಭೂತಕರುಣದ ಪುಂಜನು ಜಗದಾದಿ ತಾ ||ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು 3ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದಕೊಕ್ಕನು ಮೇಲೆ ನೆಗಹಿಕೊಳುತ ||ಚಕ್ಕನೆ ಕೇರಿ ಕೇರಿಯಗುಂಟ ಸಾಗುತಮುಕುಂದನಲ್ಲದೆ ಅನ್ಯರಾರಿಲ್ಲವೆಂದು 4ಐದು ಜಾವದಲಿ ಅನಂತನೆಂದು ಕೂಗಿಆರರಲ್ಲಿ ಅಳಗಾದ್ರೀಶಯೆಂದು ||ಏಳರಲ್ಲಿ ಕಾಶಿಯ ಬಿಂದುಮಾಧವಎಂಟಕೆ ಪುರಂದರವಿಠಲರಾಯನೆಂದು 5
--------------
ಪುರಂದರದಾಸರು
ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು