ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು
ಸತ್ಯವರ ಯತಿಗಳ ಸ್ತೋತ್ರ ಮೂರ್ತಿ ಪ ಅಂದು ನರಹರಿ ಯತಿಯು ತಂದದ್ದು ನಾ ಕರ್ಣ-ದಿಂದ ಕೇಳಿ ಬಲ್ಲೆ ನಾ ಕಂಡದ್ದು ಇಲ್ಲ ||ಇಂದೆಮ್ಮ ಗುರು ಸತ್ಯಸಂಧ ಸುತರಿಗೊಲಿದುಬಂದ ರಾಮನ ಕಣ್ಣಿಂದ ಕಂಡೇ 1 ಅವರೊಯ್ದರಿವರೊಯ್ದರೆಂಬ ಮಾತುಗಳ್ ಪುಸಿಅವನ ಸತಿಯು ತನ್ನ ತವರು ಮನೆಗೆ ||ತವಕದಿಂದಲಿ ಕರದೊಯ್ಯೆ ಗುರುಗಳ ತಪಕೇಭುವನ ತಲ್ಲಣಿಸಲು ಭುವನೇಶ ಬಂದ 2 ಆಗ ಶ್ರೀ ರಘುನಾಥ ಯೋಗಿಗೊಲಿದುಸಾಗಿ ಬಂದುದು ನಾ ಕೇಳಿ ಬಲ್ಲೆ ಈ ನ- ||ಮ್ಮ ಗುರು ಸತ್ಯವರ ಯೋಗಿಗೊಲಿದು ರಾಮಬೇಗ ಬಂದುದು ಚೆನ್ನಾಗಿ ಕಣ್ಣಿಲಿ ಕಂಡೆ 3 ನಾಮಗೊಂಡಲು ಈ ಭೂಮಿದೇವಿ ಇಲ್ಲಿತಾ ಮಗಳ ಅಳಿಯನ್ನ ಕರೆದು ಒಯ್ದು ||ಪಾಮರರಿಗೆ ಪೋದರೆಂದೆಂಬ ಭ್ರಮೆಯ ತೋರಿಈ ಮುನಿಯ ಮಾನಸ ಹಂಸನಾಗಿದ್ದ 4 ಒಂದು ಮಾಸವುಪವಾಸ ಮಾಡಿದವರ್ಗೆಬಂದೊದಗುವ ಜಗದೊಳಗೆ ಖ್ಯಾತ ||ಸಂದೇಹವಿಲ್ಲದೆ ಅನಶನ ವ್ರತವನ್ನುಒಂದು ತಿಂಗಳು ಮಾಡಿ ಇಂದಿರೇಶನ ತಂದ 5 ನಳನಾಮ ಸಂವತ್ಸರ ಫಾಲ್ಗುಣ ಬಹುಳ ದ್ವಾದಶಿನಳಿನಾಕ್ಷ ರಾಮಸ್ವಾಮಿಯು ಹೊರಟು ||ಖಳರ ಖಂಡಿಸಿ ತಾನು ಇವರ ಭಾವಕೆ ಮೆಚ್ಚಿಲಲನೆ ಸಹಿತವಾಗಿ ಭುವನೇಶ ಬಂದ6 ಗಂಗಾದಿ ಸಕಲ ತೀರ್ಥಗಳಲ್ಲಿ ಮಿಂದು ಶ್ರೀರಂಗಾದಿಯಲ್ಲಿ ಮೋಹನ ವಿಠಲನ್ನ ||ಸಂಗೀತೆಗೆ ಸರ್ವದಾಧಿಕ ಫಲಸಂಘಟಿಸುವದು ಸಜ್ಜನರು ಕೇಳಿ 7
--------------
ಮೋಹನದಾಸರು
ಪೊರೆಯೊ ಶಂಕರಾ | ಕರುಣಾ ಸಾಗರ |ದುರಿತಸಂಹರ | ಶಿವೆ ಮನೋಹರ ಪಕರಿಚರ್ಮಾಂಬರ |ಪೊರೆದಿಗಂಬರ ||ಗರಳಕಂಧರ | ಚಂದ್ರಶೇಖರ 1ನಿಟಿಲನೇತ್ರನೆ | ಜಟಾಧಾರನೆ |ನಟ ಮಹೇಶನೇ | ಸ್ಮರಿಪೆ ನಿನ್ನನೆ 2ವೃಷಭವಾಹನಾ | ಭಸ್ಮಲೇಪನ |ಪಶುಪತೀಶನಾ | ನುತಿಸೋ ಅನುದಿನ3ಉರಗಕುಂಡಲ|ನರರುಂಡಮಾಲ |ಕರದೊಳ್ ತ್ರಿಶೂಲ | ಕೈಲಾಸ ಗಿರಿಪಾಲ 4ಅಂಧಕಗಜಾಸುರ | ರೆಂದೆಂಬ ದುರುಳರ |ಹೊಂದಿಸಿ ತ್ರಿಪುರರ | ಜಗದಿ ಮೆರೆದನೀಶ್ವರ5ದೇವ ದೇವೇಶನಾ | ಸೇವಿಸುತಿರೆ ಮನ |ಕಾಯ್ವನನುದಿನ | ಗೋವಿಂದದಾಸನ 6
--------------
ಗೋವಿಂದದಾಸ
ಬರಿದೆ ಹೋಯಿತು ಹೊತ್ತು - ಹರಿಯೆ |ಶರೀರವೆ ಸ್ಥಿರವೆಂದು ಮರೆತು ನಾನಿದ್ದೆನೆ ಪಆಸೆಯೆಂಬುದು ಎನ್ನ ಕ್ಲೇಶಪಡಿಸುತಿದೆ |ಗಾಸಿಯಾದೆನೊ ಹರಿಯೆ ||ಶೇಷಶಯನನು ನೀನು ನಿನ್ನ ನಂಬಿದೆ ನಾನು |ನಾಶವಾಯಿತು ದಿನ ಮೋಸ ಹೋದೆನಯ್ಯ 1ಸತಿಸುತರೆಂದೆಂಬ ಅತಿ ಭ್ರಾಂತಿಗೊಳಗಾದೆ |ಮತಿಹೀನ ನಾನಾದೆನೊ ||ಸತತ ನಿರಂತರ ಜಡದೇಹ ನಾನಾದೆ |ರತಿಗೆಳೆಯುತಿದೆ ಮನಸು ಹರಿಸರ್ವೋತ್ತಮನೆ 2ಪರರ ಸೇವೆಯ ಮಾಡಿ ಪರರನೆ ಕೊಂಡಾಡಿ |ಮರೆತೆನೊ ನಿನ್ನ ಧ್ಯಾನ |ಕರುಣದಿಂದಲಿ ಎನ್ನ ಕಾಯ್ದು ನೀ ಸಲಹಯ್ಯ |ಪುರಂದರವಿಠಲ ನಿನ್ನನೆ ನಂಬಿದೆ ನಾನು3
--------------
ಪುರಂದರದಾಸರು
ಹಂಗಿಗನಾಗಬೇಡಾ | ಏ ಮನವೇ | ಹಂಗಿಗನಾಗಬೇಡಾ |ಆ ಯಮನಿಗೆ ಹಂಗಿಗನಾಗಬೇಡಾಪಕಾಮಕ್ರೋಧವು ಲೋಭಮದ ಮಾತ್ಸರ್ಯಗಳೆಂಬ |ವ್ಯಾಮೋಹಾದಿಗಳಿಗೆ ಸಿಲುಕಿ ಸುಮ್ಮನೆ ನೀನು1ಪರದಾರಾಂಶದಿ ಮನ | ವಿರಿಸಿ ಕಾಮಾದಿ ವ್ಯರ್ಥ |ಗುರುಹಿರಿಯರಜರೆ| ದಾಡಿ ಗರ್ವದಿ ನೀನು2ಸತಿಸುತರೆಂದೆಂಬ | ಮೋಹಪಾಶಕೆ ಸಿಕ್ಕಿ |ಅತಿಥಿ ಸತ್ಕಾರ ಮಾಡದೆ | ಲೋಭತ್ವದಿ ನೀನು3ಧರಣಿ ದಾನಾದಿಗಳ | ತನು ಶಕ್ತಿ ಮದದಿಂದ |ಪರರಿಗೆ ಕೇಡನ್ನೆ ಬಗೆವ ಮತ್ಸರದಿ ನೀ4ನೆಂಟರಿಷ್ಟರು ಸರ್ವ | ಮಂದಿ ಸೇವಕರೆಂದು |ತುಂಟತನದಿ ಗೋ|ವಿಂದನಾ ಪಾದಮರತು ನೀ5<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾಪಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
--------------
ಗೋವಿಂದದಾಸ